
ಆ್ಯಂಕರ್ ಅನುಶ್ರೀ (Anushree) ಅವರ ವಿವಾಹ ಇತ್ತೀಚೆಗೆ ನೆರವೇರಿದೆ. ಐಟಿ ಉದ್ಯೋಗಿ ರೋಷನ್ ಅವರ ಜೊತೆ ಅನುಶ್ರೀ ಅವರು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇಬ್ಬರೂ ಅಪ್ಪು ಅಭಿಮಾನಿಗಳು. ಪುನೀತ್ ರಾಜ್ಕುಮಾರ್ ಮೇಲೆ ಇವರಿಗೆ ವಿಶೇಷ ಪ್ರೀತಿ ಇದೆ. ಈಗ ಇವರಿಗೆ ಬೆಲೆ ಕಟ್ಟಲಾಗದ ಉಡುಗೊರೆ ಒಂದು ಸಿಕ್ಕಿದೆ. ಇದನ್ನು ನೋಡಿ ಅನುಶ್ರೀ ಅವರು ಭಾವುಕರಾಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.
ಅನುಶ್ರೀ ಅವರು ಆಗಸ್ಟ್ 28ರಂದು ಬೆಂಗಳೂರಿನ ಹೊರ ವಲಯದಲ್ಲಿರೋ ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ನಡೆದಿದೆ. ಆಪ್ತರು ಹಾಗೂ ಗೆಳೆಯರು ಮಾತ್ರ ವಿವಾಹದಲ್ಲಿ ಭಾಗಿ ಆಗಿದ್ದರು. ಅನುಶ್ರೀ ಹಾಗೂ ರೋಷನ್ ಇಬ್ಬರೂ ಅಪ್ಪು ಅಭಿಮಾನಿಗಳಾಗಿರುವುದರಿಂದ ಅಲ್ಲಿ ಪುನೀತ್ ಫೋಟೋ ಇಟ್ಟು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಇದು ಇವರ ಅಭಿಮಾನಕ್ಕೆ ಸಾಕ್ಷಿ ಆಗಿತ್ತು.
ಈಗ ಅನುಶ್ರೀ ಅವರು ಭಾವುಕರಾಗುವಂತಹ ಘಟನೆ ಒಂದು ನಡೆದಿದೆ. ಅನುಶ್ರೀ ಹಾಗೂ ರೋಷನ್ ಮಧ್ಯದಲ್ಲಿ ಅಪ್ಪು ಇರುವ ರೀತಿಯಲ್ಲಿ ಫೋಟೋನ ಎಡಿಟ್ ಮಾಡಲಾಗಿದೆ. ಇದನ್ನು ಅನುಶ್ರೀ ಅವರಿಗೆ ನೀಡಲಾಗಿದೆ. ಫೋಟೋ ನೋಡಿದ ಬಳಿಕ ಅನುಶ್ರೀ ಅವರಿಗೆ ಖುಷಿ ಆಗಿದೆ. ಅಲ್ಲದೆ, ಅವರು ಭಾವುಕ ಕೂಡ ಆದರು. ಅಪ್ಪು ಯೂತ್ ಬ್ರಿಗೇಡ್ ಈ ಗಿಫ್ಟ್ನ ಕೊಟ್ಟಿದೆ.
ಇದನ್ನೂ ಓದಿ: ‘ಅಪ್ಪು ನಮ್ಮನ್ನು ಸೇರಿಸಿದ್ರು’; ವಿವಾಹದ ಬಳಿಕ ಮೊದಲ ರಿಯಾಕ್ಷನ್ ಕೊಟ್ಟ ಅನುಶ್ರೀ
ಅನುಶ್ರೀ ಅವರ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಶಿವರಾಜ್ಕುಮಾರ್, ಅರ್ಜುನ್ ಜನ್ಯ, ವಿಜಯ್ ರಾಘವೇಂದ್ರ, ವಿಜಯ್ ಪ್ರಕಾಶ್, ಡಾಲಿ ಧನಂಜಯ್ ಸೇರಿದಂತೆ ಅನೇಕರು ವಿವಾಹಕ್ಕೆ ಆಗಮಿಸಿ ದಂಪತಿಗೆ ಹಾರೈಸಿದ್ದಾರೆ. ಮದುವೆಯ ವಿಡಿಯೋಗಳನ್ನು ಅನುಶ್ರೀ ಅವರು ಹಂಚಿಕೊಳ್ಳುತ್ತಿದ್ದಾರೆ. ಅನುಶ್ರೀ ಅವರು ಮದುವೆ ಬಳಿಕವೂ ತಮ್ಮ ಕೆಲಸವನ್ನು ಮುಂದುವರಿಸಲಿದ್ದಾರೆ. ವಿವಿಧ ಕಾರ್ಯಕ್ರಮಗಳು ಹಾಗೂ ಶೋಗಳನ್ನು ಅವರು ಹೋಸ್ಟ್ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:57 am, Sat, 30 August 25