‘ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ?’ ದಕ್ಷಿಣ ಭಾರತದ ನಿರ್ಮಾಪಕನ ನಿಜಮುಖ ಬಯಲು ಮಾಡಿದ ಬಾಲಿವುಡ್​ ನಟಿ

ದಕ್ಷಿಣ ಭಾರತದ ನಿರ್ಮಾಪಕ ನನಗೆ ಕರೆ ಮಾಡಿ ಸಿನಿಮಾ ಬಗ್ಗೆ ಮಾತನಾಡಬೇಕು ಎಂದರು. ಹೋಟೆಲ್​ ಒಂದರಲ್ಲಿ ಭೇಟಿ ಮಾಡೋಕೆ ಇಬ್ಬರೂ ನಿರ್ಧರಿಸಿದೆವು. ಆದರೆ, ನಿರ್ಮಾಪಕ ರೂಂಗೆ ಬರುವಂತೆ ಕರೆದಿದ್ದರು ಎಂದು ನೀತಾ ಹೇಳಿಕೊಂಡಿದ್ದಾರೆ.

‘ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ?’ ದಕ್ಷಿಣ ಭಾರತದ ನಿರ್ಮಾಪಕನ ನಿಜಮುಖ ಬಯಲು ಮಾಡಿದ ಬಾಲಿವುಡ್​ ನಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 17, 2021 | 8:15 PM

ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​ ಒಂದು ಪಿಡುಗಿನಂತೆ ಕಾಡುತ್ತಿದೆ. ಅನೇಕರು ಈ ಬಗ್ಗೆ ಮಾತನಾಡಿದರೆ, ಇನ್ನೂ ಕೆಲವರು ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಬಾಲಿವುಡ್​ ಹಿರಿಯ ನಟಿ ನೀನಾ ಗುಪ್ತಾ ಇತ್ತೀಚೆಗೆ ಬರೆದುಕೊಂಡಿರುವ ‘ಸಚ್​ ಕಹೂ ತೋ’ ಆಟೋಬಯೋಗ್ರಫಿಯಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮಗಾದ ಕಾಸ್ಟಿಂಗ್ ಕೌಚ್​ ವಿಚಾರದ ಬಗ್ಗೆಯೂ ಬರೆದುಕೊಂಡಿದ್ದಾರೆ.

‘ದಕ್ಷಿಣ ಭಾರತದ ನಿರ್ಮಾಪಕ ನನಗೆ ಕರೆ ಮಾಡಿ ಸಿನಿಮಾ ಬಗ್ಗೆ ಮಾತನಾಡಬೇಕು ಎಂದರು. ಹೋಟೆಲ್​ ಒಂದರಲ್ಲಿ ಭೇಟಿ ಮಾಡೋಕೆ ಇಬ್ಬರೂ ನಿರ್ಧರಿಸಿದೆವು. ಆದರೆ, ನಿರ್ಮಾಪಕ ರೂಂಗೆ ಬರುವಂತೆ ಕರೆದಿದ್ದರು. ಆಗ ನನಗೆ ಅನುಮಾನ ಹುಟ್ಟಿಕೊಂಡಿತ್ತು. ನನ್ನ ಒಳಮನಸ್ಸು ಕೆಟ್ಟದ್ದನ್ನು ಊಹಿಸುತ್ತಿತ್ತು. ನಾನು ಅವರಿಗೆ ಕೆಳಗೆ ಬರುವಂತೆ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಸಿಕ್ಕ ಅವಕಾಶ ಕೈ ತಪ್ಪಿದರೆ ಎನ್ನುವ ಭಯ ಕಾಡಿತು. ಹೀಗಾಗಿ ಅವರಿದ್ದ ರೂಂಗೆ ತೆರಳಿದೆ’ ಎಂದು ನೀನಾ ಬರೆದುಕೊಂಡಿದ್ದಾರೆ.

‘ನನ್ನ ಪಾತ್ರದ ಬಗ್ಗೆ ಕೇಳಿದೆ. ನಿಮ್ಮದು ಹೀರೋಯಿನ್​ ಗೆಳತಿಯ ಪಾತ್ರ ಎನ್ನುವ ಉತ್ತರ ಆ ಕಡೆಯಿಂದ ಬಂತು. ನನಗೆ ಆ ಪಾತ್ರದಲ್ಲಿ ತೂಕ ಇಲ್ಲ ಎನಿಸಿತು. ಹೀಗಾಗಿ, ನಾನು ಹೊರಡುತ್ತೇನೆ. ನನ್ನ ಗೆಳತಿ ಕಾಯುತ್ತಿದ್ದಾಳೆ ಎಂದೆ. ‘ಎಲ್ಲಿಗೆ? ನೀನು ನನ್ನೊಂದಿಗೆ ರಾತ್ರಿ ಕಳೆಯುವುದಿಲ್ಲವೇ’ ಎಂದು ಅವರು ಪ್ರಶ್ನೆ ಮಾಡಿದರು. ಯಾರೋ ಹಿಮಗಡ್ಡೆಯನ್ನು ತಂದು ನನ್ನ ತಲೆಗೆ ಹಾಕಿದಂತೆ ಭಾಸವಾಯಿತು. ನನ್ನ ಮುಖದ ಭಯ ಆತನಿಗೆ ಅರ್ಥವಾಯಿತು ಎನಿಸುತ್ತದೆ. ನಿರ್ಮಾಪಕ ನನ್ನ ಬ್ಯಾಗ್​ ನನಗೆ ನೀಡಿ, ಒತ್ತಾಯ ಪೂರ್ವಕವಾಗಿ ನಾನು ಎನನ್ನೂ ಮಾಡುವುದಿಲ್ಲ ಎಂದ. ನಾನು ಅಲ್ಲಿಂದ ಓಡಿ ಬಂದೆ’ ಎಂದು ನೀನಾ ಕಾಸ್ಟಿಂಗ್​ ಕೌಚ್​ ಅನುಭವ ವಿವರಿಸಿದ್ದಾರೆ.

ಹಿರಿಯ ನಟಿ ನೀನಾ ಗುಪ್ತಾ ಅವರು 1980ರಲ್ಲಿ ಮಾಜಿ ಕ್ರಿಕೆಟಿಗ ವಿವ್​ ರಿಚರ್ಡ್ಸ್​ ಜತೆ ಪ್ರೀತಿಯಲ್ಲಿದ್ದರು. ಈ ವೇಳೆ ನೀನಾ ಗುಪ್ತಾ ಗರ್ಭ ಧರಿಸಿದ್ದರು. ಆಗ ಅವರ ಗೆಳೆಯ ಸತೀಶ್​ ಕೌಶಿಕ್​ ಮದುವೆ ಆಗೋಕೆ ಮುಂದೆ ಬಂದಿದ್ದರಂತೆ. ಮಗುವಿಗೆ ನಾನು ತಂದೆ ಆಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ, ಈ ಮನವಿಯನ್ನು ನೀನಾ ತಿರಸ್ಕರಿಸಿದ್ದರು. ಈ ಬಗ್ಗೆಯೂ ನೀನಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

1982ರಲ್ಲೇ ನೀನಾ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಈ ಘಟನೆ ನಡೆದ ನಂತರವೂ ಚಿತ್ರರಂಗದಲ್ಲಿ ಮುಂದುವರಿದರು. ಈಗಲೂ ಸಾಕಷ್ಟು ಪೋಷಕ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಮೂರು ಚಿತ್ರಗಳು ಅವರ ಕೈಯಲ್ಲಿವೆ. ಇದಲ್ಲದೆ, ಕೆಲ ವೆಬ್​ ಸೀರಿಸ್​ಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ಕ್ರಿಕೆಟಿಗನ ಜತೆಗಿನ ಸಂಬಂಧದಿಂದ ಬಾಲಿವುಡ್ ನಟಿಗೆ ಮಗು; ನಾನು ತಂದೆ ಆಗ್ತೀನಿ ಎಂದು ಮುಂದೆ ಬಂದಿದ್ದ ಗೆಳೆಯ

Published On - 8:15 pm, Thu, 17 June 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ