ಅಫ್ಘಾನ್​ ಕ್ರಿಕೆಟರ್​ ಜತೆ ಮದುವೆಗೆ ಸಿದ್ಧವಾಗಿದ್ದ ಬಿಗ್​ ಬಾಸ್​ ಸ್ಪರ್ಧಿ; ತಾಲಿಬಾನ್​ ಭಯದಿಂದ ಸಂಬಂಧಕ್ಕೆ ಎಳ್ಳು-ನೀರು

ಹಿಂದಿ ಕಿರುತೆರೆಯ ಹಲವು ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಆರ್ಶಿ ಖಾನ್​ ಫೇಮಸ್​ ಆಗಿದ್ದಾರೆ. ಬಿಗ್​ ಬಾಸ್​ ಸೀಸನ್​ 11ರಲ್ಲೂ ಅವರು ಭಾಗವಹಿಸಿದ್ದರು. ಅವರ ಮದುವೆಯ ಕನಸು ಈಗ ಭಗ್ನವಾಗಿದೆ.

ಅಫ್ಘಾನ್​ ಕ್ರಿಕೆಟರ್​ ಜತೆ ಮದುವೆಗೆ ಸಿದ್ಧವಾಗಿದ್ದ ಬಿಗ್​ ಬಾಸ್​ ಸ್ಪರ್ಧಿ; ತಾಲಿಬಾನ್​ ಭಯದಿಂದ ಸಂಬಂಧಕ್ಕೆ ಎಳ್ಳು-ನೀರು
ನಟಿ ಆರ್ಶಿ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 23, 2021 | 3:46 PM

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಹಿಡಿತಕ್ಕೆ ಪಡೆದ ನಂತರ ಅಲ್ಲಿನ ವಾತಾವರಣ ಹದಗೆಟ್ಟಿದೆ. ಉಗ್ರರ ಕೈಯಲ್ಲಿ ಅಫ್ಘಾನಿಸ್ತಾನ ನಲುಗುತ್ತಿದೆ. ಇದು ಬೇರೆ ದೇಶದಲ್ಲಿ ಇರುವ ಜನರ ಮೇಲೂ ಪರಿಣಾಮ ಬೀರಿದೆ. ಆಫ್ಘನ್​ ಜೊತೆ ವ್ಯಾಪಾರ-ವಹಿವಾಟು, ಸ್ನೇಹ-ಸಂಬಂಧ ಹೊಂದಿದ್ದ ಎಲ್ಲರೂ ಈಗ ಚಿಂತೆಗೀಡಾಗಿದ್ದಾರೆ. ಅದೇ ರೀತಿ ಖ್ಯಾತ ನಟಿ ಆರ್ಶಿ ಖಾನ್​ ಕೂಡ ಗೊಂದಲಕ್ಕೆ ಸಿಲುಕಿದ್ದಾರೆ. ಅಫ್ಘಾನಿಸ್ತಾನದ ಕ್ರಿಕೆಟ್​ ಆಟಗಾರರೊಬ್ಬರ ಜೊತೆ ಮದುವೆ ಆಗಲು ಆರ್ಶಿ ಖಾನ್​ ನಿರ್ಧರಿಸಿದ್ದರು. ಆದರೆ ಅದು ಈಗ ತಪ್ಪಿಹೋಗುವ ಸಂಭವ ಎದುರಾಗಿದೆ. ಆ ಬಗ್ಗೆ ಸ್ವತಃ ಆರ್ಶಿ ಖಾನ್​ ಮಾತನಾಡಿದ್ದಾರೆ.

ತಾಲಿಬಾನಿಗಳು ಆಫ್ಘನ್​ ಅನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಅಲ್ಲಿನ ಕ್ರಿಕೆಟರ್​ ಒಬ್ಬರ ಜೊತೆ ಆರ್ಶಿಯ ಮದುವೆ ಮಾಡಬೇಕು ಎಂದು ಅವರ ತಂದೆ ನಿರ್ಧರಿಸಿದ್ದರು. ಇದೇ ಅಕ್ಟೋಬರ್​ನಲ್ಲಿ ನಿಶ್ಚಿತಾರ್ಥ ನೆರವೇರಿಸಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಅಪ್ಘಾನಿಸ್ತಾನದ ಪರಿಸ್ಥಿತಿ ನೋಡಿದರೆ ಅಲ್ಲಿಯ ಹುಡುಗನಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡುವುದು ಸೂಕ್ತವಲ್ಲ ಎಂದು ಆರ್ಶಿ ಖಾನ್​ ಪೋಷಕರು ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಆರ್ಶಿಗೆ ಭಾರತೀಯ ಹುಡುಗನನ್ನೇ ಹುಡುಕುವ ಸಾಧ್ಯತೆ ದಟ್ಟವಾಗಿದೆ.

‘ಆತ ಆಫ್ಘನ್​ನ ಕ್ರಿಕೆಟರ್​. ನಮ್ಮ ತಂದೆಯ ಸ್ನೇಹಿತರ ಮಗ. ನಮ್ಮ ಕುಟುಂಬದ ಪೂರ್ವಜರು ಇದ್ದಿದ್ದು ಕೂಡ ಅಫ್ಘಾನಿಸ್ತಾನದಲ್ಲಿ. ನಾವು ಅಫ್ಘಾನಿ ಪಠಾಣರು. ನಮ್ಮ ತಾತ ಆಫ್ಘನ್​ನಿಂದ ಭೊಪಾಲ್​ಗೆ ವಲಸೆ ಬಂದು ಜೈಲರ್​ ಆಗಿದ್ದರು. ಆದರೆ ನನ್ನ ತಂದೆ-ತಾಯಿ ರೀತಿ ನಾನು ಅಪ್ಪಟ ಭಾರತೀಯಳು. ಈಗ ನನ್ನ ಪೋಷಕರು ನನಗೆ ಭಾರತೀಯ ಹುಡುಗನನ್ನೇ ಹುಡುಕುತ್ತಾರೆ ಎಂಬುದು ನನಗೆ ಖಾತ್ರಿ ಆಗಿದೆ’ ಎಂದು ಆರ್ಶಿ ಖಾನ್​ ಹೇಳಿದ್ದಾರೆ.

ಹಿಂದಿ ಕಿರುತೆರೆಯ ಹಲವು ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಆರ್ಶಿ ಖಾನ್​ ಫೇಮಸ್​ ಆಗಿದ್ದಾರೆ. ಬಿಗ್​ ಬಾಸ್​ ಸೀಸನ್​ 11ರಲ್ಲೂ ಅವರು ಭಾಗವಹಿಸಿದ್ದರು. ನಂತರ ಸೀಸನ್​ 14ರಲ್ಲಿ ಚಾಲೆಂಜರ್​ ಆಗಿ ದೊಡ್ಮನೆಗೆ ಮರುಪ್ರವೇಶ ಮಾಡಿದ್ದರು. ಅನೇಕ ಮ್ಯೂಸಿಕ್​ ವಿಡಿಯೋಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಆಫ್ಘನ್​ ಹುಡುಗನ ಜೊತೆ ಮದುವೆ ಆಗಬೇಕು ಎಂದುಕೊಂಡಿದ್ದ ಅವರ ಆಸೆಗೆ ಈಗ ಎಳ್ಳು-ನೀರು ಬಿಡಬೇಕಾದ ಸಂದರ್ಭ ಬಂದಿದೆ.

ಇದನ್ನೂ ಓದಿ:

ಅಫ್ಘನ್​ಗಳು ಪ್ರಾಣಭಯದಿಂದ ದೇಶಬಿಟ್ಟು ಪಲಾಯನ ಮಾಡುತ್ತಿದ್ದಾರೆ, ಅಲ್ಲಿನ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ

ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಬಂದ ಕನ್ನಡಿಗನ ಮನದಾಳದ ಮಾತು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ