ಹೈದರಾಬಾದ್ಗೆ ಬಂದ ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ಅಕ್ಕಿನೇನಿ ನಾಗಾರ್ಜುನ; ಧನ್ಯವಾದ ಹೇಳಿದ ನಟಿ
ಪರಭಾಷೆಯಲ್ಲಿ ಕನ್ನಡದ ನಟಿಯರಿಗೆ ಸಾಕಷ್ಟು ಗೌರವ ಹಾಗೂ ಪ್ರೀತಿ ಸಿಗುತ್ತಿದೆ. ಅಲ್ಲಿಯೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗುತ್ತಿದೆ. ಆಶಿಕಾ ರಂಗನಾಥ್ ಅವರಿಗೂ ಈ ಅನುಭವ ಆಗಿದೆ.
ಕನ್ನಡದ ನಟಿಯರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು, ಹಿಂದಿಯಲ್ಲಿ ದೊಡ್ಡ ಗೆಲುವು ಸಿಗುತ್ತಿದೆ. ಶ್ರದ್ಧಾ ಶ್ರೀನಾಥ್, ಶ್ರೀಲೀಲಾ (Srileela), ಮೊದಲಾದವರು ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಕನ್ನಡದ ನಟಿ ಆಶಿಕಾ ರಂಗನಾಥ್ ಅವರ ಎರಡನೇ ತೆಲುಗು ಸಿನಿಮಾ ‘ನಾ ಸಾಮಿ ರಂಗ’ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಅವರು ತಮ್ಮನ್ನು ಯಾವ ರೀತಿ ಟ್ರೀಟ್ ಮಾಡಿದರು ಎಂಬುದನ್ನು ಅವರು ವಿವರಿಸಿದ್ದಾರೆ.
ಪರಭಾಷೆಯಲ್ಲಿ ಕನ್ನಡದ ನಟಿಯರಿಗೆ ಸಾಕಷ್ಟು ಗೌರವ ಹಾಗೂ ಪ್ರೀತಿ ಸಿಗುತ್ತಿದೆ. ಅಲ್ಲಿಯೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗುತ್ತಿದೆ. ಆಶಿಕಾ ರಂಗನಾಥ್ ಅವರಿಗೂ ಈ ಅನುಭವ ಆಗಿದೆ. ‘ನಾ ಸಾಮಿ ರಂಗ’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ನಡೆದಿದೆ. ವೇದಿಕೆ ಮೇಲೆ ಹಲವು ವಿಚಾರಗಳು ರಿವೀಲ್ ಆಗಿವೆ. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆಶಿಕಾಗೆ ಮನೆಯ ಊಟವೇ ಸಪ್ಲೈ ಆಗಿದೆ.
‘ನಾ ಸಾಮಿ ರಂಗ’ ಸಿನಿಮಾದ ಶೂಟಿಂಗ್ಗಾಗಿ ಆಶಿಕಾ ಹಲವು ಬಾರಿ ಹೈದರಾಬಾದ್ಗೆ ತೆರಳಿದ್ದಾರೆ. ಈ ವೇಳೆ ಅವರು ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದರು. ಫಿಟ್ನೆಸ್ ಕಾಯ್ದುಕೊಳ್ಳಲು ಸ್ಟ್ರಿಕ್ಟ್ ಆಗಿ ಅವರು ಡಯಟ್ ಫಾಲೋ ಮಾಡುತ್ತಿದ್ದರು. ಅವರಿಗೆ ಹೋಟೆಲ್ ಊಟ ಅಡ್ಜಸ್ಟ್ ಆಗುತ್ತಿರಲಿಲ್ಲ. ಹೀಗಾಗಿ, ಅವರಿಗೆ ಆರಂಭದಲ್ಲಿ ಇದು ಕಷ್ಟ ಎನಿಸಿತು.
ಇದನ್ನು ತಿಳಿದ ಅಕ್ಕಿನೇನಿ ನಾಗಾರ್ಜುನ ಅವರು ಆಶಿಕಾ ಹೈದರಾಬಾದ್ನಲ್ಲಿ ಇದ್ದಷ್ಟೂ ದಿನ ಮನೆಯ ಊಟವನ್ನೇ ಕಳುಹಿಸಿಕೊಟ್ಟರು. ಪ್ರೀರಿಲೀಸ್ ಇವೆಂಟ್ ವೇದಿಕೆ ಮೇಲೆ ಆಶಿಕಾ ಅವರು ಇದಕ್ಕೆ ಧನ್ಯವಾದ ಹೇಳಿದ್ದಾರೆ. ‘ನನಗೆ ಎರಡನೇ ಮನೆ ಸಿಕ್ಕಿದೆ’ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ. ಪ್ರೀ ರಿಲೀಸ್ ಇವೆಂಟ್ನಲ್ಲಿ ಆಶಿಕಾ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ವೇದಿಕೆ ಮೇಲೆ ಆಶಿಕಾ ರಂಗನಾಥ್ ಡ್ಯಾನ್ಸ್ ನೋಡಿ ಫಿದಾ ಆದ ತೆಲುಗು ಮಂದಿ
ಆಶಿಕಾ ರಂಗನಾಥ್ ಅವರು ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೊದಲು ‘ಅಮಿಗೋಸ್’ ಹೆಸರಿನ ತೆಲುಗು ಸಿನಿಮಾದಲ್ಲಿ ಅವರು ನಟಿಸಿದ್ದರು. ಈಗ ಅವರ ಎರಡನೇ ತೆಲುಗು ಸಿನಿಮಾ ‘ನಾ ಸಾಮಿ ರಂಗ’ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ಬಿಡುಗಡೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ