AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಹೊಸ ಹಾಡು ರಿಲೀಸ್ ಮಾಡಿದ ರ‍್ಯಾಪರ್ ಬಾದ್‌ಶಾ

ಮದುವೆ ಆಗಿ ಕೇವಲ 5 ತಿಂಗಳು ಕಳೆಯುವುದರಲ್ಲಿ ರ‍್ಯಾಪರ್ ಬಾದ್‌ಶಾ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಪತ್ನಿ ಇಶಾ ರಿಖಿ ಅವರಿಗೆ ಬಾದ್‌ಶಾ ವಿಚ್ಛೇದನ ನೀಡಿದ್ದಾರೆ. ಡಿವೋರ್ಸ್ ಘೋಷಿಸಿದ ದಿನವೇ ಬಾದ್‌ಶಾ ಅವರು ಹೊಸ ಹಾಡು ರಿಲೀಸ್ ಮಾಡಿದ್ದಾರೆ ಎಂಬುದು ಅಚ್ಚರಿಗೆ ಕಾರಣ ಆಗಿದೆ.

ವಿಚ್ಛೇದನ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಹೊಸ ಹಾಡು ರಿಲೀಸ್ ಮಾಡಿದ ರ‍್ಯಾಪರ್ ಬಾದ್‌ಶಾ
Badshah, Isha Rikhi
ಮದನ್​ ಕುಮಾರ್​
|

Updated on: Sep 01, 2026 | 3:49 PM

Share

ಪ್ರಸಿದ್ಧ ರ‍್ಯಾಪರ್ ಬಾದ್‌ಶಾ (Badshah) ಅವರಿಗೆ ಆಗಸ್ಟ್ 31ರಂದು ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ದೊಡ್ಡ ಬೆಳವಣಿಗೆಗಳು ನಡೆದಿವೆ. ಪತ್ನಿ ಇಶಾ ರಿಖಿ (Isha Rikhi) ಅವರೊಂದಿಗೆ ವಿಚ್ಛೇದನ ಪಡೆಯುತ್ತಿರುವುದಾಗಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಬಾದ್‌ಶಾ ಅವರು ತಮ್ಮ ಮೊದಲ ಮರಾಠಿ ಹಿಪ್-ಹಾಪ್ ಹಾಡು ‘ಚಿಮ್ನಾ’ (Chimna) ಬಿಡುಗಡೆ ಮಾಡಿದ್ದಾರೆ. ಬಾದ್‌ಶಾ ಮತ್ತು ಇಶಾ ರಿಖಿ ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿ, 2026ರ ಮಾರ್ಚ್ ತಿಂಗಳಲ್ಲಿ ಸರಳವಾಗಿ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೇವಲ ಐದೇ ತಿಂಗಳಿಗೆ ಇಬ್ಬರೂ ಪರಸ್ಪರ ಒಪ್ಪಂದದ ಮೂಲಕ ಬೇರ್ಪಡಲು ನಿರ್ಧರಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಹೇಳಿಕೆ ಹಂಚಿಕೊಂಡಿರುವ ಅವರು, ‘ನಾನು ಮತ್ತು ಇಶಾ ರಿಖಿ ಪರಸ್ಪರ ಸಮ್ಮತಿಯಿಂದ ಬೇರ್ಪಟ್ಟು, ನಮ್ಮದೇ ಆದ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದೇವೆ. ಗೌರವಪೂರ್ವಕವಾಗಿ ಈ ನಿರ್ಧಾರ ತಗೆದುಕೊಂಡಿದ್ದು, ಈ ಸಮಯದಲ್ಲಿ ಪ್ರತಿಯೊಬ್ಬರೂ ನಮ್ಮ ಖಾಸಗಿತನವನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ. ನಮ್ಮ ಸಂಬಂಧದ ಬಗ್ಗೆ ಯಾವುದೇ ಊಹಾಪೋಹಗಳಿಗೆ ಆಸ್ಪದ ನೀಡದಂತೆ ಕೇಳಿಕೊಳ್ಳುತ್ತೇವೆ. ಈ ವಿಷಯದಲ್ಲಿ ಇದುವೇ ನಮ್ಮ ಕೊನೆಯ ಹೇಳಿಕೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಮರಾಠಿ ಸಂಗೀತ ಕ್ಷೇತ್ರಕ್ಕೆ ಬಾದ್‌ಶಾ ಎಂಟ್ರಿ:

ವೈಯಕ್ತಿಕ ಜೀವನದ ಸುದ್ದಿಯ ನಡುವೆಯೇ, ಬಾದ್‌ಶಾ ಅವರ ‘ಚಿಮ್ನಾ’ ಹಾಡು ಸಂಗೀತ ಪ್ರಿಯರ ಗಮನ ಸೆಳೆದಿದೆ. ಹಿಪ್-ಹಾಪ್ ಶೈಲಿ ಹಾಗೂ ಮಹಾರಾಷ್ಟ್ರದ ಜಾನಪದ ಸೊಗಡಿನ ಮಿಶ್ರಣವಾಗಿರುವ ಈ ಹಾಡಿಗೆ ದಿವ್ಯ ಕುಮಾರ್ ಮತ್ತು ಜಾನಪದ ಕಲಾವಿದ ನಾಗೇಶ್ ಮೋರ್ವೇಕರ್ ಧ್ವನಿಯಾಗಿದ್ದಾರೆ. ನಟಿ ನೇಹಾ ಖಾನ್ ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಕೊಲ್ಹಾಪುರದಲ್ಲಿ ಚಿತ್ರಿತಗೊಂಡಿರುವ ಈ ಮ್ಯೂಸಿಕ್ ವಿಡಿಯೊದಲ್ಲಿ ಮಹಾರಾಷ್ಟ್ರದ ಮಣ್ಣಿನ ಸೊಗಡು, ಸಾಂಪ್ರದಾಯಿಕ ಕುಸ್ತಿ ಅಖಾಡ ಹಾಗೂ ಸ್ಥಳೀಯ ಜೀವನಶೈಲಿಯನ್ನು ನೈಜವಾಗಿ ತೋರಿಸಲಾಗಿದೆ.

ಇದನ್ನೂ ಓದಿ: ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ತಮ್ಮ ಮೊದಲ ಮರಾಠಿ ಹಾಡಿನ ಬಗ್ಗೆ ಮಾತನಾಡಿದ ಬಾದ್‌ಶಾ, ‘ಭಾರತದ ಪ್ರಾದೇಶಿಕ ಸಂಗೀತವು ಅಪಾರ ಸಂಪತ್ತನ್ನು ಹೊಂದಿದೆ. ‘ಚಿಮ್ನಾ’ ಹಾಡು ಮಹಾರಾಷ್ಟ್ರದ ಶ್ರೀಮಂತ ಸಂಸ್ಕೃತಿಗೆ ನಾನು ಸಲ್ಲಿಸಿರುವ ಗೌರವ. ನನ್ನ ಈ ಪ್ರಯತ್ನಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us