ಚಪ್ಪಲಿಯಲ್ಲಿ ಹೊಡೆದುಕೊಂಡ ವಸಿಷ್ಠ ಸಿಂಹ ಸಿನಿಮಾ ನಿರ್ದೇಶಕ

Barbarik Telugu movie director: ವಸಿಷ್ಠ ಸಿಂಹ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಇನ್ನೂ ಕೆಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಬಾರ್ಬರಿಕ್’ ತೆಲುಗು ಸಿನಿಮಾದ ನಿರ್ದೇಶಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದು ತನ್ನ ಚಪ್ಪಲಿಯಲ್ಲಿ ತಾನೇ ಹೊಡೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು?

ಚಪ್ಪಲಿಯಲ್ಲಿ ಹೊಡೆದುಕೊಂಡ ವಸಿಷ್ಠ ಸಿಂಹ ಸಿನಿಮಾ ನಿರ್ದೇಶಕ
Barbarik

Updated on: Sep 02, 2025 | 11:11 AM

ಸಿನಿಮಾ ಪ್ರಚಾರದ ವೇಳೆ ಚಿತ್ರತಂಡ ತಮ್ಮ ಸಿನಿಮಾ ಬಗ್ಗೆ ಬಾಯಿಗೆ ಬಂದಂತೆಲ್ಲ ಹೊಗಳುತ್ತಾರೆ. ಸಿನಿಮಾ ಇಷ್ಟವಾಗಿಲ್ಲವಾದರೆ ಹಣ ವಾಪಸ್ ಕೊಡುತ್ತೇವೆ ಎಂದೆಲ್ಲ ಹೇಳಿದವರೂ ಇದ್ದಾರೆ. ಆದರೆ ಯಾರೂ ಕೊಟ್ಟ ಮಾತು ಉಳಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ನಿರ್ದೇಶಕ ಪ್ರೇಕ್ಷಕರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ತಮ್ಮ ಸಿನಿಮಾ ಇಷ್ಟವಾಗದಿದ್ದರೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳುತ್ತೇನೆ ಎಂದಿದ್ದರು. ಹಾಗೆಯೇ ಮಾಡಿದ್ದಾರೆ.

ವಸಿಷ್ಠ ಸಿಂಹ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಅವರುಗಳು ಪ್ರಧಾನ ಪಾತ್ರದಲ್ಲಿ ನಟಿಸಿದ್ದ ‘ಬಾರ್ಬರಿಕ್’ ಹೆಸರಿನ ತೆಲುಗು ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದೆ. ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನು ನಿರ್ದೇಶಕ ಮೋಹನ್ ಶ್ರೀವತ್ಸ ಇನ್ನಿತರರು ಮಾಡಿದ್ದರು. ಆದರೆ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿಲ್ಲ.

ಸಿನಿಮಾ ಬಿಡುಗಡೆ ಆಗಿ ಕೆಲವು ದಿನಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಸಿನಿಮಾದ ನಿರ್ದೇಶಕ ಮೋಹನ್ ಶ್ರೀವತ್ಸ, ‘ನಾನು ಚಿತ್ರಮಂದಿರಕ್ಕೆ ಹೋಗಿದ್ದೆ ಕೇವಲ 10 ಜನ ಅಲ್ಲಿದ್ದರು. ನಾನೇ ಆ ಸಿನಿಮಾ ನಿರ್ದೇಶಕ ಎಂದು ಹೇಳದೆ ಸಿನಿಮಾ ಹೇಗಿದೆ ಎಂದು ಕೇಳಿದೆ. ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದೇ ಹೇಳಿದರು. ನಾನೇ ಈ ಸಿನಿಮಾ ನಿರ್ದೇಶಕ ಎಂದು ಹೇಳಿದಾಗ ನನ್ನನ್ನು ತಬ್ಬಿಕೊಂಡು ಅಭಿನಂದಿಸಿದರು’ ಎಂದಿದ್ದಾರೆ.

ಇದನ್ನೂ ಓದಿ:ನಾಳೆಯಿಂದ ಎಲ್ಲ ತೆಲುಗು ಸಿನಿಮಾಗಳ ಚಿತ್ರೀಕರಣ ಅಚಾನಕ್ ಬಂದ್

‘ಸಿನಿಮಾ ಚೆನ್ನಾಗಿದ್ದರೂ ಏಕೆ ಜನ ಬರುತ್ತಿಲ್ಲ. ಸಿನಿಮಾ ನೋಡಿ ಇಷ್ಟವಾಗದೇ ಇದ್ದರೆ ಒಪ್ಪಿಕೊಳ್ಳುತ್ತೇನೆ. ಏನೂ ಕಾರಣವೇ ಇಲ್ಲದೆ ಚಿತ್ರಮಂದಿರಕ್ಕೆ ಬರದಿದ್ದರೆ ನನ್ನ ಸಿನಿಮಾ ಹೇಗಿದೆ ಎಂದು ನನಗೆ ಹೇಗೆ ಅರ್ಥವಾಗುತ್ತದೆ. ಅದೇ ಪರಭಾಷೆಯ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತೀರಿ. ಮಲಯಾಳಂ ಸಿನಿಮಾಗಳನ್ನು ನೋಡುತ್ತೀರಿ. ನಮ್ಮದೇ ಭಾಷೆಯ ಒಳ್ಳೆಯ ಸಿನಿಮಾ ಏಕೆ ನೋಡುತ್ತಿಲ್ಲ’ ಎಂದು ಮೋಹನ್ ಪ್ರಶ್ನಿಸಿದ್ದಾರೆ.

‘ನನಗೆ ಏನು ಮಾಡುವುದೋ ತೋಚುತ್ತಿಲ್ಲ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಸಹ ಅನಿಸುತ್ತಿದೆ. ನೀವು ಪರಭಾಷೆ ಸಿನಿಮಾಗಳನ್ನೇ ನೋಡುತ್ತೀನಿ ಎಂದುವುದಾದರೆ ನಾನು ಮಲಯಾಳಂ ಚಿತ್ರರಂಗಕ್ಕೆ ಹೋಗಿ ಅಲ್ಲಿಯೇ ಸಿನಿಮಾ ಮಾಡುತ್ತೇನೆ. ನನ್ನ ಸಿನಿಮಾ ಜನರಿಗೆ ಇಷ್ಟವಾಗದಿದ್ದರೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳುತ್ತೇನೆ ಎಂದಿದ್ದೆ. ಈಗ ಹಾಗೆಯೇ ಮಾಡುತ್ತೇನೆ’ ಎಂದು ಹೇಳಿ ತಮ್ಮ ಚಪ್ಪಲಿಯಲ್ಲಿ ತಾವೇ ಹೊಡೆದುಕೊಂಡಿದ್ದಾರೆ ನಿರ್ದೇಶಕ ಮೋಹನ್ ಶ್ರೀವತ್ಸ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:50 am, Tue, 2 September 25