Puneeth Rajkumar: ಅಭಿಮಾನಿಯ ಮಗುವಿಗೆ ಅಪ್ಪು ಎಂದು ಹೆಸರಿಟ್ಟ ಶಿವಣ್ಣ

Power Star Puneeth Rajkumar: ಈ ಮೂಲಕ ಪ್ರತಿಕ್ಷಣದಲ್ಲೂ ಪುನೀತ್ ರಾಜ್​ಕುಮಾರ್ ಎಂಬ ರಾಜಕುಮಾರನನ್ನು ನೆನೆಯುತ್ತಿದ್ದಾರೆ. ಅಪ್ಪು ಅಮರ ಎಂಬುದನ್ನು ಅಭಿಮಾನಿಗಳು ಪ್ರತಿ ಸಂದರ್ಭದಲ್ಲೂ ನಿರೂಪಿಸುತ್ತಿದ್ದಾರೆ.

Puneeth Rajkumar: ಅಭಿಮಾನಿಯ ಮಗುವಿಗೆ ಅಪ್ಪು ಎಂದು ಹೆಸರಿಟ್ಟ ಶಿವಣ್ಣ
Appu-Shivanna
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 21, 2022 | 12:54 PM

ಕರುನಾಡ ರಾಜರತ್ನ ಪುನೀತ್ ರಾಜ್​ಕುಮಾರ್ (Puneeth Rajkumar) ಭೌತಿಕವಾಗಿ ನಮ್ಮನ್ನಗಲಿರಬಹುದು. ಆದರೆ ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಅಜರಾಮರು ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಬೀದರ್​ನ ಈ ಅಭಿಮಾನಿ. ಅಪ್ಪಟ ಅಪ್ಪು ಅಭಿಮಾನಿಗಳಾಗಿರುವ ಬೀದರ್​ನ ಈ ದಂಪತಿ ಇದೀಗ ಮಗುವಿಗೆ ತಮ್ಮ ನೆಚ್ಚಿನ ನಟನ ಹೆಸರನ್ನು ನಾಮಕರಣ ಮಾಡಿದ್ದಾರೆ. ಅದು ಕೂಡ ಶಿವಣ್ಣನ ಬಾಯಾರೆ ಎಂಬುದು ವಿಶೇಷ.

ಮಗುವಿನೊಂದಿಗೆ ಶಿವರಾಜ್ ಕುಮಾರ್ ಮನೆಗೆ ಬಂದಿದ್ದ ದಂಪತಿಗಳು ತಮ್ಮ ಮನದಾಸೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಮಗುವಿಗೆ ಅಪ್ಪು ಎಂದು ಹೆಸರಿಡಬೇಕೆಂದು ತಮ್ಮ ಬಯಕೆಯನ್ನು ತಿಳಿಸಿದ್ದರು. ಅಲ್ಲದೆ ಈ ನಾಮಕರಣ ಕಾರ್ಯವನ್ನು ನೀವೇ ನೆರವೇರಿಸಿಕೊಡಬೇಕೆಂದು ಶಿವಣ್ಣ ಅವರಲ್ಲಿ ಕೇಳಿಕೊಂಡಿದ್ದಾರೆ.

ಅಪ್ಪು ಅಭಿಮಾನಿಯ ಈ ಮನದಿಂಗಿತವನ್ನು ಕೇಳಿದ ಬಳಿಕ ಶಿವಣ್ಣ ಮಗುವಿಗೆ ಅಪ್ಪು ಅಂತ ಹೆಸರಿಟ್ಟು ಮುತ್ತಿಟ್ಟರು. ಅಲ್ಲದೆ ರಾಜವಂಶದ ಈ ಅಭಿಮಾನಿಗಳಿಗೆ ಆತಿಥ್ಯ ನೀಡಿ ಕಳುಹಿಸಿಕೊಟ್ಟರು. ಇದೀಗ ಶಿವಣ್ಣ ಬಾಯಿಂದ ಅಪ್ಪು ಎಂದು ಕರೆಸಿಕೊಂಡಿರುವ ಪುಟ್ಟ ಪುಟಾಣಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲದೆ ರಾಜರತ್ನನ ಅಭಿಮಾನಿ ದಂಪತಿ ಕೂಡ ಫುಲ್ ಖುಷಿಯಾಗಿದ್ದಾರೆ.

ಇದನ್ನೂ ಓದಿ
Image
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Image
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!

ಅಪ್ಪು ಅಭಿಮಾನಿ ದಂಪತಿ

ಒಟ್ಟಿನಲ್ಲಿ ಭೌತಿಕವಾಗಿ ನಮ್ಮಿಂದ ದೂರವಿರುವ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಮರ ಎಂಬುದನ್ನು ಪ್ರತಿದಿನ ಅಭಿಮಾನಿಗಳು ನಿರೂಪಿಸುತ್ತಾ ಸಾಗುತ್ತಿದ್ದಾರೆ. ಏಕೆಂದರೆ ಕಳೆದ ವರ್ಷ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿ ಕೂಡ ತಮ್ಮ ಮೊದಲನೇ ಮಗುವಿಗೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಿದ್ದರು. ಇನ್ನು ಹಲವು ಅಭಿಮಾನಿಗಳು ಕೂಡ ಅಪ್ಪು ಹೆಸರನ್ನು ತಮ್ಮ ಮಕ್ಕಳಿಗೆ ನಿಕ್ ನೇಮ್ ಆಗಿ ಇರಿಸಿಕೊಂಡಿದ್ದಾರೆ.

ಈ ಮೂಲಕ ಪ್ರತಿಕ್ಷಣದಲ್ಲೂ ಪುನೀತ್ ರಾಜ್​ಕುಮಾರ್ ಎಂಬ ರಾಜಕುಮಾರನನ್ನು ನೆನೆಯುತ್ತಿದ್ದಾರೆ. ಒಟ್ಟಿನಲ್ಲಿ ಅಪ್ಪು ಅಮರ…ಅಜರಾಮರ ಎಂಬುದನ್ನು ಅಭಿಮಾನಿಗಳು ಪ್ರತಿ ಸಂದರ್ಭದಲ್ಲೂ ನಿರೂಪಿಸುತ್ತಿರುವುದು ಅವರು ಗಳಿಸಿದ ಕೀರ್ತಿಗೆ ಪ್ರೀತಿಗೆ ಸಾಕ್ಷಿ ಎನ್ನಬಹುದು.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ