AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Laal Singh Chaddha: ಬಾಯ್ಕಾಟ್ ನಡುವೆಯೂ 100 ಕೋಟಿ ಕಲೆಕ್ಷನ್ ಮಾಡಿದ ಲಾಲ್ ಸಿಂಗ್ ಚಡ್ಡಾ..!

Laal Singh Chaddha Box Office Collection: ಅಮೀರ್ ಖಾನ್ ನಾಯಕನಾಗಿ ನಟಿಸಿದ್ದ ಈ ಹಿಂದಿನ ಚಿತ್ರಗಳಾದ ದಂಗಲ್ ಮೊದಲ ವಾರದಲ್ಲೇ 197.54 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೆಯೇ ಪಿಕೆ ಚಿತ್ರವು ಫಸ್ಟ್ ವೀಕ್​ನಲ್ಲಿ 183.09 ಕೋಟಿ ಬಾಚಿಕೊಂಡಿತ್ತು.

Laal Singh Chaddha: ಬಾಯ್ಕಾಟ್ ನಡುವೆಯೂ 100 ಕೋಟಿ ಕಲೆಕ್ಷನ್ ಮಾಡಿದ ಲಾಲ್ ಸಿಂಗ್ ಚಡ್ಡಾ..!
Aamir Khan-Kareena
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 21, 2022 | 11:05 AM

ಬಾಲಿವುಡ್​ನಲ್ಲಿ ಇತ್ತೀಚೆಗೆ ತೆರೆಕಂಡಿದ್ದ ಅಮೀರ್ ಖಾನ್ (Aamir Khan) ಅಭಿನಯದ ಲಾಲ್ ಸಿಂಗ್ ಚಡ್ಡಾ (Laal Singh Chaddha) ಚಿತ್ರವು ಕೊನೆಗೂ 100 ಕೋಟಿ ಕ್ಲಬ್ ಸೇರಿಕೊಂಡಿದೆ. ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಅದರಲ್ಲೂ ಚಿತ್ರ ಬಿಡುಗಡೆಗೂ ಮುನ್ನ ಕೇಳಿ ಬಂದ ಬಾಯ್ಕಾಟ್ ಅಭಿಯಾನವು ಚಿತ್ರದ ಭರ್ಜರಿ ಓಪನಿಂಗ್​ಗೆ ಭಾರೀ ಹೊಡೆತ ನೀಡಿತು. ಪರಿಣಾಮ ಮೊದಲ ದಿನವೇ ಪ್ರೇಕ್ಷಕರ ಕೊರತೆ ಎದುರಿಸಿತ್ತು. ಅಲ್ಲದೆ ಬಿಡುಗಡೆ ದಿನ ಬಾಕ್ಸಾಫೀಸ್​ನಲ್ಲಿ (Laal Singh Chaddha box office collection) ಗಳಿಸಿದ್ದು ಕೇವಲ 11 ಕೋಟಿ ರೂ. ಮಾತ್ರ. ಇದೀಗ ಚಿತ್ರವು ನಿಧಾನಕ್ಕೆ ಸುಧಾರಿಸಿಕೊಳ್ಳುತ್ತಿದೆ. ಆದರೆ ಇದು ಭಾರತೀಯ ಬಾಕ್ಸಾಫೀಸ್​ನಲ್ಲಿ ಅಲ್ಲ ಎಂಬುದು ವಿಶೇಷ.

ಅಂದರೆ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಭಾರತದಲ್ಲಿ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾದರೂ ಅಮೀರ್ ಖಾನ್ ಅಭಿನಯಕ್ಕೆ ವಿದೇಶದಿಂದ ಬಹುಪರಾಕ್ ಕೇಳಿ ಬರುತ್ತಿದೆ. ಪರಿಣಾಮ ಮೊದಲ 8 ದಿನಗಳಲ್ಲೇ ಚಿತ್ರದ ಕಲೆಕ್ಷನ್ 100 ಕೋಟಿಯನ್ನು ದಾಟಿದೆ. ಭಾರತದಲ್ಲಿ ಮೊದಲ ವಾರದಲ್ಲಿ ಕೇವಲ 59.68 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರವು ವಿದೇಶದಲ್ಲಿ ಒಟ್ಟು 60 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಈ ಮೂಲಕ 8 ದಿನಗಳಲ್ಲಿ 115 ಕೋಟಿಗೂ ಅಧಿಕ ಮೊತ್ತ ಗಳಿಸಿಕೊಂಡಿದೆ.

ಆದರೆ ಅಮೀರ್ ಖಾನ್ ಚಿತ್ರಗಳಿಗೆ ಹೋಲಿಸಿದರೆ ಇದು ಅತ್ಯಂತ ನಿಧಾನಗತಿಯ ಗಳಿಕೆ ಕಾಣುತ್ತಿರುವ ಚಿತ್ರವಾಗಿದೆ. ಅದರಲ್ಲೂ 2000 ರ ಬಳಿಕ ಅಮೀರ್ ಖಾನ್ ಸಿನಿಮಾವೊಂದು ಬಾಕ್ಸಾಫೀಸ್​ನಲ್ಲಿ ಕಲೆಕ್ಷನ್​ನಲ್ಲಿ ಹಿಂದೆ ಉಳಿಯುತ್ತಿರುವುದು ಇದೇ ಮೊದಲು ಎಂದು ಬಾಲಿವುಡ್ ಪಂಡಿತರ ಅಭಿಪ್ರಾಯ.

ಇದನ್ನೂ ಓದಿ
Image
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Image
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!

ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ಒಟ್ಟು 180 ಕೋಟಿ ರೂ. ಬಂಡವಾಳ ಹೂಡಲಾಗಿದ್ದು, ಇದಾಗ್ಯೂ 8 ದಿನಗಳಲ್ಲಿ ಚಿತ್ರವು ಬಾಕ್ಸಾಫೀಸ್​ನಲ್ಲಿ ಕೇವಲ 115 ಕೋಟಿಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ ಅಮೀರ್ ಖಾನ್ ಚಿತ್ರವನ್ನು ಬಾಕ್ಸಾಫೀಸ್​ನಲ್ಲಿ ಅಟ್ಟರ್ ಫ್ಲಾಪ್ ಎಂದು ವಿಶ್ಲೇಷಿಸಲಾಗುತ್ತಿದೆ.

ಏಕೆಂದರೆ ಅಮೀರ್ ಖಾನ್ ನಾಯಕನಾಗಿ ನಟಿಸಿದ್ದ ಈ ಹಿಂದಿನ ಚಿತ್ರಗಳಾದ ದಂಗಲ್ ಮೊದಲ ವಾರದಲ್ಲೇ 197.54 ಕೋಟಿ ಕಲೆಕ್ಷನ್ ಮಾಡಿತ್ತು. ಹಾಗೆಯೇ ಪಿಕೆ ಚಿತ್ರವು ಫಸ್ಟ್ ವೀಕ್​ನಲ್ಲಿ 183.09 ಕೋಟಿ ಬಾಚಿಕೊಂಡಿತ್ತು. ಆದರೆ ಲಾಲ್ ಸಿಂಗ್ ಚಡ್ಡಾ ಚಿತ್ರದ ಒಟ್ಟಾರೆ ಕಲೆಕ್ಷನ್ ನೂರು ಕೋಟಿಯ ಅಸುಪಾಸಿನಲ್ಲೇ ಉಳಿದಿರುವ ಕಾರಣ ಈ ಸಿನಿಮಾವನ್ನು ಫ್ಲಾಪ್ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ.

Published On - 11:04 am, Sun, 21 August 22

ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ