Bigg Boss Kannada: ಮಂಜು ಕಂಡರೆ ದಿವ್ಯಾಗೆ ಯಾಕಿಷ್ಟು ಲವ್​? ಬಯಲಾಯ್ತು ಅಸಲಿ ವಿಷಯ!

ಬಿಗ್​ ಬಾಸ್​ ಮನೆಯಲ್ಲಿ ಹತ್ತು ಹಲವು ಡ್ರಾಮಾಗಳು ನಡೆಯುತ್ತವೆ. ಜಗಳ, ವಿವಾದದ ಜೊತೆಗೆ ಪ್ರೀತಿ-ಪ್ರೇಮ ಕೂಡ ಜೋರಾಗಿ ಇರುತ್ತದೆ. ಈಗ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ನಡುವಿನ ಆತ್ಮೀಯತೆಯ ಹಿಂದಿನ ಅಸಲಿ ವಿಷಯ ಬಹಿರಂಗ ಆಗಿದೆ.

Bigg Boss Kannada: ಮಂಜು ಕಂಡರೆ ದಿವ್ಯಾಗೆ ಯಾಕಿಷ್ಟು ಲವ್​? ಬಯಲಾಯ್ತು ಅಸಲಿ ವಿಷಯ!
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
Follow us
ರಾಜೇಶ್ ದುಗ್ಗುಮನೆ
|

Updated on:Mar 04, 2021 | 7:29 PM

ಬಿಗ್​ ಬಾಸ್​ ಕನ್ನಡ ಸೀಸನ್​ 8 ಆರಂಭ ಆಗಿ ಒಂದು ವಾರ ಕಳೆಯುವುದರೊಳಗೆ ಸ್ಪರ್ಧಿಗಳ ನಡುವೆ ರಂಗುರಂಗಿನ ಒಡನಾಟ ಬೆಳೆಯುತ್ತಿದೆ. ಅದರಲ್ಲೂ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ನಡುವಿನ ಅತಿಯಾದ ಆತ್ಮೀಯತೆ ಕಂಡವರಿಗೆ ಯಾಕೋ ಅನುಮಾನ ಮೂಡುತ್ತಿದೆ. ಇಬ್ಬರು ಪರಸ್ಪರ ಫ್ಲರ್ಟ್​ ಮಾಡುತ್ತಿದ್ದಾರೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ಇದೆಲ್ಲ ತುಂಬ ಕಾಮನ್​. ಆದರೆ ಅದಕ್ಕೂ ಮೀರಿದ ಒಂದು ಮುಖ್ಯ ವಿಷಯ ಇಲ್ಲಿದೆ.

ಅಷ್ಟಕ್ಕೂ ತಮಗೆ ಮಂಜು ಪಾವಗಡ ಅವರನ್ನು ಕಂಡರೆ ಯಾಕೆ ಅಷ್ಟು ಅಚ್ಚುಮೆಚ್ಚು ಎಂಬ ವಿಚಾರವನ್ನು ಸ್ವತಃ ದಿವ್ಯಾ ಈಗ ಬಾಯಿ ಬಿಟ್ಟಿದ್ದಾರೆ. ಅವರಿಬ್ಬರ ನಡುವಿನ ಆತ್ಮೀಯತೆಗೆ ಕಾರಣ ಆಗಿರುವುದು ಮಂಜುನಾಥ ಎಂಬ ಹೆಸರು! ಸ್ವಲ್ಪ ವಿಚಿತ್ರ ಎನಿಸಿದರೂ ಇದು ನಿಜ. ಮಂಜು ಎಂಬ ಹೆಸರಿನ ವ್ಯಕ್ತಿಗಳನ್ನು ಕಂಡರೆ ತಮಗೆ ವಿಶೇಷ ಪ್ರೀತಿ ಎಂಬುದನ್ನು ದಿವ್ಯಾ ಹೇಳಿಕೊಂಡಿದ್ದಾರೆ. ಅದನ್ನು ಕೇಳಿ ಸ್ವತಃ ಮಂಜು ಮುಖದಲ್ಲಿ ನಗು ಅರಳಿತು.

ದಿವ್ಯಾ ಶಾಲೆಗೆ ಹೋಗುತ್ತಿದ್ದಾಗ ಅವರಿಗೆ ಮಂಜುನಾಥ್​ ಅಂತ ಒಬ್ಬ ಅತ್ಯುತ್ತಮ ಫ್ರೆಂಡ್ ಇದ್ದನಂತೆ. ಅವನ ಜೊತೆ ಈಗ ದಿವ್ಯಾ ಹೆಚ್ಚು ಸಂಪರ್ಕ ಇಟ್ಟುಕೊಂಡಿಲ್ಲ. ಆದರೆ ಬಾಲ್ಯದಲ್ಲಿ ಅವರಿಬ್ಬರ ನಡುವೆ ಸ್ನೇಹ ಗಟ್ಟಿಯಾಗಿತ್ತು. ‘ಅವನು ದೇವಸ್ಥಾನದಲ್ಲಿ ಪೂಜೆ ಮಾಡ್ತಾ ಇದ್ದ. ನನಗೆ ಹುಡುಗರ ಜೊತೆ ಒಳ್ಳೆಯ ಬಾಂಡಿಂಗ್ ಇರುತ್ತಿತ್ತು. ಅದೇ ಥರ ಅವನ ಜೊತೆಗೂ ಇರುತ್ತಿದ್ದೆ. ತುಂಬ ಕಾಮಿಡಿ ಮಾಡುತ್ತಿದ್ದ. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ. ಅವನ ಹೆಸರನ್ನು ನಾನು ಮಂಜ್ ಎಂದು ಕರೆಯುತ್ತಿದ್ದೆ. ಕ್ಲಾಸ್‌ ಅಲ್ಲಿ ಎದ್ದು ನಿಂತಾಗ ನಾನು ಅವನ ಕೆಳಗೆ ಕೈವಾರ ಇಟ್ಟುಬಿಡುತ್ತಿದ್ದೆ’ ಎಂದಿದ್ದಾರೆ ದಿವ್ಯಾ.

‘ಹಾಗಾಗಿ ನನ್ನ ಲೈಫ್‌ನಲ್ಲಿ ಮಂಜುನಾಥ್ ಅನ್ನೋರು ತುಂಬ ಒಳ್ಳೆಯ ಸ್ಥಾನ ಪಡೆದುಕೊಳ್ಳುತ್ತಾರೆ. ಅವರ ಮೇಲೆ ಪ್ರೀತಿ ಉಕ್ಕಿ ಬರುತ್ತೆ ನಂಗೆ’ ಎಂದು ದಿವ್ಯಾ ಸುರೇಶ್‌ ಹೇಳಿದ್ದು ಕೇಳಿ ಪಕ್ಕದಲ್ಲಿದ್ದ ಕಿರಿಯ ಸ್ಪರ್ಧಿ ವಿಶ್ವನಾಥ್​ ಕೂಡ ಕಣ್ಣರಳಿಸಿ ನೋಡತೊಡಗಿದರು. ಸದ್ಯಕ್ಕಂತೂ ಮಂಜು ಮತ್ತು ದಿವ್ಯಾ ಒಡನಾಟ ಮುಂದುವರಿದಿದೆ. ಇದು ಬರೀ ಡ್ರಾಮಾ ಎಂಬ ಕಾಮೆಂಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವ್ಯಕ್ತವಾಗುತ್ತಿವೆ. ಅದೇನೇ ಇದ್ದರೂ ಈ ಜೋಡಿ ಹಕ್ಕಿಗಳಿಂದ ಮನೆಯಲ್ಲಿ ಸ್ವಲ್ಪ ಉಲ್ಲಾಸಮಯ ವಾತಾವರಣ ನಿರ್ಮಾಣ ಆಗಿದೆ.

ಇದನ್ನೂ ಓದಿ: Bigg Boss Kannada Day 3: ಬಿಗ್​ ಬಾಸ್​ ಮನೆಯಲ್ಲಿ ಮಂಜು-ದಿವ್ಯಾ ಪ್ರೇಮಕಥೆ ಎಲ್ಲೆಲ್ಲೋ ಹೋಗ್ತಿದೆ!

Published On - 7:22 pm, Thu, 4 March 21