Bigg Boss Kannada Elimination: ಓವರ್​ ಕಾನ್ಫಿಡೆನ್ಸ್​ ಮುಳುವಾಯ್ತು; ಬಿಗ್​ ಬಾಸ್​ನಿಂದ ರಾಜೀವ್​ ಔಟ್

Rajeev: ಪ್ರತಿ ಸ್ಪರ್ಧಿಗೆ ಭಿನ್ನ ಭಿನ್ನ ಟಾಸ್ಕ್​ ನೀಡುವ ಮೂಲಕ ಎಲಿಮಿನೇಷನ್​ನಿಂದ ಬಚಾವ್ ಮಾಡಲಾಯಿತು. ಕೊನೆಗೆ ಮನೆಯಿಂದ ಹೊರ ಹೋಗುವವರ ವಿಟಿ ತೋರಿಸಲಾಯಿತು. ಈ ವೇಳೆ ರಾಜೀವ್​ ಅವರ ವಿಡಿಯೋ ಬಂತು.

Bigg Boss Kannada Elimination: ಓವರ್​ ಕಾನ್ಫಿಡೆನ್ಸ್​ ಮುಳುವಾಯ್ತು; ಬಿಗ್​ ಬಾಸ್​ನಿಂದ ರಾಜೀವ್​ ಔಟ್
ರಾಜೀವ್​ - ಬಿಗ್​ ಬಾಸ್ ಕನ್ನಡ ಸೀಸನ್​ 8

Updated on: Apr 25, 2021 | 10:10 PM

ಬಿಗ್​ ಬಾಸ್​ ಮನೆಯಲ್ಲಿ ಓವರ್​ ಕಾನ್ಫಿಡೆನ್ಸ್​​ ಆಗಿದ್ದವರು ರಾಜೀವ್​. ಈಗ ಅವರು ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದಾರೆ. ತಮ್ಮ ಬಳಿ ಗೋಲ್ಡನ್​ ಪಾಸ್ ಇದ್ದರೂ ಬಳಕೆ ಮಾಡಿಕೊಳ್ಳದೆ ಅವರು ಮನೆಯಿಂದ ಹೊರ ಹೋಗುತ್ತಿದ್ದಾರೆ. ಈ ಮೂಲಕ ಎಂಟನೇ ವಾರಕ್ಕೆ ಅವರ ಪಯಣ ಅಂತ್ಯವಾಗಿದೆ.

ಈ ವಾರ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದು ನಾಮಿನೇಟ್​ ಆದವರು ಮಂಜು ಹಾಗೂ ದಿವ್ಯಾ. ಮಂಜು ಮತ್ತು ದಿವ್ಯಾ ಏಳನೇ ವಾರದ ಟಾಸ್ಕ್​ನಲ್ಲಿ ಮೋಸದ ಹಾದಿ ತುಳಿದಿದ್ದರು. ಇದು ಮನೆಮಂದಿಗೆ ಶಾಕ್​ ನೀಡಿತ್ತು. ಈ ಘಟನೆಯಿಂದ ಮನೆಯ ಸ್ಪರ್ಧಿಗಳು ತುಂಬಾನೇ ಬೇಸರ ಮಾಡಿಕೊಂಡಿದ್ದರು. ಹೀಗಾಗಿ, ಬಹುತೇಕರು ಮಂಜು ಮತ್ತು ದಿವ್ಯಾ ಹೆಸರನ್ನು ತೆಗೆದುಕೊಂಡರು.

ರಘು ವಿರುದ್ಧ ಮಂಜು ಹಾಗೂ ದಿವ್ಯಾ ಸುರೇಶ್​ ವೋಟ್​ ಮಾಡಿದ್ದಾರೆ. ವೈಷ್ಣವಿ ವಿರುದ್ಧ  ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಿಯಾಂಕಾ ಮತ ಹಾಕಿದ್ದಾರೆ. ಹೀಗಾಗಿ, ರಘು ಮತ್ತು ವೈಷ್ಣವಿ ಕೂಡ ನಾಮಿನೇಟ್​ ಆಗಿದ್ದಾರೆ. ಕಳೆದ ವಾರದ ಟಾಸ್ಕ್​ನಲ್ಲಿ ಅಷ್ಟು ಉತ್ತಮವಾಗಿ ಆಡಿಲ್ಲ ಎಂಬ ಕಾರಣಕ್ಕೆ ಪ್ರಶಾಂತ್​ ಸಂಬರಗಿಯನ್ನು ನಾಮಿನೇಟ್​ ಮಾಡಲಾಗಿತ್ತು. ನೇರವಾಗಿ ನಾಮಿನೇಟ್​ ಮಾಡುವ ಅವಕಾಶ ಕ್ಯಾಪ್ಟನ್​ ಅರವಿಂದ್​ಗೆ ಇತ್ತು. ಈ ವೇಳೆ ರಾಜೀವ್ ಅವರನ್ನು ನಾಮಿನೇಟ್​ ಮಾಡಿದರು.

ರಾಜೀವ್​ ಬಳಿ ಗೋಲ್ಡನ್​ ಪಾಸ್​ ಇದೆ ಎನ್ನುವ ಕಾರಣಕ್ಕೆ ರಾಜೀವ್​ ಅವರನ್ನು ಅರವಿಂದ್ ನಾಮಿನೇಟ್​ ಮಾಡಿದ್ದರು. ಆದರೆ, ವೀಕ್ಷಕರು ನನ್ನನ್ನು ಗೆಲ್ಲಿಸುತ್ತಾರೆ ಎಂದು ತೀವ್ರವಾಗಿ ನಂಬಿದ್ದ ರಾಜೀವ್​ ಗೋಲ್ಡನ್​ ಪಾಸ್​ ಬಳಸಲು ಹೋಗಲೇ ಇಲ್ಲ. ಆದರೆ, ಓವರ್​ ಕಾನ್ಫಿಡೆನ್ಸ್​ ಮುಳುವಾಗಿದೆ.

ಪ್ರತಿ ಸ್ಪರ್ಧಿಗೆ ಭಿನ್ನ ಭಿನ್ನ ಟಾಸ್ಕ್​ ನೀಡುವ ಮೂಲಕ ಎಲಿಮಿನೇಷನ್​ನಿಂದ ಬಚಾವ್ ಮಾಡಲಾಯಿತು. ಕೊನೆಗೆ ಮನೆಯಿಂದ ಹೊರ ಹೋಗುವವರ ವಿಟಿ ತೋರಿಸಲಾಯಿತು. ಈ ವೇಳೆ ರಾಜೀವ್​ ಅವರ ವಿಡಿಯೋ ಬಂತು. ಇದು ಮನೆಯವರಿಗೆ ಒಮ್ಮೆ ಶಾಕ್​ ಮೂಡಿಸಿದೆ. ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವಾಗ ರಾಜೀವ್​​ ಗೋಲ್ಡನ್​ ಪಾಸ್​ ಶುಭಾ ಕೈಗೆ ನೀಡಿ ತೆರಳಿದ್ದಾರೆ.

ಇದನ್ನೂ ಓದಿ: Bigg Boss Kannada Elimination: ಎಂಟನೇ ವಾರ ಈ ಸ್ಪರ್ಧಿಯ ಬಿಗ್​ ಬಾಸ್​ ಪಯಣ ಅಂತ್ಯ?

Vaarada Kathe Kicchana Jothe: ಈ ವಾರವೂ ಬಿಗ್ ಬಾಸ್ ಶೋ ಹೋಸ್ಟ್ ಮಾಡಲ್ಲ ಕಿಚ್ಚ ಸುದೀಪ್

Published On - 9:58 pm, Sun, 25 April 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us