ಗಿಲ್ಲಿ ಬಿಗ್ ಬಾಸ್ ಒಳಗೆ ಹಾಗೆ ಇರೋದು ಏಕೆ? ಗೆಳೆಯನಿಂದ ಸಿಕ್ತು ಉತ್ತರ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ತಮ್ಮ ಸರಳ ಸ್ವಭಾವದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಡೆನುಡಿ, ಬದುಕಿನ ವಿಧಾನ ಸದಾ ಕುತೂಹಲ ಮೂಡಿಸಿದೆ. ಹೊರಗಿನ ಜೀವನವನ್ನು ಬಿಗ್ ಬಾಸ್‌ನಲ್ಲೂ ಮುಂದುವರಿಸಿದ್ದಾರೆ ಎಂದು ಅವರ ಸ್ನೇಹಿತರು ದೃಢಪಡಿಸಿದ್ದಾರೆ. ಇದೇ ಅವರ ಜನಪ್ರಿಯತೆಗೆ ಕಾರಣವಾಗಿ, ಫಿನಾಲೆಗೆ ತಲುಪಲು ಸಹಾಯ ಮಾಡಿದೆ.

ಗಿಲ್ಲಿ ಬಿಗ್ ಬಾಸ್ ಒಳಗೆ ಹಾಗೆ ಇರೋದು ಏಕೆ? ಗೆಳೆಯನಿಂದ ಸಿಕ್ತು ಉತ್ತರ
ಗಿಲ್ಲಿ
Edited By:

Updated on: Jan 02, 2026 | 7:48 AM

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ತಲುಪುವ ಹಂತದಲ್ಲಿ ಇದ್ದಾರೆ. ಅವರು ಉತ್ತಮವಾಗಿ ಆಟ ಆಡಿ ಗಮನ ಸೆಳೆಯುತ್ತಿದ್ದಾರೆ. ಅವರು ಕಪ್ ಗೆಲ್ಲುತ್ತಾರೆ ಎಂದು ಎಲ್ಲರೂ ಭಾವಿಸಿದ್ದಾರೆ. ಅವರ ಅಭಿಮಾನಿ ಹೊರಗೆ ದೊಡ್ಡದಾಗಿದೆ. ಅವರು ಸಿಂಪಲ್ ಆಗಿ ಇರುತ್ತಾರೆ. ಅವರು ಸಿಂಪಲ್ ಆಗಿ ನಡೆದುಕೊಳ್ಳುವುದೇ ಅನೇಕರ ಪ್ರಶ್ನೆಗೆ ಕಾರಣ ಆಗಿದೆ. ಗಿಲ್ಲಿ ನಟ ಅವರ ಗೆಳೆಯರೊಬ್ಬರು ಈ ಬಗ್ಗೆ ಮಾತನಾಡಿದ್ದರು.

ಗಿಲ್ಲಿ ಸರಿಯಾಗಿ ಕೂದಲು ಬಾಚಿಕೊಳ್ಳುವುದಿಲ್ಲ, ಬನಿಯನ್ ಅಲ್ಲಿ ಇರುತ್ತಾರೆ ಎಂದು ಅನೇಕರು ಅಪಸ್ವರ ಎತ್ತಿದ್ದು ಇದೆ. ಆದರೆ, ಗಿಲ್ಲಿ ನಟ ಹೊರಗೆ ಇರೋದು ಅದೇ ರೀತಿಯೇ. ಹೊರಗೆ ಇದ್ದಂತೆ ಒಳಗೂ ಇದ್ದೀಯಾ ಎಂದು ಅವರ ಅಮ್ಮ ಮಾತನಾಡಿದ್ದರು. ಗೆಳೆಯನ ಮಾತು ಕೇಳಿದರೆ ಅದು ನಿಜ ಎನಿಸದೆ ಇರದು.

‘ಗಿಲ್ಲಿ ಇಲ್ಲೇ ಮಲಗಬೇಕು, ಇಲ್ಲೇ ತಿನ್ನಬೇಕು, ಹೀಗೆ ಇರಬೇಕು ಎಂದು ಎಂದಿಗೂ ಅಂದುಕೊಂಡವನಲ್ಲ. ಅವನ ಸ್ವಭಾವ ಹೀಗೆ. ನಿದ್ದೆ ಬಂದಲ್ಲಿ ಮಲಗ್ತಾನೆ, ಏನು ಸಿಗತ್ತೋ ತಿಂತಾನೆ’ ಎಂದು ಅವರು ಹೇಳಿದ್ದರು. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಹೀಗೆಯೇ ಇದ್ದಾರೆ ಎಂದರೂ ತಪ್ಪಾಗಲಾರದು.

‘ನಮ್ಮ ರೂಂನಲ್ಲಿ 8 ಜನ ಮಲಗಿದ್ದರು. ಹೀಗಾಗಿ ಗಿಲ್ಲಿಗೆ ಅಲ್ಲಿ ಜಾಗ ಇರಲಿಲ್ಲ. ಅವನು ಚಾಪೆ ತೆಗೆದುಕೊಂಡು ಹೋಗಿ ಹೊರಗೆ ಹೋಗಿ ಮಲಗಿದ್ದ. ಬೆಳಿಗೆ 9 ಗಂಟೆ ಆಗಿಬಿಟ್ಟಿತ್ತು. ನಿದ್ದೆಗೆ ಡಿಸ್ಟರ್ಬ್ ಆಗಬಾರದು ಎಂದು ಬೆಡ್​ಶೀಟ್ ಹಾಕಿ ಅವನಿಗೆ ಬಿಸಿಲು ಬರಂದತೆ ಮಾಡಿದ್ದೆ. ಅವನು ಸಿಂಪಲ್ ಗುಣದವನು ’ ಎಂದಿದ್ದರು ಅವರು.

ಇದನ್ನೂ ಓದಿ: ಗೆಲ್ಲೋ ಮೊದಲೇ ಅಶ್ವಿನಿ ಎದುರು ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು 

ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಾ ಇದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಮಂದಿ ಉಳಿದುಕೊಂಡಿದ್ದಾರೆ. ಇವರ ಪೈಕಿ ಕೆಲವರು ಔಟ್ ಆಗುತ್ತಾರೆ. ಕಳೆದ ಬಾರಿಯಂತೆ ಈ ಬಾರಿಯೂ ಫಿನಾಲೆಯಲ್ಲಿ ಆರು ಮಂದಿ ಇರುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:46 am, Fri, 2 January 26