AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗಳಿಕೆ, ವ್ಯಂಗ್ಯ, ವಿತಂಡವಾದ: ಮಾತೇ ಮುಳುವಾಗುತ್ತಿದೆ ಗಿಲ್ಲಿಗೆ

Bigg Boss Kannada: ಬಿಗ್​​ಬಾಸ್​​ ಮನೆಯಲ್ಲಿ ಈಗಿರುವ ಸ್ಪರ್ಧಿಗಳ ಪೈಕಿ ಹೆಚ್ಚು ಎಂಟರ್ಟೈನ್​​ ಮಾಡುತ್ತಿರುವುದು ಗಿಲ್ಲಿ. ಆರಂಭದಲ್ಲಿ ತಮ್ಮ ಶುದ್ಧ ಹಾಸ್ಯದಿಂದ ರಂಜಿಸಿದ ಗಿಲ್ಲಿ, ಇತ್ತೀಚೆಗೆ ಹಾಸ್ಯದ ಹೆಸರಲ್ಲಿ ಸಹ ಸ್ಪರ್ಧೀಗಳ ಹೀಗಳಿಕೆ, ವ್ಯಂಗ್ಯ, ಅವಮಾನ ಮಾಡುವುದು, ವಿತಂಡವಾದ ಮಾಡುವುದು ಇದನ್ನೇ ಮಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಗಿಲ್ಲಿಗೆ ಆತ್ಮೀಯರಾಗಿರುವವರು ಸಹ ಗಿಲ್ಲಿಯ ವರ್ತನೆಯನ್ನು ಟೀಕಿಸಲು ಆರಂಭಿಸಿದ್ದಾರೆ.

ಹೀಗಳಿಕೆ, ವ್ಯಂಗ್ಯ, ವಿತಂಡವಾದ: ಮಾತೇ ಮುಳುವಾಗುತ್ತಿದೆ ಗಿಲ್ಲಿಗೆ
Gilli Bigg Boss
ಮಂಜುನಾಥ ಸಿ.
|

Updated on: Nov 19, 2025 | 10:57 PM

Share

ಬಿಗ್​​ಬಾಸ್ ಕನ್ನಡ ಸೀಸನ್ 12ರಲ್ಲಿ (Bigg Boss Kannada) ಮುಂಚೂಣಿಯಲ್ಲಿರುವ ಸ್ಪರ್ಧಿಗಳಲ್ಲಿ ಗಿಲ್ಲಿ ಪ್ರಮುಖರು. ಆರಂಭದ ಕೆಲ ವಾರಗಳು ತಮ್ಮ ಹಾಸ್ಯದಿಂದ ಇಡೀ ಮನೆಯನ್ನು ನಗೆ ಗಡಲಲ್ಲಿ ತೇಲಿಸಿದ್ದ ಗಿಲ್ಲಿ ಪ್ರೇಕ್ಷಕರಿಗೂ ಭರ್ಜರಿ ಮನರಂಜನೆ ಒದಗಿಸಿದ್ದರು. ಮಾತ್ರವಲ್ಲದೆ, ಕೆಲ ಸಂಕೀರ್ಣ ಸಮಯಗಳಲ್ಲಿ ದನಿ ರಹಿತವಾಗಿದ್ದ ರಕ್ಷಿತಾ ಇನ್ನೂ ಕೆಲವರ ಪರವಾಗಿ ಸ್ಟ್ಯಾಂಡ್ ತೆಗೆದುಕೊಂಡಿದ್ದರು. ಕಿಚ್ಚನಿಂದ ಚಪ್ಪಾಳೆ ಸಹ ತೆಗೆದುಕೊಂಡರು. ಆದರೆ ಬರ ಬರುತ್ತಾ ಗಿಲ್ಲಿ ಬೇರೆ ಹಾದಿಯನ್ನೇ ಹಿಡಿದಂತೆ ಇದ್ದಾರೆ. ಅವರ ಹಾಸ್ಯ, ವ್ಯಂಗ್ಯದ ಕಡೆ, ಹೀಗಳಿಕೆ ಕಡೆ ತಿರುಗಿದಂತಿದೆ. ಇದೀಗ ಗಿಲ್ಲಿಯ ಆತ್ಮೀಯರೇ ಅವರನ್ನು ಟೀಕೆ ಮಾಡಲು ಆರಂಭಿಸಿದ್ದಾರೆ. ಗಿಲ್ಲಿಯ ತಂಡವೂ ಇದರಿಂದ ಸಮಸ್ಯೆಗೆ ಸಿಲುಕಿದಂತಿದೆ.

ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿ ಪ್ರಮುಖವಾಗಿ ಅಶ್ವಿನಿ ಮತ್ತು ಜಾನ್ವಿಯನ್ನು ಎದುರು ಹಾಕಿಕೊಂಡಿದ್ದಾರೆ. ಅವರ ಬಗ್ಗೆ ತಮಾಷೆ ಮಾಡುವುದು, ಕಾಲೆಳೆಯುವುದು ಮಾಡುತ್ತಲೇ ಇರುತ್ತಾರೆ. ಆದರೆ ಈ ವಾರ ಅದನ್ನು ತುಸು ಹೆಚ್ಚೇ ಮಾಡಿಕೊಂಡಿದ್ದಾರೆ. ಯಾವ ಮಟ್ಟಿಗೆಂದರೆ ಸದಾ ಗಿಲ್ಲಿಯ ಬೆಂಬಲಕ್ಕೆ ನಿಲ್ಲುತ್ತಿದ್ದವರೇ ಈ ಬಾರಿ ಇದು ತುಸು ಅತಿಯಾಯ್ತು ಎಂದಿದ್ದಾರೆ. ಅಶ್ವಿನಿ, ಜಾನ್ವಿಯನ್ನು ಮುದುಕರು ಎಂದು ಹಿಯಾಳಿಸಿದ್ದರಿಂದ ಹಿಡಿದು ಸಾಕಷ್ಟು ಋಣಾತ್ಮಕ, ಹೀಗಳಿಕೆಯ ಮಾತುಗಳನ್ನು ಈ ವಾರ ಗಿಲ್ಲಿ ಆಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅಶ್ವಿನಿ, ಜಾನ್ವಿ ಸಹ ಮಾತುಗಳನ್ನಾಡಿದ್ದಾರಾದರೂ, ಗಿಲ್ಲಿಯ ಮಾತುಗಳು ಎಲ್ಲೆ ಮೀರಿವೆ.

ಈ ಬಗ್ಗೆ ಕಾವ್ಯಾ, ಗಿಲ್ಲಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ ಆದರೆ ಗಿಲ್ಲಿಗೆ ಅದು ಅರ್ಥವಾಗಿಲ್ಲ. ಟಾಸ್ಕ್ ನಡೆಯುವಾಗ ಗೆಳೆಯರಾದ ಧನುಶ್ ಮತ್ತು ಅಭಿ ಮೇಲೂ ಗಿಲ್ಲಿ ಜಗಳ ಮಾಡಿದರು. ಇಬ್ಬರೂ ಸೇರಿ ಸಮಾಧಾನದಿಂದಲೇ ಗಿಲ್ಲಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೆ ಅಲ್ಲಿಯೂ ಸಹ ಗಿಲ್ಲಿ ವಿತಂಡವಾದ ಆರಂಭ ಮಾಡಿದರು. ಅಲ್ಲಿಗೆ ಅಭಿ ಹಾಗೂ ಧನುಶ್ ಇಬ್ಬರೂ ಸಹ ತಾಳ್ಮೆ ಕಳೆದುಕೊಂಡರು. ಆ ಬಳಿಕವೂ ಸಹ ಜಾನ್ವಿಗೆ ವಯಸ್ಸೆಷ್ಟು ಎಂದು ಹಿಯಾಳಿಸುವುದು, ಅಶ್ವಿನಿಗೆ ಹಿಯಾಳಿಸುವುದು, ಸುಮ್ಮನಿದ್ದರೂ ಧ್ರುವಂತ್​​ ಅನ್ನು ಹಿಯಾಳಿಸುವುದು ಮಾಡಿದರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ 12: ಫಿನಾಲೆ ಬರಲಿರುವ ಸ್ಪರ್ಧಿಗಳ ಹೆಸರಿಸಿದ ಮಾಜಿ ಸ್ಪರ್ಧಿ ವಿನಯ್

ಕಾವ್ಯಾ ಹಲವು ಬಾರಿ ಗಿಲ್ಲಿಗೆ ಅವರ ತಪ್ಪನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೆ ಗಿಲ್ಲಿ ಅದೇ ವಿತಂಡವಾದವನ್ನು ಮುಂದುವರೆಸಿದರೇ ವಿನಃ ಕಾವ್ಯಾ ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ತೋರಲಿಲ್ಲ. ಗಿಲ್ಲಿಯ ಮಾತುಗಳಿಗೆ ಎದುರು ಮಾತು ಹೇಳಲು ವಿಫಲರಾದ ಅಶ್ವಿನಿ ಅಸಹಾಯಕರಾಗಿ ಕಣ್ಣೀರು ಸಹ ಹಾಕಿದರು. ಹಾಸ್ಯಕ್ಕೆ ಮಿತಿ ಇರಬೇಕು, ಇನ್ನೊಬ್ಬರನ್ನು ಹೀಗಳೆಯುವುದು, ಅವಮಾನ ಮಾಡುವುದು ಹಾಸ್ಯ ಅಲ್ಲ ಎಂದರು. ಕಾವ್ಯಾ ಸಹ ಗಿಲ್ಲಿಗೆ ಅದನ್ನೇ ಹೇಳುವ ಪ್ರಯತ್ನ ಮಾಡಿ ವಿಫಲರಾಗಿ, ಕಣ್ಣೀರು ಸಹ ಹಾಕಿದರು. ಈ ವಾರಾಂತ್ಯದಲ್ಲಿ ಸುದೀಪ್ ಆದರೂ ಗಿಲ್ಲಿಗೆ ಹಾಸ್ಯ ಮತ್ತು ಹೀಗಳಿಕೆಯ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತಾರಾ ನೋಡಬೇಕು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಭಜನ್ ಕ್ಲಬ್ಬಿಂಗ್​; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೈಚಳಿ ಬಿಡಿಸಿದ ಸಚಿವ ಜೈಶಂಕರ್!
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಕೊಡಗಿನಲ್ಲಿ ಸುರಿದ ಕೆಂಬಣ್ಣದ ಮಳೆ: ಅಚ್ಚರಿಗೊಂಡ ಜನ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
ಹಾಸನದಲ್ಲಿ ರವಿಚಂದ್ರನ್ ನೋಡಲು ಮುಗಿಬಿದ್ದ ಜನ; ವಿಡಿಯೋ ನೋಡಿ
'ಕಾಸಿಗೆ ಡಿಗ್ರಿ' ನೀಡುವ ಬೃಹತ್ ವಂಚನೆ ಜಾಲ
'ಕಾಸಿಗೆ ಡಿಗ್ರಿ' ನೀಡುವ ಬೃಹತ್ ವಂಚನೆ ಜಾಲ
ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್
ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್
ಪೌರ ಕಾರ್ಮಿಕರ ಸಮವಸ್ತ್ರ ಧರಿಸಿ ಗೌರವ ಸಲ್ಲಿಸಿದ ಡಿಕೆ ಶಿವಕುಮಾರ್
ಪೌರ ಕಾರ್ಮಿಕರ ಸಮವಸ್ತ್ರ ಧರಿಸಿ ಗೌರವ ಸಲ್ಲಿಸಿದ ಡಿಕೆ ಶಿವಕುಮಾರ್
‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 35 ಸಾಂಗ್ಸ್ ಇದೆ’; ರವಿಚಂದ್ರನ್
‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 35 ಸಾಂಗ್ಸ್ ಇದೆ’; ರವಿಚಂದ್ರನ್