ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​

ಅರವಿಂದ್ ಕೆ.ಪಿ ಕೂಡ ಈ ವಾರ ನಾಮಿನೇಷನ್​ ಆಗಿದ್ದಾರೆ. ಅವರು, ಸ್ಟ್ರಾಂಗ್​ ಸ್ಪರ್ಧಿ ಎನ್ನುವ ಕಾರಣ ನೀಡಿದರು. ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ ಮೇಲೂ ನಾಮಿನೇಟ್​ ತೂಗುಗತ್ತಿ ಇದೆ.

ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​
ರಘು ಗೌಡ-ನಿಧಿ ಸುಬ್ಬಯ್ಯ

Updated on: Apr 05, 2021 | 10:32 PM

ಬಿಗ್​ ಬಾಸ್​ ಮನೆಯಲ್ಲಿ ಆರನೇ ವಾರದ ಎಲಿಮಿನೇಷನ್​ಗೆ ನಾಮಿನೇಷನ್​ ನಡೆದಿದೆ. ಒಟ್ಟು ಏಳು ಜನರ ಮೇಲೆ ಎಲಿಮಿನೇಷನ್​​ ತೂಗುಗತ್ತಿ ತೂಗುತ್ತಿದೆ. ಈ ಬಾರಿಯ ನಾಮಿನೇಷನ್​ ವೇಳೆ ರಘು ಗೌಡ ಹೆಸರನ್ನು ನಿಧಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಇದನ್ನು ಬಿಗ್​ ಬಾಸ್​ ಸ್ವೀಕರಿಸಲೇ ಇಲ್ಲ. ಇದು ಏಕೆ ಎನ್ನುವ ಪ್ರಶ್ನೆಯನ್ನು ಕೂಡ ನಿಧಿ ಕೇಳಿದರು. ಆದರೆ, ಯಾರೂ ಇದಕ್ಕೆ ಉತ್ತರ ಕೊಟ್ಟಿಲ್ಲ. ಹಾಗಾದ್ರೆ ಹೀಗೆಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ಬಾರಿ ನಾಮಿನೇಷನ್​ಗೆ ನಾಯಕ ಮಂಜು ಪಾವಗಡ, ನೇರವಾಗಿ ನಾಮಿನೇಟ್​ ಆದ ನಿಧಿ ಸುಬ್ಬಯ್ಯ ಹಾಗೂ ಈ ವಾರವಷ್ಟೇ ಬಂದ ಚಕ್ರವರ್ತಿ ಚಂದ್ರಚೂಡ ಅವರ ಹೆಸರನ್ನು ಎತ್ತಿಕೊಳ್ಳುವಂತಿರಲಿಲ್ಲ. ಹೀಗಾಗಿ, ಮನೆಯಲ್ಲಿ ಬಹುತೇಕರು ಶಮಂತ್​ ಬ್ರೋ ಗೌಡ ಅವರ ಹೆಸರನ್ನು ಆಯ್ಕೆ ಮಾಡಿಕೊಂಡರು. ಅವರು ತುಂಬಾನೇ ಸ್ಲೋ, ನಮ್ಮ ವೇಗಕ್ಕೆ ಅವರು ಹೊಂದಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಅರವಿಂದ್ ಕೆ.ಪಿ ಕೂಡ ಈ ವಾರ ನಾಮಿನೇಷನ್​ ಆಗಿದ್ದಾರೆ. ಅವರು, ಸ್ಟ್ರಾಂಗ್​ ಸ್ಪರ್ಧಿ ಎನ್ನುವ ಕಾರಣ ನೀಡಿದರು. ಪ್ರಶಾಂತ್​ ಸಂಬರಗಿ, ದಿವ್ಯಾ ಸುರೇಶ್​, ಶುಭಾ ಪೂಂಜಾ ಮೇಲೂ ಎಲಿಮಿನೇಷನ್​​ ತೂಗುಗತ್ತಿ ಇದೆ. ನಿಧಿ ಸುಬ್ಬಯ್ಯ ಅವರನ್ನು ಶಂಕರ್ ಅಶ್ವತ್ಥ್​ ನೇರವಾಗಿ ನಾಮಿನೇಟ್​ ಮಾಡಿದ್ದರು.

ಮನೆಯ ನಾಯಕ ಮಂಜುಗೆ ಒಬ್ಬರನ್ನು ನಾಮಿನೇಟ್​ ಮಾಡುವ ಅವಕಾಶ ನೀಡಲಾಗಿತ್ತು. ಈ ವೇಳೆ, ರಾಜೀವ್​ ಅವರನ್ನು ಮಂಜು ಡೇಂಜರ್​ ಜೋನ್​ಗೆ ತಳ್ಳಿದರು. ಇದೇ ವೇಳೆ ರಘು ಹೆಸರನ್ನು ಶುಭಾ ನಾಮಿನೇಟ್​ ಮಾಡಿದ್ದರು. ಆದರೆ, ಅವರ ಹೆಸರು ನಾಮಿನೇಟ್​ ಲಿಸ್ಟ್​ಗೆ ಬಂದೇ ಇಲ್ಲ.

ಇದಕ್ಕೂ ಕಾರಣವಿದೆ. ಎಲಿಮಿನೇಷನ್​ಗೆ ನಾಮಿನೇಟ್​ ಆಗಬೇಕು ಎಂದರೆ ಎರಡಕ್ಕಿಂತ ಹೆಚ್ಚು ಜನರು ಅವರ ಹೆಸರನ್ನು ತೆಗೆದುಕೊಳ್ಳಬೇಕು. ರಘು ಹೆಸರನ್ನು ಎತ್ತಿಕೊಂದಿದ್ದು ಶುಭಾ ಮಾತ್ರ. ಹೀಗಾಗಿ, ರಘು ಹೆಸರು ನಾಮಿನೇಟ್​ ಲಿಸ್ಟ್​ಗೆ ಬಂದಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಒಡೆದು ಆಳೋಕೆ ಸಿದ್ಧವಾಗಿದೆ ಪ್ಲ್ಯಾನ್​! ಸಂಬರಗಿ-ಚಂದ್ರಚೂಡ್​ ಕಿಂಗ್​ಪಿನ್​​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us