‘ಹೊರಗೆ ಕಾಲ್​ ಕಟ್​ ಮಾಡುತ್ತಿದ್ದ ಹುಡುಗಿ, ಈಗ ಅವನಿಗೆ ಊಟ ಮಾಡಿಸುತ್ತಿದ್ದಾಳೆ’

ಶಮಂತ್ ಬ್ರೋ ಗೌಡ ಮನೆಗೆ ಬಂದಾಗ ಕೆಲವರ ಹಿಂದೆ ಸುತ್ತಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯಾವ ಹುಡುಗಿಯನ್ನೂ ಅವರಿಗೆ ಬೀಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲವಲ್ಲ ಎಂದು ಅನೇಕರು ಟೀಕೆ ಮಾಡಿದ್ದರು.

‘ಹೊರಗೆ ಕಾಲ್​ ಕಟ್​ ಮಾಡುತ್ತಿದ್ದ ಹುಡುಗಿ, ಈಗ ಅವನಿಗೆ ಊಟ ಮಾಡಿಸುತ್ತಿದ್ದಾಳೆ’
ಶಮಂತ್​, ಪ್ರಿಯಾಂಕಾ, ಚಕ್ರವರ್ತಿ ಚಂದ್ರಚೂಡ್​
Follow us
TV9 Web
| Updated By: ಮದನ್​ ಕುಮಾರ್​

Updated on:Jun 28, 2021 | 8:32 AM

ಬಿಗ್​ ಬಾಸ್​ ಮನೆಯಲ್ಲಿ ಪ್ರಿಯಾಂಕಾ ತಿಮ್ಮೇಶ್​ ತುಂಬಾನೇ ನೇರವಾಗಿ ಮಾತನಾಡುತ್ತಾರೆ. ಈ ವಿಚಾರಕ್ಕೆ ಅನೇಕರಿಗೆ ಅವರು ಇಷ್ಟವಾಗುವುದಿಲ್ಲ. ಈಗ ಬಿಗ್​ ಬಾಸ್​ ಮನೆಯಲ್ಲಿ ಅವರು ನಡೆದುಕೊಂಡ ರೀತಿ ಅನೇಕರ ಕಣ್ಣು ಕುಕ್ಕಿದೆ. ಶಮಂತ್​ ಹಾಗೂ ಪ್ರಿಯಾಂಕಾ ನಡುವೆ ಫೇಕ್​ ಸಂಬಧವಿದೆ ಎಂದು ಮನೆ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಶಮಂತ್ ಬ್ರೋ ಗೌಡ ಮನೆಗೆ ಬಂದಾಗ ಕೆಲವರ ಹಿಂದೆ ಸುತ್ತಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯಾವ ಹುಡುಗಿಯನ್ನೂ ಅವರಿಗೆ ಬೀಳಿಸಿಕೊಳ್ಳೋಕೆ ಸಾಧ್ಯವಾಗಿಲ್ಲವಲ್ಲ ಎಂದು ಮನೆಯವರು ಟೀಕೆ ಮಾಡಿದ್ದರು. ಈ ವೇಳೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಪ್ರಿಯಾಂಕಾಗೂ ಮನೆಯಲ್ಲಿದ್ದ ಶಮಂತ್​ಗೂ ಒಳ್ಳೆಯ ಗೆಳೆತನ ಬೆಳೆದಿತ್ತು.

ಜೂನ್​ 26ರ ಎಪಿಸೋಡ್​ನಲ್ಲಿ ಶಮಂತ್​ಗೆ ಪ್ರಿಯಾಂಕಾ ಚಾಲೆಂಜ್​ ಒಂದನ್ನು ಮಾಡಿದ್ದರು. ಈ ಚಾಲೆಂಜ್​ನಲ್ಲಿ ಸೋತರೆ ಊಟ ಮಾಡಿಸುವುದಾಗಿ ಪ್ರಿಯಾಂಕಾ ಹೇಳಿದ್ದರು. ಈ ಚಾಲೆಂಜ್​ನಲ್ಲಿ ಸೋತ ನಂತರದಲ್ಲಿ ಶಮಂತ್​ಗೆ ಪ್ರಿಯಾಂಕಾ ಊಟ ಮಾಡಿಸಿದರು. ಹೀಗಾಗಿ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಗುಸುಗುಸು ಮನೆಯಲ್ಲಿ ಹರಿದಾಡಿದೆ.

ಶಮಂತ್​-ಪ್ರಿಯಾಂಕಾ ಕ್ಲೋಸ್​ ಆಗಿರುವ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಬೇಸರ ಹೊರ ಹಾಕಿದ್ದಾರೆ. ಅಲ್ಲದೆ, ಈ ಫೇಕ್​ ರಿಲೇಶನ್​ಶಿಪ್​ ಬಗ್ಗೆ ಚಕ್ರವರ್ತಿ ಸಿಡಿದೆದ್ದಿದ್ದಾರೆ. ‘ಪ್ರಿಯಾಂಕಾರನ್ನು ಕಂಡರೆ ಅನೇಕರಿಗೆ ಆಗಲ್ಲ. ನಿನಗೆ ಪ್ರಿಯಾಂಕಾ ಊಟ ಮಾಡಿಸಿದ್ದು ಬೇರೆ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಲವ್​ ಗೇಮ್​ ಆಡಬೇಡ. ಇದು ಹೊರಗಿನವರಿಗೆ ಗೊತ್ತಾಗುತ್ತದೆ’ ಎಂದು ಶಮಂತ್​ಗೆ ಚಕ್ರವರ್ತಿ ತಿಳಿ ಹೇಳಿದರು.

ನಂತರ ಚಕ್ರವರ್ತಿ- ಪ್ರಶಾಂತ್​ ಮಾತನಾಡಿಕೊಂಡರು. ‘ಆ ಹುಡುಗಿ ಹೊರಗೆ ಶಮಂತ್​ನ ಮೀಟ್​ ಮಾಡುತ್ತಿರಲಿಲ್ಲ. ಕಾಲ್​ ಕಟ್​ ಮಾಡುತ್ತಿದ್ದಳು. ಇಲ್ಲಿ ಬಂದಮೇಲೆ ಇದೇನಿದು ಗೇಮ್​ ಪ್ಲ್ಯಾನ್​? ಆ ಹುಡುಗನನ್ನ ಏಕೆ ಹಾಳು ಮಾಡ್ತಾಳೆ? ಅದು ಬೇಜಾರಾಗ್ತಿದೆ’ ಎಂದರು ಚಕ್ರವರ್ತಿ.

ಇದನ್ನೂ ಓದಿ:

ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​

ಸಂಚಾರಿ ವಿಜಯ್ ಹೆಸರಿನಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಬಿಗ್​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ 

Published On - 7:39 am, Mon, 28 June 21