Bigg Boss Kannada: ಗೀತಾ ಮತ್ತು ವಿಶ್ವನಾಥ್​ಗೆ ಲಾಸ್ಟ್​ ವಾರ್ನಿಂಗ್​ ನೀಡಿದ ಕಿಚ್ಚ ಸುದೀಪ್​! ಕಾರಣ ಏನು?

|

Updated on: Mar 15, 2021 | 11:52 AM

ಪ್ರತಿ ವಾರವೂ ಗೀತಾ ಮತ್ತು ವಿಶ್ವನಾಥ್​ ನಾಮಿನೇಟ್​ ಆಗುತ್ತಿದ್ದಾರೆ. ಹಲವು ಕಾರಣಗಳಿಗಾಗಿ ಅವರ ಪರ್ಫಾಮೆನ್ಸ್​ ಡಲ್​ ಆಗುತ್ತಿದೆ. ಇದನ್ನು ಕಿಚ್ಚ ಸುದೀಪ್​ ಗಮನಿಸಿದ್ದಾರೆ.

Bigg Boss Kannada: ಗೀತಾ ಮತ್ತು ವಿಶ್ವನಾಥ್​ಗೆ ಲಾಸ್ಟ್​ ವಾರ್ನಿಂಗ್​ ನೀಡಿದ ಕಿಚ್ಚ ಸುದೀಪ್​! ಕಾರಣ ಏನು?
ಗೀತಾ ಭಾರತಿ ಭಟ್​ - ವಿಶ್ವನಾಥ್​
Follow us on

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಎರಡು ವಾರಗಳು ಕಳೆದಿವೆ. ಈವರೆಗೂ ಇಬ್ಬರ ಎಲಿಮಿನೇಷನ್​ ಆಗಿದೆ. ಮೊದಲ ವಾರ ಧನುಶ್ರೀ ಹಾಗೂ ಎರಡನೇ ವಾರ ನಿರ್ಮಲಾ ಚೆನ್ನಪ್ಪ ಅವರು ಮನೆಯಿಂದ ಹೊರಬಂದಿದ್ದಾರೆ. ಇನ್ನುಳಿದ 15 ಸ್ಪರ್ಧಿಗಳ ನಡುವೆ ಹಣಾಹಣಿ ಮುಂದುವರಿದಿದೆ. ಈ ನಡುವೆ ‘ಬ್ರಹ್ಮಗಂಟು’ ಖ್ಯಾತಿಯ ನಟಿ ಗೀತಾ ಭಾರತಿ ಭಟ್​ ಹಾಗೂ ಗಾಯಕ ವಿಶ್ವನಾಥ್​ ಅವರಿಗೆ ಕಿಚ್ಚ ಸುದೀಪ್​ ವಾರ್ನಿಂಗ್​ ನೀಡಿದ್ದಾರೆ.

ಎರಡನೇ ವಾರದ ನಾಮಿನೇಷನ್​ ಪಟ್ಟಿಯಲ್ಲಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್​, ನಿರ್ಮಲಾ ಚೆನ್ನಪ್ಪ, ವಿಶ್ವನಾಥ್​, ಗೀತಾ ಭಾರತಿ ಭಟ್​, ಚಂದ್ರಕಲಾ ಮೋಹನ್​ ಮತ್ತು ಪ್ರಶಾಂತ್​ ಸಂಬರಗಿ ಇದ್ದರು. ಪ್ರತಿ ವಾರವೂ ಗೀತಾ ಮತ್ತು ವಿಶ್ವನಾಥ್​ ನಾಮಿನೇಟ್​ ಆಗುತ್ತಿದ್ದಾರೆ. ಹಲವು ಕಾರಣಗಳಿಗಾಗಿ ಅವರ ಪರ್ಫಾಮೆನ್ಸ್​ ಡಲ್​ ಆಗುತ್ತಿದೆ. ಇದನ್ನು ಕಿಚ್ಚ ಸುದೀಪ್​ ಗಮನಿಸಿದ್ದಾರೆ.

ಎರಡು ವಾರಗಳಲ್ಲಿ ಗೀತಾ ಹಾಗೂ ವಿಶ್ವನಾಥ್​ ಹೇಳಿಕೊಳ್ಳುವಂತಹ ಮನರಂಜನೆ ನೀಡಿಲ್ಲ. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ವೀಕ್ಷಕರಿಂದ ಇವರಿಬ್ಬರಿಗೆ ಕಡಿಮೆ ವೋಟ್​ ಬಂದಿರುವ ಸಾಧ್ಯತೆ ಇದೆ. ಹೇಗೋ ಅದೃಷ್ಟದಿಂದ ಗೀತಾ ಹಾಗೂ ವಿಶ್ವನಾಥ್​ ಜಸ್ಟ್ ಮಿಸ್​ ಆಗಿದ್ದಾರೆ. ಇಲ್ಲದಿದ್ದರೆ ಅವರಲ್ಲಿ ಒಬ್ಬರು ಎಲಿಮಿನೇಟ್​ ಆಗಬೇಕಿತ್ತು. ಎರಡನೇ ವಾರದ ಪಂಚಾಯಿತಿಯಲ್ಲಿ ಇವರಿಬ್ಬರಿಗೆ ಸುದೀಪ್​ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಆಟದ ಶೈಲಿಯನ್ನು ಬದಲಾಯಿಸಿಕೊಳ್ಳದೇ ಇದ್ದರೆ ಉಳಿಗಾಲ ಇಲ್ಲ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.

ವಿಶ್ವ ಒಳ್ಳೆಯ ಹಾಡುಗಾರನಾಗಿದ್ದರೂ ಕೂಡ ಆ ಸಾಮರ್ಥ್ಯವನ್ನು ಅವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಗೀತಾ ಕೂಡ ಹಾಡುವುದರಲ್ಲಿ ಪರಿಣತಿ ಹೊಂದಿದ್ದಾರೆ. ಆದರೂ ಬಿಗ್​ ಬಾಸ್​ ಮನೆಯೊಳಗೆ ಅವರು ಸೂಕ್ತ ಮನರಂಜನೆ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು, ಎಮೋಷನಲ್ ಆಗಿ ಅವರು ಎಲ್ಲರನ್ನೂ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ತಮ್ಮ ಈ ಎಲ್ಲ ಮೈನಸ್​ ಪಾಯಿಂಟ್​ಗಳನ್ನು ಸರಿಪಡಿಸಿಕೊಳ್ಳದಿದ್ದರೆ ಇವರಿಬ್ಬರಿಗೂ ಮುಂದಿನ ವಾರ ಕಷ್ಟ ಆಗಲಿದೆ ಎಂಬುದರಲ್ಲಿ ಅನುಮಾನ ಇಲ್ಲ!

ಇದನ್ನೂ ಓದಿ: BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ