ಎರಡು ಮಕ್ಕಳು ಹುಟ್ಟಿದ ಬಳಿಕ ಗರ್ಲ್​​ಫ್ತೆಂಡ್ ಜೊತೆ ಮದುವೆ ಆದ ನಟ ಅರ್ಜುನ್ ರಾಂಪಾಲ್

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಬಹುಕಾಲದ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡೆಸ್ ಅವರನ್ನು ಗೋವಾದಲ್ಲಿ ಅಧಿಕೃತವಾಗಿ ವಿವಾಹವಾಗಿದ್ದಾರೆ. ಉತ್ತರ ಗೋವಾದ ಮಾಪುಸಾ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅತ್ಯಂತ ಸರಳವಾಗಿ ಈ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇಬ್ಬರು ಮಕ್ಕಳ ಹೆತ್ತವರಾದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಎರಡು ಮಕ್ಕಳು ಹುಟ್ಟಿದ ಬಳಿಕ ಗರ್ಲ್​​ಫ್ತೆಂಡ್ ಜೊತೆ ಮದುವೆ ಆದ ನಟ ಅರ್ಜುನ್ ರಾಂಪಾಲ್
ಅರ್ಜುನ್-ಗೇಬ್ರಿಯೆಲಾ
Edited By:

Updated on: Aug 22, 2026 | 7:55 AM

ಮುಖ್ಯಾಂಶಗಳು

  • ಗೋವಾದಲ್ಲಿ ಸರಳವಾಗಿ ನಡೆದ ನೋಂದಣಿ ವಿವಾಹ
  • ವರ್ಷಗಳ ಪ್ರೀತಿಗೆ ಕೊನೆಗೂ ಸಿಕ್ಕಿತು ಅಧಿಕೃತ ಮುದ್ರೆ
  • ಇಬ್ಬರು ಮಕ್ಕಳಿದ್ದರೂ ಈಗ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

ಬಾಲಿವುಡ್ ಜನಪ್ರಿಯ ನಟ ಅರ್ಜುನ್ ರಾಂಪಾಲ್ ತಮ್ಮ ಬಹುಕಾಲದ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡೆಸ್ ಅವರನ್ನು ಗೋವಾದಲ್ಲಿ ವಿವಾಹವಾಗಿದ್ದಾರೆ. ಈ ಪ್ರೇಮಿಗಳು ತಮ್ಮ ಸುದೀರ್ಘ ಸಂಬಂಧಕ್ಕೆ ಈಗ ಕಾನೂನಾತ್ಮಕ ಮುದ್ರೆ ಒತ್ತಿದ್ದಾರೆ. ಉತ್ತರ ಗೋವಾದ ಮಾಪುಸಾ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಸರಳವಾಗಿ ಈ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಅತ್ಯಂತ ಆಪ್ತ ಗೆಳೆಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

ಸ್ಥಳೀಯ ಕಾನೂನಿನ ಪ್ರಕಾರ ಎರಡು ಸಹಿಗಳ ನಡುವೆ ಹದಿನೈದು ದಿನಗಳ ಕಾಯುವಿಕೆ ಅವಧಿ ಇರುತ್ತದೆ. ಆದರೆ ವಿಶೇ‍ಷ ಅನುಮತಿಯನ್ನು ಪಡೆದು ಈ ಅವಧಿಯನ್ನು ಮನ್ನಾ ಮಾಡಿಸಿಕೊಳ್ಳಲಾಗಿದೆ. ಮಾಪುಸಾ ಉಪನೋಂದಣಾಧಿಕಾರಿ ಸೂರಜ್ ವೆರ್ನೇಕರ್ ಈ ಮದುವೆಯನ್ನು ನೋಂದಾಯಿಸಿದ್ದಾರೆ. ಗೋವಾದ ಏಕರೂಪ ನಾಗರಿಕ ಸಂಹಿತೆಯಡಿ ಈ ವಿವಾಹ ಪ್ರಕ್ರಿಯೆ ನೆರವೇರಿದೆ.

ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಈ ಜೋಡಿ ಕಚೇರಿಗೆ ಆಗಮಿಸಿತ್ತು. ಅತ್ಯಂತ ಸರಳ ಉಡುಪಿನಲ್ಲಿ ಇಬ್ಬರೂ ಕಚೇರಿಗೆ ಬಂದಿದ್ದರು. 2018 ರಿಂದ ಅರ್ಜುನ್ ಮತ್ತು ಗೇಬ್ರಿಯೆಲಾ ಪ್ರೀತಿಯಲ್ಲಿದ್ದರು. ಮಾಜಿ ಪತ್ನಿ ಮೆಹರ್ ಜೆಸಿಯಾ ಅವರಿಂದ ಬೇರ್ಪಟ್ಟ ನಂತರ ಅರ್ಜುನ್ ಗೇಬ್ರಿಯೆಲಾ ಅವರೊಂದಿಗೆ ಜೀವನ ಆರಂಭಿಸಿದ್ದರು.

ಈ ದಂಪತಿಗೆ ಈಗಾಗಲೇ ಇಬ್ಬರು ಗಂಡು ಮಕ್ಕಳಿದ್ದಾರೆ. 2019 ರಲ್ಲಿ ಮೊದಲ ಮಗ ಅರಿಕ್ ಜನಿಸಿದ್ದನು. ನಾಲ್ಕು ವರ್ಷಗಳ ನಂತರ ಎರಡನೇ ಮಗ ಅರಿವ್ ಜನಿಸಿದನು. 2025 ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಇದನ್ನೂ ಓದಿ: ‘ಎಲ್ಲರೂ ನನ್ನ ಬಿಟ್ಟು ಹೋದರು’; ಅರ್ಜುನ್ ರಾಂಪಾಲ್ ಬದುಕಿನ ಕರಾಳ ಮುಖ

ಮದುವೆ ಎಂಬುದು ಬರಿ ಕಾಗದದ ತುಂಡು ಎಂದು ಈ ಹಿಂದೆ ಅರ್ಜುನ್ ಹೇಳಿದ್ದರು. ಮದುವೆಯಾಗದಿದ್ದರೂ ನಾವು ಮನಸ್ಸಿನಿಂದ ಒಂದಾಗಿದ್ದೇವೆ ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಆದರೆ ಈಗ ಅಧಿಕೃತವಾಗಿ ಮದುವೆಯಾಗುವ ಮೂಲಕ ತಮ್ಮ ಹೊಸ ಪಯಣವನ್ನು ಆರಂಭಿಸಿದ್ದಾರೆ. ಈ ಮೊದಲು ಮಾತನಾಡಿದ್ದ ಅರ್ಜುನ್, ಎಲ್ಲರೂ ಬಿಟ್ಟು ಹೋದಾಗ ಗೇಬ್ರಿಯೆಲಾ ಡೆಮೆಟ್ರಿಯಾಡೆಸ್ ಬೆಂಬಲಕ್ಕೆ ನಿಂತಿದ್ದರು ಎಂದು ರಿವೀಲ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us