AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್​ ಆಕ್ಷನ್ ಸಿನಿಮಾನಲ್ಲಿ ನಟಿಸುತ್ತಿರುವ ಬಾಲಿವುಡ್ ನಟ

Vidyut Jammwal movie: ಭಾರತದ ನಟರುಗಳು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ತುಸು ಅಪರೂಪ. ಇರ್ಫಾನ್ ಖಾನ್ ಕೆಲವಾರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಹೊರತಾಗಿ ಅನಿಲ್ ಕಪೂರ್, ನಾಸಿರುದ್ಧೀನ್ ಶಾ, ಅಲಿ ಜಫರ್, ಅನಿಲ್ ಕಪೂರ್ ಅವರುಗಳು ಒಂದೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್​ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ನಟರೊಬ್ಬರು ಹಾಲಿವುಡ್​ನ ಆಕ್ಷನ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಹಾಲಿವುಡ್​ ಆಕ್ಷನ್ ಸಿನಿಮಾನಲ್ಲಿ ನಟಿಸುತ್ತಿರುವ ಬಾಲಿವುಡ್ ನಟ
Vdyut
ಮಂಜುನಾಥ ಸಿ.
|

Updated on: Dec 12, 2025 | 5:46 PM

Share

ಭಾರತೀಯ ಚಿತ್ರರಂಗದಲ್ಲಿ (Indian Cinema) ನಟಿಸಿ ಹೆಸರು ಮಾಡಿದ ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ ಭಾರತದ ನಟರುಗಳು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ತುಸು ಅಪರೂಪ. ಇರ್ಫಾನ್ ಖಾನ್ ಕೆಲವಾರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಹೊರತಾಗಿ ಅನಿಲ್ ಕಪೂರ್, ನಾಸಿರುದ್ಧೀನ್ ಶಾ, ಅಲಿ ಜಫರ್, ಅನಿಲ್ ಕಪೂರ್ ಅವರುಗಳು ಒಂದೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್​ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ನಟರೊಬ್ಬರು ಹಾಲಿವುಡ್​ನ ಆಕ್ಷನ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ವಿದ್ಯುತ್ ಜಮ್ವಾಲ್ ಬಾಲಿವುಡ್ ಮಾತ್ರವಲ್ಲದೆ ಕೆಲವು ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅತ್ಯುತ್ತಮ ಅಂಗ ಸೌಷ್ಠವ ಹೊಂದಿರುವ ವಿದ್ಯುತ್ ಜಮ್ವಾಲ್ ಅವರು ಒಳ್ಳೆಯ ನಟನಾಗಿರುವ ಜೊತೆಗೆ ಅತ್ಯುತ್ತಮ ಆಕ್ಷನ್ ನಟರೂ ಸಹ. ಕೆಲವಾರು ಸಮರ ಕಲೆಗಳನ್ನು ಕಲಿತಿರುವ ವಿದ್ಯುತ್ ಜಮ್ವಾಲ್ ಅವರು ತಮ್ಮ ಸ್ಟಂಟ್​​ಗಳನ್ನು ತಾವೇ ಮಾಡುತ್ತಾರೆ. ತಮ್ಮ ಈ ಕಲೆಯಿಂದಾಗಿಯೇ ಇದೀಗ ಇವರು ಹಾಲಿವುಡ್ ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ.

ಹಾಲಿವುಡ್​ನಲ್ಲಿ ‘ಸ್ಟ್ರೀಟ್ ಫೈಟರ್’ ಹೆಸರಿನ ಸಿನಿಮಾ ನಿರ್ಮಾಣ ಆಗುತ್ತಿದ್ದು, ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ವಿದ್ಯುತ್ ಜಮ್ವಾಲ್ ನಟಿಸಲಿದ್ದಾರೆ. ‘ಸ್ಟ್ರೀಟ್ ಫೈಟರ್’ ಸಿನಿಮಾ ಅದೇ ಹೆಸರಿನ ಗೇಮ್ ಒಂದರ ಮೇಲೆ ಆಧಾರವಾಗಿದೆ. ಇದೊಂದು ಲೈವ್ ಆಕ್ಷನ್ ಸಿನಿಮಾ ಆಗಿರಲಿದ್ದು, ಸಿನಿಮಾನಲ್ಲಿ ವಿದ್ಯುತ್ ಅವರು ಗೇಮಿನ ಜನಪ್ರಿಯ ಕ್ಯಾರೆಕ್ಟರ್ ಆದ ‘ದಾಲ್ಸಿಮ್’ ಪಾತ್ರದಲ್ಲಿ ನಟಿಸಲಿದ್ದಾರೆ. ಗೇಮ್​​ನಲ್ಲಿ ದಾಲ್ಸಿಮ್ ಒಳ್ಳೆಯ ಫೈಟರ್ ಆತನನ್ನು ಲಾಂಗ್ ಆರ್ಮ್ ಎಂದೂ ಸಹ ಕರೆಯಲಾಗುತ್ತದೆ. ತಮ್ಮ ಕೈ ಮತ್ತು ಕಾಲುಗಳನ್ನು ಉದ್ದಕ್ಕೆ ಚಾಚಿ ಫೈಟ್ ಮಾಡುವ ಶಕ್ತಿ ದಾಲ್ಸಿಮ್​​ಗೆ ಇದೆ. ಇದೇ ಪಾತ್ರವನ್ನು ವಿದ್ಯುತ್ ಈಗ ನಿಭಾಯಿಸಲಿದ್ದಾರೆ.

ಇದನ್ನೂ ಓದಿ:‘ಪುಷ್ಪ’ ನಿರ್ದೇಶಕನ ಕೊಂಡಾಡಿದ ಬಾಲಿವುಡ್ ಬೆಡಗಿ ಕೃತಿ ಸನೊನ್

ದಾಲ್ಸಿಮ್ ಪಾತ್ರವು ಯೋಗಿ ಸಹ ಆಗಿದ್ದು, ದಾಲ್ಸಿಮ್ ಅನ್ನು ಗ್ರೇಟ್ ಟೈಗರ್ ಎಂದೂ ಸಹ ಕರೆಯಲಾಗುತ್ತದೆ. ದಾಲ್ಸಿಮ್​​ಗೆ ‘ಸ್ಟ್ರೀಟ್ ಫೈಟರ್’ ಗೇಮಿನಲ್ಲಿ ಹಲವು ಶಕ್ತಿಗಳಿದ್ದವು. ದಾಲ್ಸಿಮ್, ಬೆಂಕಿಯನ್ನು ಉಗುಳುತ್ತಿದ್ದ. ಆದರೆ ಸಿನಿಮಾವನ್ನು ಗೇಮಿನಂತೆಯೇ ಮಾಡುತ್ತಿಲ್ಲ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆಯಂತೆ. ವಿದ್ಯುತ್ ಅವರ ಪಾತ್ರ, ಗೇಮ್​​ನ ದಾಲ್ಸಿಮ್ ಪಾತ್ರವನ್ನೇ ಹೋಲುತ್ತಿದೆ.

‘ಸ್ಟ್ರೀಟ್ ಫೈಟರ್’ ಸಿನಿಮಾ ಬಹುತಾರಾಗಣದ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಹಾಲಿವುಡ್​ನ ಹಲವು ಜನಪ್ರಿಯ ನಟ, ನಟಿಯರು ನಟಿಸುತ್ತಿದ್ದಾರೆ. ಡಬ್ಲುಡಬ್ಲುಇನ ಹಲವು ಪ್ರಮುಖ ರೆಸ್ಟ್ಲರ್​​ಗಳು ಸಹ ಈ ಸಿನಿಮಾನಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಕಿಟಾವ್ ಸಕುರಾಯ್ ಅವರು ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?