‘3 ಈಡೀಯಟ್ಸ್’ ಚಿತ್ರಕ್ಕೆ ಬರ್ತಿದೆ ಸೀಕ್ವೆಲ್; ಘೋಷಿಸಿದ ಆಮಿರ್ ಖಾನ್

2009ರ ಬ್ಲಾಕ್‌ಬಸ್ಟರ್ '3 ಈಡಿಯಟ್ಸ್' ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂದು ಆಮಿರ್ ಖಾನ್ ಖಚಿತಪಡಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ಅವರೇ ಈ ಬಹುನಿರೀಕ್ಷಿತ ಸೀಕ್ವೆಲ್ ಅನ್ನು ನಿರ್ದೇಶಿಸಲಿದ್ದಾರೆ. ಹಿಂದಿನ ಭಾಗದಂತೆ, ಈ ಸೀಕ್ವೆಲ್ ಕೂಡ ಕಾಲೇಜು ಕಥೆಯನ್ನೇ ಹೊಂದಿದೆಯೇ ಅಥವಾ ಹೊಸ ವಿಷಯದ ಮೇಲೆ ಬೆಳಕು ಚೆಲ್ಲಲಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

‘3 ಈಡೀಯಟ್ಸ್’ ಚಿತ್ರಕ್ಕೆ ಬರ್ತಿದೆ ಸೀಕ್ವೆಲ್; ಘೋಷಿಸಿದ ಆಮಿರ್ ಖಾನ್
ಆಮಿರ್ ಖಾನ್

Updated on: Apr 28, 2026 | 3:11 PM

2009ರಲ್ಲಿ ಬಂದ ‘3 ಈಡಿಯಟ್ಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಲಿವುಡ್​​ನಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಈಗಿನ ಕಾಲದಲ್ಲಿ ಈ ಚಿತ್ರ ತೆರೆಗೆ ಬಂದಿದ್ದರೆ ಸಿನಿಮಾ ಸುಮಾರು ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುತ್ತಿತ್ತೇನೋ. ಈಗ ಆಮಿರ್ ಖಾನ್ ಅವರು ‘3 ಈಡಿಯಟ್ಸ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿದೆ ಎಂದಿದ್ದಾರೆ. ರಾಜ್​​ಕುಮಾರ್ ಹಿರಾನಿ ಅವರು ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ.

ರಾಜ್​​ಕುಮಾರ್ ಹಿರಾನಿಗೆ ಸಾಕಷ್ಟು ಮೈಲೇಜ್ ತಂದುಕೊಟ್ಟ ಚಿತ್ರ ಎಂದರೆ ಅದು ‘3 ಈಡಿಯಟ್ಸ್’ ಸಿನಿಮಾ. ಈ ಚಿತ್ರದಲ್ಲಿ ಆಮಿರ್ ಖಾನ್, ಆರ್​ ಮಾಧವನ್, ಶರ್ಮಣ್ ಜೋಶಿ, ಕರೀನಾ ಕಪೂರ್ ಮೊದಲಾದವರು ನಟಿಸಿದ್ದರು.ಈ ಸಿನಿಮಾ ರಿಲೀಸ್ ಆಗಿ 2 ದಶಕ ಪೂರೈಸುತ್ತಾ ಬಂದರೂ ಇದು ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂಬ ಚರ್ಚೆ ಸಾಕಷ್ಟು ಮೊದಲಿನಿಂದಲೂ ಇತ್ತು. ಈಗ ಅದು ನಿಜವಾಗಿದೆ.

ನಿರ್ದೇಶಕ ರಾಜ್​​ಕುಮಾರ್ ಹಿರಾನಿ ಹಾಗೂ ಬರಹಗಾರ ಅಭಿಜಾತ್ ಜೋಶಿ ಅವರು ‘3 ಈಡಿಯಟ್ಸ್’ ಸೀಕ್ವೆಲ್ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದಾರೆ. ಈ ಬಾರಿಯೂ ಚಿತ್ರದ ಕಥೆ ಕಾಲೇಜ್​​ನಲ್ಲಿ ಸಾಗುತ್ತದೆಯೇ ಅಥವಾ ಬೇರೆ ವಿಷಯವನ್ನು ಹೇಳಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ದಾದಾ ಸಾಹೇಬ್ ಫಾಲ್ಕೆ’ ಮೇಲೂ ಆಮಿರ್ ಖಾನ್ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರೋ ಅವರು, ‘ದಾದಾ ಸಾಹೇಬ್ ಫಾಲ್ಕೆ ಚಿತ್ರ ಸಾಕಷ್ಟು ಸ್ಫೂರ್ತಿದಾಯಕ. ರಾಜು (ರಾಜ್​​ಕುಮಾರ್ ಹಿರಾನಿ) ಅವರು ಇದರ ಮೇಲೆ ಕೆಲಸ ಮಾಡುತ್ತಿದ್ದಾರೆ. 3 ಡ್ರಾಫ್ಟ್​​ಗಳನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಸ್ಕ್ರಿಪ್ಟ್ ಬಗ್ಗೆ ಖುಷಿ ಇಲ್ಲ. ಮುಂದಿನ ದಿನಗಳಲ್ಲಿ ಪುನಃ ಬರೆಯಬಹುದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:  3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?

ರಾಜ್‌ಕುಮಾರ್ ಹಿರಾನಿ ಪ್ರಸ್ತುತ ‘3 ಈಡಿಯಟ್ಸ್’ ಮೇಲೆ ಗಮನ ಹರಿಸುತ್ತಿದ್ದಾರೆ ಎಂದು ಆಮಿರ್ ಹೇಳಿದ್ದಾರೆ. ‘ನಾನು ಕಥೆಯನ್ನು ಕೇಳಿದ್ದೇನೆ ಮತ್ತು ಅದು ತುಂಬಾ ಚೆನ್ನಾಗಿ ಬಂದಿದೆ’ ಎಂದಿದ್ದಾರೆ ಆಮಿರ್ ಖಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us