ಮತ್ತೆ ವಿವಾಹ ಆಗ್ತಾರಾ ಆಮಿರ್ ಖಾನ್; ನಟನ ಉತ್ತರ ಸಖತ್ ಫನ್ನಿ

Aamir Khan Birthday: ಆಮಿರ್ ಖಾನ್ ಅವರಿಗೆ ಬೆಂಗಳೂರಿನ ಯುವತಿಯೊಂದಿಗೆ ಸಂಬಂಧ ಇದೆ ಎಂಬ ವದಂತಿಗಳು ಹಬ್ಬಿದ್ದವು. ಮೂರನೇ ಮದುವೆ ವದಂತಿಗಳಿಗೆ ಈ ಮೊದಲು ಸ್ಪಷ್ಟನೆ ನೀಡಿದ್ದರು. ಮತ್ತೆ ಮದುವೆಯಾಗುವುದು ಕಷ್ಟ ಎಂದಿರೋ ಅವರು, ತಮ್ಮ ಮಕ್ಕಳು ಮತ್ತು ಕುಟುಂಬದೊಂದಿಗೆ ಸಂತೋಷವಾಗಿ ಇರೋದಾಗಿ ಹೇಳಿಕೊಂಡಿದ್ದಾರೆ.

ಮತ್ತೆ ವಿವಾಹ ಆಗ್ತಾರಾ ಆಮಿರ್ ಖಾನ್; ನಟನ ಉತ್ತರ ಸಖತ್ ಫನ್ನಿ
ಆಮಿರ್ ಖಾನ್
Edited By:

Updated on: Mar 14, 2025 | 6:00 AM

ನಟ ಆಮಿರ್ ಖಾನ್ ಅವರಿಗೆ ಇಂದು (ಮಾರ್ಚ್ 14) ಜನ್ಮದಿನ. ಅವರಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಾ ಇದ್ದಾರೆ. ಫ್ಯಾನ್ಸ್ ಕಡೆಯಿಂದ ಅವರಿಗೆ ವಿಶೇಷ್ ವಿಶ್ ಬರುತ್ತಿದೆ. ಬರ್ತ್​ಡೇ ಪ್ರಯುಕ್ತ ಅವರ ನಟನೆಯ ಮುಂದಿನ ಸಿನಿಮಾ ‘ಸಿತಾರೇ ಜಮೀನ್​ಪರ್’ ಚಿತ್ರದ ಕಡೆಯಿಂದ ಅಪ್​ಡೇಟ್ ಸಿಗುತ್ತದೆಯೇ ಎನ್ನುವ ಕುತೂಹಲ ಮೂಡಿದೆ. ಆಮಿರ್ ಖಾನ್ ಅವರು ಮೂರನೇ ವಿವಾಹ ಆಗುತ್ತಾರೆ ಎಂದು ಹೇಳಲಾಗಿತ್ತು. ಈ ಮೊದಲೇ ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದರು.

ಆಮಿರ್ ಖಾನ್ ಅವರ ಸಂಬಂಧ ಹೆಚ್ಚು ವರ್ಷಗಳ ಕಾಲ ಉಳಿದಿಲ್ಲ. ಮೊದಲು ಅವರು ರೀನಾ ದತ್ತ ಅವರನ್ನು ವಿವಾಹ ಆದರು. 1986ರಲ್ಲಿ ಆರಂಭ ಆದ ಈ ಸಂಬಂಧ 2002ರಲ್ಲಿ ಕೊನೆ ಆಯಿತು. ಆ ಬಳಿಕ ಕಿರಣ್ ರಾವ್ ಅವರನ್ನು ವಿವಾಹ ಆದರು. 2005ರಲ್ಲಿ ನಡೆದ ಮದುವೆ 2021ರಲ್ಲಿ ಕೊನೆ ಆಯಿತು. ಈಗ ಆಮಿರ್ ಖಾನ್ ಅವರು ಸಿಂಗಲ್ ಆಗಿದ್ದಾರೆ. ಅವರಿಗೆ ಮತ್ತೆ ವಿವಾಹ ಆಗುವ ಆಲೋಚನೆಯೂ ಇಲ್ಲ.

ಈ ಮೊದಲು ಸಂದರ್ಶನ ಒಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು. ‘ನನಗೆ ಈಗ 59 ವರ್ಷ. ಈಗ ಮದುವೆ ಆಗೋದು ಹೇಗೆ? ಅದು ಕಷ್ಟ ಎನಿಸುತ್ತಿದೆ. ನನ್ನ ಜೀವನದಲ್ಲಿ ಸಾಕಷ್ಟು ಸಂಬಂಧಗಳು ಇವೆ. ನಾನು ಕುಟುಂಬದ ಜೊತೆ, ಮಕ್ಕಳ ಜೊತೆ ಮತ್ತೆ ಕನೆಕ್ಟ್ ಆಗಿದ್ದೇನೆ. ನನಗೆ ಆಪ್ತ ಆಗಿರುವವರ ಜೊತೆ ಇರೋದು ನನಗೆ ಖುಷಿ ಕೊಟ್ಟಿದೆ. ನಾನು ಒಳ್ಳೆಯ ವ್ಯಕ್ತಿ ಆಗಲು ಪ್ರಯತ್ನಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
ಬೇಸರದಲ್ಲಿರೋ ಸೋನು ನಿಗಮ್ ಬೆಂಬಲಕ್ಕೆ ನಿಂತ ಸಂಗೀತಾ ಶೃಂಗೇರಿ
ಯಶ್​ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಕನ್ನಡ ಚಿತ್ರರಂಗದ ಹೆಮ್ಮೆ
‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು

ಇದನ್ನೂ ಓದಿ: ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ

ಆಮಿರ್ ಖಾನ್ ಅವರು ಬೆಂಗಳೂರಿನ ಯುವತಿಯ ಜೊತೆ ಸುತ್ತಾಟ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಮೊದಲು ಹರಿದಾಡಿತ್ತು. ಆದರೆ, ಈ ಬಗ್ಗೆ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ಹೇಳಲಾಗುತ್ತಿದೆ. ಹಾಗೆ ಇವರು ಸುತ್ತಾಟ ನಡೆಸುತ್ತಾ ಇದ್ದಿದ್ದರೆ ಒಮ್ಮೆಯಾದರೂ ಅವರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಳ್ಳಬೇಕಿತ್ತು ಎಂಬುದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.