ಹೊಸ ಪ್ರೇಯಸಿ ಪರಿಚಯ ಮಾಡಿಸಿದ ಆಮಿರ್ ಖಾನ್; 60ನೇ ವಯಸ್ಸಿನಲ್ಲಿ ಚಿಗುರಿದ ಪ್ರೇಮ

|

Updated on: Mar 13, 2025 | 9:18 PM

ನಟ ಆಮಿರ್ ಖಾನ್ ಅವರಿಗೆ 60 ವರ್ಷ ವಯಸ್ಸಾಗಿದೆ. ಈಗ ಅವರು ಹೊಸ ಪ್ರೇಯಸಿ ಬಗ್ಗೆ ಮೌನ ಮುರಿದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಬೆಂಗಳೂರು ಮೂಲದ ಗೌರಿ ಎಂಬ ಮಹಿಳೆಯ ಜೊತೆ ಆಮಿರ್ ಖಾನ್ ವಾಸ ಮಾಡುತ್ತಿದ್ದಾರೆ. ಗೌರಿ ಅವರಿಗೆ 6 ವರ್ಷದ ಪುತ್ರ ಕೂಡ ಇದ್ದಾನೆ. ಈ ಎಲ್ಲ ವಿಷಯಗಳನ್ನು ಆಮಿರ್ ಖಾನ್ ಸ್ವತಃ ಬಹಿರಂಗಪಡಿಸಿದ್ದಾರೆ.

ಹೊಸ ಪ್ರೇಯಸಿ ಪರಿಚಯ ಮಾಡಿಸಿದ ಆಮಿರ್ ಖಾನ್; 60ನೇ ವಯಸ್ಸಿನಲ್ಲಿ ಚಿಗುರಿದ ಪ್ರೇಮ
Gauri, Aamir Khan
Follow us on

ಇತ್ತೀಚಿನ ವರ್ಷಗಳಲ್ಲಿ ನಟ ಆಮಿರ್ ಖಾನ್ (Aamir Khan) ಅವರ ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಈಗಾಗಲೇ ಅವರು ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿದ್ದಾರೆ. ಈಗ ಅವರಿಗೆ ಮೂರನೇ ಬಾರಿಗೆ ಪ್ರೀತಿ ಚಿಗುರಿದೆ. ಹೌದು, 2ನೇ ಪತ್ನಿ ಕಿರಣ್ ರಾವ್​ಗೆ ಡಿವೋರ್ಸ್​ ನೀಡಿದ ಬಳಿಕ ಬೆಂಗಳೂರಿನ ಮಹಿಳೆಯ ಜೊತೆಗೆ ಆಮಿರ್ ಖಾನ್ ಅವರಿಗೆ ಲವ್ ಆಗಿದೆ. ಇದೇ ಮೊದಲ ಬಾರಿಗೆ ಅವರು ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಇಂದು (ಮಾರ್ಚ್​ 13) ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆದಿದೆ. ಈ ವೇಳೆ ಅವರು ಪತ್ರಕರ್ತರ ಜೊತೆ ಮಾತನಾಡುವಾಗ ಪ್ರೇಯಸಿಯನ್ನು ಪರಿಚಯಿಸಿದ್ದಾರೆ. ಆಮಿರ್ ಖಾನ್ ಹೊಸ ಗರ್ಲ್​ಫ್ರೆಂಡ್​ (Aamir Khan Girlfriend) ಹೆಸರು ಗೌರಿ!

ಆಮಿರ್ ಖಾನ್ ಮತ್ತು ಗೌರಿ ಅವರು ಹಲವು ತಿಂಗಳಿಂದ ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಎಂದು ಗಾಸಿಪ್ ಹಬ್ಬಿತ್ತು. ಅದೀಗ ನಿಜವಾಗಿದೆ. ಗೌರಿ ಅವರಿಗೆ 6 ವರ್ಷದ ಮಗ ಕೂಡ ಇದ್ದಾನೆ. ಆಮಿರ್ ಖಾನ್ ಅವರ ಇಡೀ ಕುಟುಂಬದವರು ಗೌರಿಯನ್ನು ಭೇಟಿ ಆಗಿದ್ದಾರಂತೆ. ಗೌರಿ ಮತ್ತು ಆಮಿರ್ ಖಾನ್ ಜೊತೆಯಾಗಿ ಇರುವುದು ಅವರ ಕುಟುಂಬದವರಿಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.

ಅಂದಹಾಗೆ, ಆಮಿರ್​ ಖಾನ್ ಹಾಗೂ ಗೌರಿ ಅವರ ಪರಿಚಯ ಬರೋಬ್ಬರಿ 25 ವರ್ಷಗಳಷ್ಟು ಹಳೆಯದು. ಆದರೆ ಕೆಲವು ವರ್ಷಗಳು ಅವರಿಬ್ಬರು ಸಂಪರ್ಕದಲ್ಲಿ ಇರಲಿಲ್ಲ. ಕಿರಣ್ ರಾವ್​ಗೆ ಡಿವೋರ್ಸ್ ನೀಡಿದ ನಂತರ ಗೌರಿ ಜೊತೆ ಆಮಿರ್ ಖಾನ್ ಅವರ ಆಪ್ತತೆ ಹೆಚ್ಚಿದೆ ಎನ್ನಲಾಗಿದೆ. ‘ನಾನು ಮತ್ತು ಗೌರಿ 25 ವರ್ಷಗಳ ಹಿಂದೆ ಪರಿಚಯ ಆಗಿದ್ದೆವು. ಈಗ ನಾವು ಬಾಳ ಸಂಗಾತಿಗಳು. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ಒಟ್ಟಿಗೆ ವಾಸ ಮಾಡುತ್ತಿದ್ದೇವೆ’ ಎಂದು ಆಮಿರ್ ಖಾನ್ ಅವರು ಹೇಳಿದ್ದಾರೆ.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಮಾರ್ಚ್​ 12ರಂದು ಆಮಿರ್ ಖಾನ್ ಮನೆಗೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಬಂದಿದ್ದರು. ಅವರಿಗೆ ಕೂಡ ತಮ್ಮ ಪ್ರೇಯಸಿಯನ್ನು ಆಮಿರ್ ಖಾನ್ ಪರಿಚಯ ಮಾಡಿಕೊಟ್ಟಿದ್ದಾರೆ. ‘ಲಗಾನ್’ ಸಿನಿಮಾದಲ್ಲಿ ಆಮಿರ್ ಖಾನ್ ಅವರು ಭುವನ್ ಎಂಬ ಪಾತ್ರ ಮಾಡಿದ್ದರು. ಕಥಾನಾಯಕಿಯ ಹೆಸರು ಗೌರಿ ಆಗಿತ್ತು. ‘ಈಗ ಭುವನ್​ಗೆ ಗೌರಿ ಸಿಕ್ಕಿದ್ದಾಳೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ 60ನೇ ವರ್ಷದ ಬರ್ತ್​ಡೇ ಪಾರ್ಟಿಗೆ ಬಂದ ಶಾರುಖ್, ಸಲ್ಮಾನ್

‘ಸಿನಿಮಾ ನಿರ್ಮಾಣದ ವಿಭಾಗದಲ್ಲಿ ಗೌರಿ ಕೆಲಸ ಮಾಡುತ್ತಾರೆ. ಅವರಿಗಾಗಿ ನಾನು ಪ್ರತಿ ದಿನ ಹಾಡು ಹೇಳುತ್ತೇನೆ. 60ನೇ ವಯಸ್ಸಿನಲ್ಲಿ ನನಗೆ ಮದುವೆ ಸರಿ ಎನಿಸುತ್ತೋ ಇಲ್ಲವೋ ಗೊತ್ತಿಲ್ಲ. ನನ್ನ ಮಕ್ಕಳಿಗೆ ಖುಷಿ ಆಗಿದೆ. ಮಾಜಿ ಪತ್ನಿಯರ ಜೊತೆ ಶ್ರೇಷ್ಠವಾದ ಬಾಂಧವ್ಯ ಹೊಂದಿದ್ದಕ್ಕೆ ನಾನು ಅದೃಷ್ಟವಂತ’ ಎಂದಿದ್ದಾರೆ ಆಮಿರ್ ಖಾನ್.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.