ಆಮಿರ್ ಖಾನ್ ಮಗನಿಗೆ ವಿಚಿತ್ರ ಕಾಯಿಲೆ; ‘ತಾರೇ ಜಮೀನ್ ಪರ್’ ಚಿತ್ರದ ರಿಯಲ್ ಕಹಾನಿ
'ತಾರೆ ಜಮೀನ್ ಪರ್' ಚಿತ್ರವು ಅವರ ಮಗ ಜುನೈದ್ ಖಾನ್ ಅವರ ಡಿಸ್ಲೆಕ್ಸಿಯಾದಿಂದ ಸ್ಫೂರ್ತಿ ಪಡೆದಿದೆ ಎಂದು ಆಮೀರ್ ಖಾನ್ ಬಹಿರಂಗಪಡಿಸಿದ್ದಾರೆ. ಜುನೈದ್ ಅವರೇ ಈ ಬಗ್ಗೆ ಮೊದಲು ಮಾತನಾಡಿದ ನಂತರ, ತಮ್ಮ ಮಗನ ಅನುಭವಗಳನ್ನು ಹಂಚಿಕೊಳ್ಳುವುದು ಸೂಕ್ತ ಎಂದು ಅವರು ಭಾವಿಸಿದ್ದಾರೆ. ಡಿಸ್ಲೆಕ್ಸಿಯಾದಿಂದ ಉಂಟಾಗುವ ತೊಂದರೆಗಳನ್ನು ಅವರು ವೈಯಕ್ತಿಕವಾಗಿ ಅನುಭವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅವರು ‘ತಾರೇ ಜಮೀನ್ ಪರ್’ ಸಿನಿಮಾ ಮಾಡಿದರು. 2007ರಲ್ಲಿ ಈ ಚಿತ್ರ ತೆರೆಗೆ ಬಂತು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರವನ್ನು ಮಾಡಲು ಆಮಿರ್ ಖಾನ್ಗೆ ಸ್ಫೂರ್ತಿಯಾಗಿ ಸಿಕ್ಕಿದ್ದು ಮಗ. ಚಿತ್ರದಲ್ಲಿ ಡಿಸ್ಲೆಕ್ಸಿಯಾ ಹೆಸರಿನ ಕಾಯಿಲೆಯ ಬಗ್ಗೆ ಹೇಳಲಾಗಿದೆ. ಈ ಸಮಸ್ಯೆ ಇದ್ದರೆ ಆ ಮಗು ತುಂಬಾನೇ ನಿಧಾನ ಇರುತ್ತದೆ. ಕಲಿಕೆಯಲ್ಲಿ ವೇಗ ಇರುವುದಿಲ್ಲ. ಇದೇ ಸಮಸ್ಯೆ ಆಮಿರ್ ಮಗ ಜುನೈದ್ ಖಾನ್ಗೂ ಇತ್ತು. ಈ ಕಾರಣದಿಂದ ಆಮಿರ್ ಸಿನಿಮಾ ಮಾಡಲು ಒಪ್ಪಿದ್ದರು.
ಮಗನ ಖಾಸಗಿತನ ಕಾಪಾಡಿಕೊಳ್ಳುವ ಕಾರಣದಿಂದ ಈ ವಿಚಾರವನ್ನು ಅವರು ರಿವೀಲ್ ಮಾಡಿರಲಿಲ್ಲ. ಆದರೆ, ಜುನೈದ್ ಖಾನ್ ಅವರೇ ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೆ ನೀಡಿದರು. ಹೀಗಾಗಿ, ಈ ವಿಚಾರವನ್ನು ಹೇಳಲು ಸರಿಯಾದ ಸಮಯ ಇದು ಎಂದು ಆಮಿರ್ ಹೇಳಿದ್ದಾರೆ.
‘ನಾನು ಇವತ್ತಿನವರೆಗೂ ಇದರ ಬಗ್ಗೆ ಮಾತನಾಡಿಲ್ಲ. ಬಹುಶಃ ನಾನು ಇದನ್ನು ಹೇಳುತ್ತಿರುವುದು ಇದೇ ಮೊದಲು. ಇದಕ್ಕೆ ಕಾರಣ ಎರಡು, ಆ ವಿಚಾರ ನಡೆದು ಹಲವು ವರ್ಷಗಳು ಕಳೆದಿವೆ. ಎರಡನೆಯದಾಗಿ, ನಾನು ಮಾತನಾಡಲಿರುವ ವ್ಯಕ್ತಿ ಈಗಾಗಲೇ ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಆದ್ದರಿಂದ ಈಗ ನಾನು ಅದರ ಬಗ್ಗೆ ಮುಕ್ತವಾಗಿ ಮಾತನಾಡಬಹುದು. ನಾನು ಜುನೈದ್ ಬಗ್ಗೆ ಮಾತನಾಡುತ್ತಿದ್ದೇನೆ, ನನ್ನ ಮಗ ಜುನೈದ್’ ಎಂದರು ಆಮಿರ್.
‘ತಾರೇ ಜಮೀನ್ ಪರ್ ಚಿತ್ರ ಬಿಡುಗಡೆಯಾಗಿ 17-18 ವರ್ಷಗಳಾಗಿವೆ. ಜುನೈದ್ ಡಿಸ್ಲೆಕ್ಸಿಯಾದಿಂದ ಬಳಲುತ್ತಿದ್ದ. ಹಾಗಾಗಿ ನಾನು ಮೊದಲು (ತಾರೆ ಜಮೀನ್ ಪರ್) ಕಥೆಯನ್ನು ಕೇಳಿದಾಗ, ಅದು ನನಗೆ ತುಂಬಾ ನೋವುಂಟುಮಾಡಿತು. ಏಕೆಂದರೆ ನಾನು ಅದನ್ನು ಸ್ವತಃ ಅನುಭವಿಸಿದ್ದೇನೆ. ನಾನು ಆರಂಭದಲ್ಲಿ ನಂದಕಿಶೋರ್ ಅವಸ್ಥಿಯಂತೆ (ತಾರೆ ಜಮೀನ್ ಪರ್ ಸಿನಿಮಾದಲ್ಲಿ ಬಾಲಕನ ತಂದೆ) ಇದ್ದೆ. ನಾನು ಜುನೈದ್ ಅವರನ್ನು ಗದರುತ್ತಿದ್ದೆ’ ಎಂದಿದ್ದಾರೆ ಆಮಿರ್.
ಇದನ್ನೂ ಓದಿ: 23 ವರ್ಷ ಕಿರಿಯ ನಟಿ ಜೊತೆ ರೊಮ್ಯಾನ್ಸ್; ಆಮಿರ್ ಖಾನ್ ಸಮರ್ಥನೆ ಏನು?
ಸಣ್ಣ ಸಣ್ಣ ವಿಚಾರಗಳು ಮಗನಿಗೆ ಏಕೆ ಅರ್ಥ ಆಗುವುದಿಲ್ಲ ಎಂಬುದು ಆಮಿರ್ ಪ್ರಶ್ನೆ ಆಗಿತ್ತು. ಫಾರ್ ಬರೆಯೇಬೇಕಿದ್ದರೆ ಫ್ರಾಮ್ ಎಂದು ಬರೆಯುತ್ತಿದ್ದರು ಜುನೈದ್. ರೋಗದ ವಿಚಾರ ತಿಳಿದ ಬಳಿಕ ಆಮಿರ್ ಖಾನ್ ಅವರು ಮಗನ ನೋಡುವ ರೀತಿ ಸಂಪೂರ್ಣವಾಗಿ ಬದಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.