ಹೊಸ ಸಿನಿಮಾದ ಟೈಟಲ್ ಬದಲಿಸಿದ ವಿವೇಕ್ ಅಗ್ನಿಹೋತ್ರಿ; ‘ದೆಹಲಿ ಫೈಲ್ಸ್’ ಈಗ ‘ಬೆಂಗಾಲ್ ಫೈಲ್ಸ್’
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಮೊದಲು ‘ದಿ ದೆಹಲಿ ಫೈಲ್ಸ್’ ಎಂಬ ಟೈಟಲ್ ಇತ್ತು. ಈಗ ‘ದಿ ಬೆಂಗಾಲ್ ಫೈಲ್ಸ್’ ಎಂದು ಬದಲಾವಣೆ ಆಗಿದೆ. ಅಂದಹಾಗೆ, ಈ ಸಿನಿಮಾ ಕೂಡ ನೈಜ ಘಟನೆ ಆಧಾರಿತ ಆಗಿರಲಿದೆ. ಆ ಬಗ್ಗೆ ಇಲ್ಲಿದೆ ವಿವರ..

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ರಿಯಲ್ ಲೈಫ್ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವ ಮೂಲಕ ಫೇಮಸ್ ಆಗಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಆ ಬಳಿಕ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮಾಡಿದರು. ಆದರೆ ಆ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಲಿಲ್ಲ. ಈಗ ವಿವೇಕ್ ಅಗ್ನಿಹೋತ್ರಿ ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಸಿನಿಮಾದ ಟೈಟಲ್ ಬದಲಾಯಿಸಿದ್ದಾರೆ. ಈ ಮೊದಲು ‘ದಿ ದೆಹಲಿ ಫೈಲ್ಸ್’ (The Delhi Files) ಎಂದು ಶೀರ್ಷಿಕೆ ಇಡಲಾಗಿತ್ತು. ಆದರೆ ಈಗ ವಿವೇಕ್ ಅಗ್ನಿಹೋತ್ರಿ ಅವರು ಕಾರಣಾಂತರಗಳಿಂದ ತಮ್ಮ ಹೊಸ ಸಿನಿಮಾದ ಶೀರ್ಷಿಕೆಯನ್ನು ‘ದಿ ಬೆಂಗಾಲ್ ಫೈಲ್ಸ್’ (The Bengal Files) ಎಂದು ಬದಲಾಯಿಸಿದ್ದಾರೆ.
ಈ ಬದಲಾವಣೆಗೆ ಕಾರಣ ಏನು ಎಂಬುದನ್ನು ಕೂಡ ವಿವೇಕ್ ಅಗ್ನಿಹೋತ್ರಿ ಅವರು ವಿವರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಜೂನ್ 12ರಂದು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಈ ವರ್ಷ ಸೆಪ್ಟೆಂಬರ್ 5ರಂದು ಸಿನಿಮಾ ತೆರೆಕಾಣಿಸಲು ಪ್ಲ್ಯಾನ್ ಮಾಡಲಾಗಿದೆ.
‘ಈ ಸಿನಿಮಾ ಇರುವುದು ಬೆಂಗಾಲ್ ಬಗ್ಗೆ. ಸಿನಿಮಾ ಶುರು ಮಾಡಿದಾಗ ಎರಡು ಪಾರ್ಟ್ ಮಾಡುವ ಆಲೋಚನೆ ಇತ್ತು. ಅದರಲ್ಲಿ ಮೊದಲ ಪಾರ್ಟ್ಗೆ ದೆಹಲಿ ಫೈಲ್ಸ್ ಎಂದು ಹೆಸರಿಟ್ಟು, ಎರಡನೇ ಪಾರ್ಟ್ಗೆ ಬೆಂಗಾಲ್ ಚಾಪ್ಟರ್ ಎಂದು ಶೀರ್ಷಿಕೆ ಇಡಲು ತೀರ್ಮಾನಿಸಲಾಗಿತ್ತು. ಆದರೆ ಜನರು ‘ಬೆಂಗಾಲ್ ಫೈಲ್ಸ್’ ಎಂದು ಹೆಸರಿಡಲು ಸೂಚಿಸಿದರು’ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.
View this post on Instagram
ಟೈಟಲ್ ಬದಲಾವಣೆ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅವರು ಸಮೀಕ್ಷೆ ನಡೆಸಿದರು. ಅದರಲ್ಲಿ ಶೇಕಡ 99ರಷ್ಟು ಜನರು ಶೀರ್ಷಿಕೆ ಬದಲಾವಣೆಗೆ ಸೂಚಿಸಿದರು. ಜನರ ಅಭಿಪ್ರಾಯ ಸರಿ ಎನಿಸಿದ್ದರಿಂದ ವಿವೇಕ್ ಅಗ್ನಿಹೋತ್ರಿ ಅವರು ಶೀರ್ಷಿಕೆ ಬದಲಾವಣೆ ಮಾಡಿದರು. ಈ ಪ್ರಾಜೆಕ್ಟ್ನ ಎರಡನೇ ಪಾರ್ಟ್ ಶೀರ್ಷಿಕೆ ಕೂಡ ಬದಲಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಡಾಕ್ಟರೇಟ್ ಗೌರವ
‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ, ಗೋವಿಂದ್ ಮಹಾದೇವ್ ಮುಂತಾದವರು ನಟಿಸುತ್ತಿದ್ದಾರೆ. ಅಭಿಷೇಕ್ ಅಗರ್ವಾಲ್, ಪಲ್ಲವಿ ಜೋಶಿ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ‘ದಿ ಬೆಂಗಾಲ್ ಫೈಲ್ಸ್’ ಶೀರ್ಷಿಕೆಗೆ ‘ರೈಟ್ ಟು ಲೈಫ್’ ಎಂಬ ಟ್ಯಾಗ್ ಲೈನ್ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.