ದಕ್ಷಿಣದವರನ್ನು ನೋಡಿ ಬಾಲಿವುಡ್​ ಮಂದಿ ಕಲಿಯಬೇಕು: ಆಮಿರ್ ಖಾನ್

ಹಿಂದಿ ಸಿನಿಮಾಗಳ ಸೋಲಿಗೆ ಆಮಿರ್ ಖಾನ್ ಅವರು ಕಾರಣ ಹುಡುಕಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತಾಡಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯನ್ನು ನೋಡಿ ಹಿಂದಿ ಚಿತ್ರರಂಗದವರು ಕಲಿಯುವುದು ತುಂಬಾ ಇದೆ ಎಂದು ಆಮಿರ್ ಖಾನ್ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ದಕ್ಷಿಣದವರನ್ನು ನೋಡಿ ಬಾಲಿವುಡ್​ ಮಂದಿ ಕಲಿಯಬೇಕು: ಆಮಿರ್ ಖಾನ್
Aamir Khan

Updated on: May 07, 2025 | 6:55 PM

ಬಾಲಿವುಡ್​ನ ಸ್ಟಾರ್ ನಟರ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್​ನಲ್ಲಿ ಸೋಲುತ್ತಿವೆ. ಆಮಿರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮುಂತಾದ ಹೀರೋಗಳ ಸಿನಿಮಾಗಳು ನೆಲ ಕಚ್ಚಿವೆ. ಇದಕ್ಕೆ ಕಾರಣ ಏನು ಎಂದು ಚರ್ಚೆ ಮಾಡಲಾಗುತ್ತಿದೆ. ನಟ ಆಮಿರ್ ಖಾನ್ (Aamir Khan) ಅವರು ಈ ಕುರಿತು ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದಿ ಸಿನಿಮಾಗಳ ಪರಿಸ್ಥಿತಿ ಬಗ್ಗೆ ಅವರು ವಿವರಿಸಿದ್ದಾರೆ. ಬಾಲಿವುಡ್​ನ (Bollywood) ಬಿಸ್ನೆಸ್ ಮಾದರಿ ಸರಿ ಇಲ್ಲ. ದಕ್ಷಿಣ ಭಾರತದ ಚಿತ್ರರಂಗವನ್ನು ನೋಡಿ ಬಾಲಿವುಡ್ ಮಂದಿ ಕಲಿಯಬೇಕು ಎಂದು ಆಮಿರ್ ಖಾನ್ ಹೇಳಿದ್ದಾರೆ.

‘ಎಲ್ಲಕ್ಕಿಂತ ಮೊದಲು ನಾವು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಹಿಂದಿ ಸಿನಿಮಾದ ನಿರ್ದೇಶಕರು, ಬರಹಗಾರರು, ನಿರ್ಮಾಪಕರು ಸಾಕಷ್ಟು ಕಲಿಯುವುದು ಇದೆ. ಸದ್ಯಕ್ಕೆ ನಮ್ಮ ಬಿಸ್ನೆಸ್ ಮಾಡೆಲ್ ವಿಚಿತ್ರವಾಗಿದೆ. ನಾವು ಜನರನ್ನು ಚಿತ್ರಮಂದಿರಕ್ಕೆ ಕರೆಯುತ್ತೇವೆ. ಆದರೆ ಅವರು ಥಿಯೇಟರ್​ಗೆ ಬರದೇ ಇದ್ದರೆ, ಕೂಡಲೇ ನಾವು ಒಟಿಟಿಯಲ್ಲಿ ರಿಲೀಸ್ ಮಾಡುತ್ತೇವೆ. ಇದರಿಂದಾಗಿ ನಮ್ಮ ಸಿನಿಮಾಗೆ ತೊಂದರೆ ಆಗಿದೆ’ ಎಂದಿದ್ದಾರೆ ಆಮಿರ್ ಖಾನ್.

ಕೊವಿಡ್ ಕೂಡ ಸಿನಿಮಾ ಮೇಲೆ ಪರಿಣಾಮ ಬೀರಿವೆ ಎಂದು ಆಮಿರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಕೊವಿಡ್​ನಿಂದಾಗಿ ಜನರು ಸಿನಿಮಾ ನೋಡುವ ರೀತಿಯೇ ಬದಲಾಗಿದೆ. ನಿರ್ಮಾಪಕರು ನೇರವಾಗಿ ಒಟಿಟಿಗೆ ಸಿನಿಮಾ ಮಾಡಲು ಶುರು ಮಾಡಿದ್ದಾರೆ. ಜನರಿಗೂ ಮನೆಯಲ್ಲೇ ಮನರಂಜನೆ ಪಡೆಯುವುದು ಅಭ್ಯಾಸ ಆಗಿದೆ. ಸಿನಿಮಾ ಬಿಡುಗಡೆಯಾಗಿ ಒಟಿಟಿಗೆ ಬರಲು 6 ತಿಂಗಳು ಅಂತರ ಇರಬೇಕು ಎಂದು ಆಮಿರ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಇದನ್ನೂ ಓದಿ: ಬಾಲಿವುಡ್​ಗೆ ಕೆಟ್ಟ ಭಾಷೆಯಲ್ಲಿ ಬೈಯ್ದು, ಅಳುತ್ತಾ ವಿಡಿಯೋ ಮಾಡಿದ ಇರ್ಫಾನ್ ಖಾನ್ ಮಗ ಬಾಬಿಲ್ ಖಾನ್

ಸದ್ಯ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಹೊಸ ಕಲಾವಿದರಿಗೆ ಈ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. ಜೂನ್ 20ರಂದು ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಆಗಲಿದೆ. ಇದು ಆಮಿರ್ ಖಾನ್ ಅವರ ಕಮ್​ಬ್ಯಾಕ್ ಸಿನಿಮಾ ಎಂಬ ಕಾರಣಕ್ಕೆ ಜನರಿಗೆ ನಿರೀಕ್ಷೆ ಇದೆ.

ಆಮಿರ್ ಖಾನ್ ಅವರು 2022ರಲ್ಲಿ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೀನಾಯವಾಗಿ ಸೋತಿತು. ಆ ಬಳಿಕ ಆಮಿರ್ ಖಾನ್ ಹೊಸ ಸಿನಿಮಾ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.