ತಮ್ಮದೇ ಸಿನಿಮಾ ಪ್ರೀಮಿಯರ್ಗೆ ಗೈರಾದ ಆಮಿರ್: ಶಾಕ್ನಿಂದ ಇನ್ನೂ ಹೊರ ಬಂದಿಲ್ಲ
Aamir Khan: ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ‘ಅಂದಾಜ್ ಅಪ್ನಾ ಅಪ್ನಾ’ ರೀ ರಿಲೀಸ್ ಆಗಿದ್ದು, ಈ ಸಿನಿಮಾದ ವಿಶೇಷ ಸ್ಕ್ರೀನಿಂಗ್ ಅನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಆಮಿರ್ ಖಾನ್ ನಿರ್ಮಾಣ ಸಂಸ್ಥೆಯಿಂದಲೇ ಈ ಸಿನಿಮಾದ ರೀ ರಿಲೀಸ್ ಆಯೋಜಿಸಲಾಗಿತ್ತು. ಆದರೆ ಸ್ವತಃ ಆಮಿರ್ ಖಾನ್ ಅವರೇ ಸ್ಕ್ರೀನಿಂಗ್ಗೆ ಗೈರಾದರು. ಆದರೆ ಇದಕ್ಕೆ ಮಹತ್ವದ ಕಾರಣ ಇದೆ.

ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್ನಲ್ಲಿ ನಡೆದ ದಾಳಿ ಇಡೀ ದೇಶಕ್ಕೆ ಶಾಕ್ ಕೊಟ್ಟಿದೆ. ಇದಕ್ಕೆ ಚಿತ್ರರಂಗ ಕೂಡ ಹೊರತಾಗಿಲ್ಲ ಎನ್ನಬಹುದು. ಸಿನಿಮಾ ಇಂಡಸ್ಟ್ರಿಯ ಅನೇಕರು ಈ ಬಗ್ಗ ಸಂತಾಪ ಸೂಚಿಸಿದ್ದಾರೆ. ಪಾಕಿಸ್ತಾನಿ ನಟ ಫವಾದ್ ಖಾನ್ ಅವರ ‘ಅಬಿರ್ ಗುಲಾಲ್’ ಸಿನಿಮಾಗೆ ತಡೆ ಬಿದ್ದಿದ್ದು, ಈ ಚಿತ್ರ ಪ್ರದರ್ಶನ ಕಾಣದು ಎಂದಿದೆ. ಈ ಮಧ್ಯೆ 1994ರ ಕಲ್ಟ್ ಕಾಮಿಡಿ ಸಿನಿಮಾ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾದ ಪ್ರೀಮಿಯರ್ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಆಮಿರ್ ಖಾನ್ ಗೈರಾಗಿದ್ದಾರೆ. ಇದಕ್ಕೆ ಕಾರಣ ಪಹಲ್ಗಾಮ್ ದಾಳಿಯಿಂದ ಆದ ನೋವು ಎನ್ನಲಾಗಿದೆ.
1994ರಲ್ಲಿ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾ ರಿಲೀಸ್ ಆಯಿತು. ಆಮಿರ್ ಖಾನ್, ಸಲ್ಮಾನ್ ಖಾನ್, ಕರೀಷ್ಮಾ ಕಪೂರ್, ರವೀನಾ ಟಂಡನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಇಂದಿಗೆ (ಏಪ್ರಿಲ್ 25) ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 31 ವರ್ಷ ಕಳೆದಿದೆ. ಈ ಕಾರಣಕ್ಕೆ ಸಿನಿಮಾ ರೀ-ರಿಲೀಸ್ ಆಗಿದ್ದು, ವಿಶೇಷ ಪ್ರೀಮಿಯರ್ ಆಯೋಜನೆ ಮಾಡಲಾಗಿತ್ತು. ಆದರೆ, ಆಮಿರ್ ಖಾನ್ ಇದರಲ್ಲಿ ಭಾಗಿ ಆಗಿಲ್ಲ.
‘ಕಾಶ್ಮೀರದಲ್ಲಿ ಏನಾಯಿತು ಎಂಬುದನ್ನು ವರದಿಗಳಲ್ಲಿ ನೋಡಿದ್ದೇನೆ. ಮುಗ್ಧರ ಸಾವಿನಿಂದ ನಾನು ಸಾಕಷ್ಟು ಬೇಸರಗೊಂಡಿದ್ದೇನೆ. ನನಗೆ ಪ್ರೀಮಿಯರ್ಗೆ ಹೋಗುವ ಮನಸ್ಥಿತಿ ಇಲ್ಲ. ಈ ವಾರದಲ್ಲೇ ಇನ್ಯಾವಾಗಾದರೂ ಸಿನಿಮಾನ ವೀಕ್ಷಣೆ ಮಾಡುತ್ತೇನೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ:ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಖಾನ್ ಸಿನಿಮಾ ರಿಲೀಸ್
‘ಅಂದಾಜ್ ಅಪ್ನಾ ಅಪ್ನಾ ಸಿನಿಮಾದ ಮೇಲೆ ಯಾರಿಗೂ ನಂಬಿಕೆ ಇರಲಿಲ್ಲ. ನಾನು ಹಾಗೂ ರಾಜ್ ಸಂತೋಷಿ ಮಾತ್ರ ಇದನ್ನು ನಂಬಿದ್ದೆವು. ಆರಂಭದಲ್ಲಿ ಸಿನಿಮಾ ಉತ್ತಮ ವಿಮರ್ಶೆ ಪಡೆಯದ್ದಾಗ ಬೇಸರ ಆಯಿತು. ಆದರೆ, ಅದು ಸೂಪರ್ ಹಿಟ್ ಆಯಿತು. ಇದು ಖುಷಿ ನೀಡಿತು’ ಎಂದು ಆಮಿರ್ ಖಾನ್ ಹೇಳಿದ್ದಾರೆ.
‘ಅಂದಾಜ್ ಅಪ್ನಾ ಅಪ್ನಾ’ ಆರಂಭದಲ್ಲಿ ಫೇಲ್ ಆಗಿತ್ತು. ಆ ಬಳಿಕ ಜನರು ಸಿನಿಮಾ ಇಷ್ಟಪಟ್ಟರು. ರಾಜ್ಕುಮಾರ್ ಸಂತೋಷಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ವೃತ್ತಿ ಜೀವನಕ್ಕೆ ಸಿನಿಮಾ ಸಹಕಾರಿ ಆಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:24 pm, Fri, 25 April 25



