
2007ರಲ್ಲಿ ಆಮಿರ್ ಖಾನ್ (Aamir Khan) ನಿರ್ದೇಶನದ ‘ತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಈಗ ಆ ಸಿನಿಮಾ ರೀತಿಯ ಮತ್ತೊಂದು ಕಾನ್ಸೆಪ್ಟ್ ಇಟ್ಟುಕೊಂಡು ‘ಸಿತಾರೆ ಜಮೀನ್ ಪರ’ ಸಿನಿಮಾ ಮಾಡಲಾಗಿದೆ. ಈ ಸಿನಿಮಾ ಘೋಷಣೆ ಆದಾಗಿನಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಈಗ ‘ಸಿತಾರೆ ಜಮೀನ್ ಪರ್’ (Sitaare Zameen Par) ಚಿತ್ರತಂಡದಿಂದ ಅಪ್ಡೇಟ್ ನೀಡಲಾಗಿದೆ. ಈ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಅಲ್ಲದೇ, ಚಿತ್ರದ ರಿಲೀಸ್ ದಿನಾಂಕವನ್ನು ಕೂಡ ಘೋಷಿಸಲಾಗಿದೆ. ಜೂನ್ 20ರಂದು ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಆಗಲಿದೆ.
‘ಸಿತಾರೆ ಜಮೀನ್ ಪರ್’ ಚಿತ್ರದ ಪೋಸ್ಟರ್ ಬಿಡುಗಡೆಯಿಂದ ಅಭಿಮಾನಿಗಳಲ್ಲಿ ಇರುವ ನಿರೀಕ್ಷೆ ಇನ್ನಷ್ಟು ಜಸ್ತಿ ಆಗಿದೆ. ಈ ಪೋಸ್ಟರ್ನಲ್ಲಿ ಆಮಿರ್ ಖಾನ್ ಜೊತೆ ಸಾಕಷ್ಟು ಮಂದಿ ಹೊಸ ಕಲಾವಿದರು ಕಾಣಿಸಿಕೊಂಡಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಾಗಿದೆ. ಆಮಿರ್ ಖಾನ್ ನಿರ್ಮಾಣ ಸಂಸ್ಥೆ ಮೂಲಕ 10 ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ.
ಆರೋಶ್ ದತ್ತ, ಗೋಪಿ ಕೃಷ್ಣ ವರ್ಮಾ, ಸಮ್ವಿತ್ ದೇಸಾಯಿ, ವೇದಾಂತ್ ಶರ್ಮಾ, ಆಯುಶ್ ಬನ್ಸಾಲಿ, ಆಶಿಶ್ ಪೆಂಡ್ಸೆ, ರಿಶಿ ಶಹಾನಿ, ರಿಷಬ್ ಜೈನ್, ಮಮನ್ ಮಿಶ್ರಾ, ಸಿಮ್ರನ್ ಮಂಗೇಶ್ಕರ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪೋಸ್ಟರ್ ನೋಡಿದವರಿಗೆ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ.
‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಲಕ ಆಮಿರ್ ಖಾನ್ ಅವರು ಬೆಳ್ಳಿತೆರೆಗೆ ಕಮ್ಬ್ಯಾಕ್ ಮಾಡುತ್ತಿದ್ದಾರೆ ಎಂಬುದು ವಿಶೇಷ. ಆ ಕಾರಣದಿಂದಲೂ ಆಮಿರ್ ಖಾನ್ ಅವರ ಅಭಿಮಾನಿಗಳು ಈ ಚಿತ್ರ ನೋಡಲು ಕಾತರರಾಗಿದ್ದಾರೆ. ಆಮಿರ್ ಖಾನ್ ಅವರಿಗೆ ಜೋಡಿಯಾಗಿ ಜೆನಿಲಿಯಾ ದೇಶಮುಖ್ ಅವರು ನಟಿಸಿದ್ದಾರೆ. ಈ ಬಾರಿ ಆಮಿರ್ ಖಾನ್ ಅವರು ಯಾವ ವಿಷಯವನ್ನು ಪ್ರೇಕ್ಷಕರಿಗೆ ತಿಳಿಸಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ.
ಇದನ್ನೂ ಓದಿ: ಮಾಜಿ ಪತ್ನಿಯರ ಜತೆ ಈದ್ ಆಚರಿಸಿದ ಆಮಿರ್ ಖಾನ್; ಕಿರಣ್ ರಾವ್, ರೀನಾ ದತ್ತ ಫೋಟೋ ವೈರಲ್
ಆರ್.ಎಸ್. ಪ್ರಸನ್ನ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಶುಭಮಂಗಲ್ ಸಾವಧಾನ್’ ಸಿನಿಮಾವನ್ನು ಅವರು ನಿರ್ದೇಶಿಸಿದ್ದರು. ಡಿಫರೆಂಟ್ ಕಥೆ ಇರುವ ಸಿನಿಮಾವನ್ನ ಅವರು ಮಾಡುತ್ತಾರೆ ಎಂಬ ಭರವಸೆ ಪ್ರೇಕ್ಷಕರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Mon, 5 May 25