ಸೋನಂ ಕಪೂರ್ ಮಾವನಿಗೆ ಬರೋಬ್ಬರಿ ₹ 27 ಕೋಟಿ ವಂಚಿಸಿದ್ದ ಸೈಬರ್ ವಂಚಕರ ಬಂಧನ; ಓರ್ವ ಆರೋಪಿ ಕರ್ನಾಟಕದವನು!

| Updated By: shivaprasad.hs

Updated on: Mar 12, 2022 | 6:50 PM

Sonam Kapoor: ಬಾಲಿವುಡ್​ನ ಖ್ಯಾತ ನಟಿ ಸೋನಂ ಕಪೂರ್ ಮಾವನಿಗೆ ವಂಚಿಸಿದ್ದ ಆರೋಪಿಗಳನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ. ಹೈಫೈ ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿಗಳು ಸೋನಂ ಕಪೂರ್ ಮಾವ ಹರೀಶ್ ಅಹುಜಾರ ಕಂಪನಿಗೆ ಬರೋಬ್ಬರಿ 27 ಕೋಟಿ ರೂ ಗೂ ಹೆಚ್ಚು ಮೊತ್ತವನ್ನು ವಂಚಿಸಿದ್ದರು.

ಸೋನಂ ಕಪೂರ್ ಮಾವನಿಗೆ ಬರೋಬ್ಬರಿ ₹ 27 ಕೋಟಿ ವಂಚಿಸಿದ್ದ ಸೈಬರ್ ವಂಚಕರ ಬಂಧನ; ಓರ್ವ ಆರೋಪಿ ಕರ್ನಾಟಕದವನು!
ಪತಿಯೊಂದಿಗೆ ಸೋನಮ್ ಕಪೂರ್ (ಎಡ), ಹರೀಶ್ ಅಹುಜಾ (ಬಲ)
Follow us on

ಫರೀದಾಬಾದ್: ಬಾಲಿವುಡ್​ನ ಖ್ಯಾತ ನಟಿ ಸೋನಂ ಕಪೂರ್ (Sonam Kapoor) ಮಾವನಿಗೆ ವಂಚಿಸಿದ್ದ ಆರೋಪಿಗಳನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ. ಹೈಫೈ ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿಗಳು ಸೋನಂ ಕಪೂರ್ ಮಾವ ಹರೀಶ್ ಅಹುಜಾರ ಕಂಪನಿಗೆ ಬರೋಬ್ಬರಿ 27 ಕೋಟಿ ರೂ ಗೂ ಹೆಚ್ಚು ಮೊತ್ತವನ್ನು ವಂಚಿಸಿದ್ದರು. ಫರಿದಾಬಾದ್ ಮೂಲದ ಶಾಹಿ ಎಕ್ಸ್ ಪೋರ್ಟ್ ಫ್ಯಾಕ್ಟರಿಯನ್ನು ಹರೀಶ್ ಅಹುಜಾ ನಡೆಸುತ್ತಿದ್ದರು. ಕಂಪನಿಯ ರಾಜ್ಯ ಮತ್ತು ಕೇಂದ್ರ ತೆರಿಗೆಗಳ ರಿಯಾಯಿತಿ ಮತ್ತು ಲೆವಿಸ್ ಪರವಾನಗಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ವಂಚಕರು 27 ಕೋಟಿ ರೂಗೂ ಹೆಚ್ಚು ಹಣವನ್ನು ವಂಚಿಸಿದ್ದಾರೆ. ಡಿಜಿಟಲ್ ಸಿಗ್ನೇಚರ್ ಪ್ರಮಾಣ ಪತ್ರಗಳನ್ನು ಬಳಸಿ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫರಿದಾಬಾದ್ ಉಪಪೊಲೀಸ್ ಆಯುಕ್ತ ನಿತೀಶ್ ಅಗರ್ವಾಲ್ ಪ್ರಕರಣ ಕುರಿತು ಮಾಹಿತಿ ನೀಡಿ, ‘‘ಈ ಆರ್​​ಒಎಸ್​​ಸಿಟಿಎಲ್ (ROSCTL) ಪರವಾನಗಿಗಳು ಹಲವಾರು ಲಕ್ಷ ರೂಪಾಯಿ ಮೌಲ್ಯದ ಡಿಜಿಟಲ್ ಕೂಪನ್‍ಗಳಿಗೆ ಸಮವಾಗಿವೆ. ವಂಚಕರು ಅಹುಜಾರ ಸಂಸ್ಥೆಯ ಡಿಜಿಟಲ್ ಕೂಪನ್ ಬಳಸಿಕೊಂಡು 27.61 ಕೋಟಿ ರೂ ವಂಚಿಸಿದ್ದಾರೆ. ಈ ಡಿಜಿಟಲ್ ಕೂಪನ್​ಗಳನ್ನು ಇತರ ಸಂಸ್ಥೆಗಳಿಗೆ ವಂಚಕರು ವರ್ಗಾಯಿಸುತ್ತಿದ್ದರು. ಈ ಮೂಲಕ ಅವರು ಎನ್​ಕ್ಯಾಶ್ ಮಾಡಿಕೊಳ್ಳುತ್ತಿದ್ದರು’’ ಎಂದಿದ್ದಾರೆ.

ಹರೀಶ್ ಅಹುಜಾ ಈ ಪ್ರಕರಣದ ಸಂಬಂಧ ಕಳೆದ ಜುಲೈನಲ್ಲಿ ದೂರು ನೀಡಿದ್ದರು. ಅದನ್ನು ಆಧರಿಸಿ ಆ ಸಮಯದಿಂದಲೇ ಗುಪ್ತವಾಗಿ ತನಿಖೆ ನಡೆಸಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿದೆಡೆಯಿಂದ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಕರ್ನಾಟಕ ಇಬ್ಬರು ಸೇರಿದಂತೆ ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಹಲವೆಡೆಯ ಆರೋಪಿಗಳಿದ್ದಾರೆ ಎಂದು ನಿತೀಶ್ ಅಗರ್ವಾಲ್ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧ ಡಿಸೆಂಬರ್ 23ರಂದು ಕೊನೆಯದಾಗಿ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿಗಳಲ್ಲಿ ನಿವೃತ್ತ ಗುಮಾಸ್ತರು, ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ ಉದ್ಯೋಗಿಗಳು ಸೇರಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ಆರೋಪಿಗಳು ಎಲ್ಲಿಯವರು?

ಡಿಸಿಪಿ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ದೆಹಲಿಯ ಮನೋಜ್ ರಾಣಾ, ಮನೀಶ್ ಕುಮಾರ್, ಪ್ರವೀಣ್ ಕುಮಾರ್, ಲಲಿತ್ ಕುಮಾರ್ ಜೈನ್, ಮನೀಶ್ ಕುಮಾರ್ ಮೋಗಾ ಎಂದು ಗುರುತಿಸಲಾಗಿದೆ. ಜತೆಗೆ ಮುಂಬೈನ ಭೂಷಣ್ ಕಿಶನ್ ಥಾಕೂರ್, ಚೆನ್ನೈನ ಸುರೇಶ್ ಕುಮಾರ್, ಯಾಯಗಡದ ರಾಹುಲ್ ರಘುನಾಥ್, ಪುಣೆಯ ಸಂತೋಷ್ ಸೀತಾರಾಮ್ ಎಂಬ ಆರೋಪಿಗಳನ್ನೂ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸಿಲುಕಿರುವ ಮತ್ತೋರ್ವ ಆರೋಪಿ ಕರ್ನಾಟಕದ ರಾಯಚೂರಿನ ಗಣೇಶ್ ಪರಶುರಾಮ್ ಎಂದು ಗುರುತಿಸಲಾಗಿದೆ.

ಆರೋಪಿಗಳಾದ ಮನೋಜ್ ರಾಣಾ, ಮನೀಶ್ ಕುಮಾರ್, ಪ್ರವೀಣ್ ಕುಮಾರ್ ಮತ್ತು ಮನೀಶ್ ಕುಮಾರ್ ಮೋಗಾ ಈ ಹಿಂದೆ ಡಿಜಿಎಫ್‍ಟಿಯಲ್ಲಿ ಕೆಲಸ ಮಾಡಿದ್ದು, ನಿರ್ದೇಶನಾಲಯದ ಕೆಲಸದಲ್ಲಿ ಪರಿಣತಿ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:

ಪನೀರ್ ನಲ್ಲಿ ಅದ್ಭುತವಾಗಿ ಮೂಡಿಬಂದ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರ

Kichcha Sudeep: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತಕ್ಕೆ ಹುರಿದುಂಬಿಸುತ್ತಿರುವ ಕಿಚ್ಚ; ಅಪ್ಪು ಫೋಟೋ ಜತೆ ಪೋಸ್