ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ (Raj Kundra) ಸಿನಿಮಾ ದಂಧೆ ಕೇಸ್ನಲ್ಲಿ ಅರೆಸ್ಟ್ ಆದ ಬಳಿಕ ಅನೇಕ ನಟಿಯರ ಹೆಸರು ಮುನ್ನೆಲೆಗೆ ಬಂದಿದೆ. ಶಿಲ್ಪಾ ಶೆಟ್ಟಿ (Shilpa Shetty) ಪತಿ ಜೊತೆ ಸಂಪರ್ಕ ಹೊಂದಿದ್ದ ಅನೇಕ ನಟಿಯರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಆ ಪೈಕಿ ಗೆಹನಾ ವಸಿಷ್ಠ್ (Gehana Vasisth) ಮೇಲೆ ಗಂಭೀರ ಆರೋಪಗಳಿವೆ. ಗೆಹನಾ ಕೂಡ ನೀಲಿ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು ಎನ್ನಲಾಗಿದೆ. ಆದರೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಬೇರೆ ವಾದ ಮಂಡಿಸುತ್ತಿದ್ದಾರೆ. ಇದರ ನಡುವೆ ಅವರು ಸೋಶಿಯಲ್ ಮೀಡಿಯಾದಲ್ಲಿ ನಗ್ನವಾಗಿ ಲೈವ್ ಬಂದು ಸವಾಲು ಹಾಕಿದ್ದಾರೆ!
‘ಬಟ್ಟೆಗಳನ್ನು ಧರಿಸದೇ ನಾನು ಲೈವ್ ಬಂದಿದ್ದೇನೆ. ಆದರೂ ಕೂಡ ಇದನ್ನು ಪೋರ್ನ್ ಎಂದು ಯಾರೂ ಹೇಳುತ್ತಿಲ್ಲ. ಆದರೆ ನಾನು ಬಟ್ಟೆ ಧರಿಸಿ ನಟಿಸಿದಾಗ ಅದನ್ನು ಕೆಲವರು ಅಶ್ಲೀಲ ಸಿನಿಮಾ ಎನ್ನುತ್ತಾರೆ. ಇದು ಬೂಟಾಟಿಕೆಯ ಉತ್ತುಂಗ’ ಎಂಬ ಕ್ಯಾಪ್ಷನ್ನೊಂದಿಗೆ ಅವರು ಲೈವ್ ಬಂದಿದ್ದಾರೆ. ಮೂರು ನಿಮಿಷಗಳ ಕಾಲ ಜನರ ಜೊತೆ ಅವರು ಮಾತುಕತೆ ನಡೆಸಿದ್ದಾರೆ.
‘ಸ್ನೇಹಿತರೇ ನಾನು ನಿಮ್ಮ ಮುಂದೆ ಲೈವ್ ಬಂದಿದ್ದೇನೆ. ನಿಮ್ಮ ಕಣ್ಣಿಗೆ ನಾನು ಅಶ್ಲೀಲವಾಗಿ ಕಾಣಿಸುತ್ತಿದ್ದೇನಾ? ಇದನ್ನು ಪೋರ್ನ್ ಎನ್ನಲಾಗುತ್ತಾ? ನಾನು ಏನೂ ಧರಿಸಿಲ್ಲ. ಆದರೂ ಇದನ್ನು ಪೋರ್ನ್ ಎಂದು ಯಾರೂ ಹೇಳುತ್ತಿಲ್ಲ. ಆದರೆ ನಾನು ಬೇರೆ ವಿಡಿಯೋಗಳಲ್ಲಿ ಒಳ್ಳೆಯ ಬಟ್ಟೆ ಧರಿಸಿದ್ದರೂ ಕೂಡ ಅವುಗಳನ್ನು ಅಶ್ಲೀಲ ಸಿನಿಮಾ ಎಂದು ಹೇಳಲಾಗಿದೆ. ಅದು ತಪ್ಪಲ್ಲವೇ? ಎಲ್ಲರೂ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಬೂಟಾಟಿಕೆಗೂ ಒಂದು ಮಿತಿ ಇರಬೇಕು’ ಎಂದು ಗೆಹನಾ ಲೈವ್ನಲ್ಲಿ ಹೇಳಿದ್ದಾರೆ.
ಅಶ್ಲೀಲ ಸಿನಿಮಾ ದಂಧೆಯಲ್ಲಿ ಗೆಹನಾ ನಟಿಸುತ್ತಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದರು. ಈಗ ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ. ತಾನು ನಟಿಸಿರುವುದು ಬೋಲ್ಡ್ ಸಿನಿಮಾಗಳೇ ಹೊರತು ಅಶ್ಲೀಲ ಸಿನಿಮಾಗಳಲ್ಲ ಎಂಬುದು ಗೆಹನಾ ವಾದ. ಅದನ್ನೇ ಸಾಬೀತುಪಡಿಸುವ ಸಲುವಾಗಿ ಅವರು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದು ಜನರಿಗೆ ಮತ್ತು ತಮ್ಮನ್ನು ಅರೆಸ್ಟ್ ಮಾಡಿದ್ದ ಪೊಲೀಸರಿಗೆ ಸವಾಲು ಹಾಕಿದ್ದಾರೆ. ಅರೆಸ್ಟ್ ಆಗುವುದನ್ನು ತಪ್ಪಿಸಲು ಪೊಲೀಸರು 15 ಲಕ್ಷ ಲಂಚ ಕೇಳಿದ್ದರು, ರಾಜ್ ಕುಂದ್ರಾ ಹೆಸರನ್ನು ಉಲ್ಲೇಖಿಸುವಂತೆ ಒತ್ತಡ ಹೇರಿದ್ದರು ಎಂದು ಕೂಡ ಈ ಹಿಂದೆ ಗೆಹನಾ ಆರೋಪಿಸಿದ್ದರು.
ಇದನ್ನೂ ಓದಿ:
ಪೊಲೀಸರು ನನ್ನಿಂದ ಬಲವಂತವಾಗಿ ರಾಜ್ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ
ಅಶ್ಲೀಲ ಸಿನಿಮಾ ದಂಧೆಗೆ ಹುಡುಗಿಯರನ್ನು ಹೇಗೆ ತಳ್ಳುತ್ತಿದ್ದರು? ಯುವತಿಯರನ್ನು ಬೆಚ್ಚಿ ಬೀಳಿಸುವ ವಿವರ ಇಲ್ಲಿದೆ