Kareena Kapoor: ಕೊರೊನಾ ಬಂದು ಕ್ವಾರಂಟೈನ್​ನಲ್ಲಿರುವ ಕರೀನಾಗೆ ಸಮಾಧಾನ ನೀಡಿದ ಒಮಿಕ್ರಾನ್ ರಿಪೋರ್ಟ್

Saif Ali Khan: ಬಾಲಿವುಡ್ ನಟಿ ಕರೀನಾ ಕಪೂರ್​ಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ಕರೀನಾ ಮತ್ತು ಅವರ ಸ್ನೇಹಿತೆಯರಿಗೆ ಕೊವಿಡ್ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಒಮಿಕ್ರಾನ್ ರಿಪೋರ್ಟ್ ಬಂದಿದೆ.

Kareena Kapoor: ಕೊರೊನಾ ಬಂದು ಕ್ವಾರಂಟೈನ್​ನಲ್ಲಿರುವ ಕರೀನಾಗೆ ಸಮಾಧಾನ ನೀಡಿದ ಒಮಿಕ್ರಾನ್ ರಿಪೋರ್ಟ್
ಕರೀನಾ ಕಪೂರ್
Follow us
TV9 Web
| Updated By: shivaprasad.hs

Updated on: Dec 24, 2021 | 4:51 PM

ಬಾಲಿವುಡ್ ನಟಿ ಕರೀನಾ ಕಪೂರ್​ಗೆ (Kareena Kapoor) ಇತ್ತೀಚೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಡಿಸೆಂಬರ್ ತಿಂಗಳ ಆರಂಭದಲ್ಲಿ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ಕರೀನಾ ಹಾಗೂ ಆಕೆಯ ಸ್ನೇಹಿತೆಯರಿಗೆ ಸೋಂಕು ತಗುಲಿತ್ತು. ನಂತರದಲ್ಲಿ ಒಮಿಕ್ರಾನ್ (Omicron) ವರದಿಯನ್ನು ಪಡೆಯುವುದಕ್ಕಾಗಿ ಅವರಿಗೆ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಿ, ರಿಪೋರ್ಟ್​​ಗೆ ಕಾಯಲಾಗುತ್ತಿತ್ತು. ಸದ್ಯ ವರದಿ ಕೈಸೇರಿದ್ದು, ಕರೀನಾ ನಿಟ್ಟುಸಿರು ಬಿಟ್ಟಿದ್ದಾರೆ. ಈ ಕುರಿತು ಬೃಹನ್​ ಮುಂಬೈ ಕಾರ್ಪೊರೇಷನ್ (ಬಿಎಂಸಿ) ಸುದ್ದಿಸಂಸ್ಥೆ ಎಎನ್​ಐಗೆ ತಿಳಿಸಿದ್ದು, ‘‘ಕರೀನಾಗೆ ಒಮಿಕ್ರಾನ್ ವರದಿ ನೆಗೆಟಿವ್ ಬಂದಿದೆ’’ ಎಂದಿದೆ. ಪ್ರಸ್ತುತ ಕರೀನಾ ಕಪೂರ್ ಕೊವಿಡ್​ನಿಂದ ಚೇತರಿಸಿಕೊಳ್ಳುತ್ತಿದ್ದು, ಕ್ವಾರಂಟೈನ್​ನ 13ನೇ ದಿನದಲ್ಲಿದ್ದಾರೆ.

ಈ ತಿಂಗಳ ಆರಂಭದಲ್ಲಿ ಕರೀನಾ ಕಪೂರ್ ಮತ್ತು ಅವರ ಆಪ್ತ ಗೆಳತಿ ಅಮೃತಾ ಅರೋರಾ ಪಾರ್ಟಿಯೊಂದರಲ್ಲಿ ಭಾಗವಹಿಸಿದ ನಂತರ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸೀಮಾ ಖಾನ್ ಹಾಗೂ ಮಹೀಪ್ ಕಪೂರ್​​ಗೂ ಸೋಂಕು ಪತ್ತೆಯಾಗಿತ್ತು.

ಕರೀನಾ ಹಾಗೂ ಅವರ ಸ್ನೇಹಿತರು ಪಾರ್ಟಿಯಲ್ಲಿ ಭಾಗವಹಿಸಿ, ಕೊವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಕ್ಕೆ ಬಿಎಂಸಿ ಆಕ್ರೋಶ ಹೊರಹಾಕಿತ್ತು. ಇದಕ್ಕೆ ಕರೀನಾ ವಕ್ತಾರರು ನಟಿ ಜವಾಬ್ದಾರಿಯುತವಾಗಿ, ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು ಎಂದಿದ್ದರು.

ಕ್ವಾರಂಟೈನ್ ಸಮಯದಲ್ಲಿ ಕರೀನಾ ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂಪತರ್ಕದಲ್ಲಿದ್ದಾರೆ. ಇತ್ತೀಚೆಗೆ ಅವರು ಇನ್ನು ಕೇವಲ ಎರಡು ದಿನದಲ್ಲಿ ಕ್ವಾರಂಟೈನ್ ಮುಗಿಯಲಿದೆ ಎಂದು ಬರೆದುಕೊಂಡಿದ್ದರು. ಅದಕ್ಕೆ ಪೂರಕವಾಗಿ ಒಮಿಕ್ರಾನ್ ನೆಗೆಟಿವ್ ವರದಿ ಬಂದಿರುವುದು ಕರೀನಾಗೆ ಪ್ಲಸ್ ಆಗಿದೆ.

ಚಿತ್ರಗಳ ವಿಷಯಕ್ಕೆ ಬಂದರೆ, ಕರೀನಾ ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನದ ಈ ಚಿತ್ರವನ್ನು ಅಮೀರ್ ಖಾನ್ ಹಾಗೂ ಕಿರಣ್ ರಾವ್ ನಿರ್ಮಿಸುತ್ತಿದ್ದಾರೆ. ಹಾಲಿವುಡ್​ನ ಯಶಸ್ವಿ ಚಿತ್ರ ‘ಫಾರೆಸ್ಟ್ ಗಂಪ್​’ನ ರಿಮೇಕ್ ಇದಾಗಿದ್ದು, ಅಮೀರ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ನಾಗ ಚೈತನ್ಯ ಈ ಚಿತ್ರದ ಮುಖಾಂತರ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. 2022ರ ಏಪ್ರಿಲ್ 14ರಂದು ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ:

ಪ್ರೇಕ್ಷಕರಿಗೆ ‘ಬಡವ ರಾಸ್ಕಲ್​’ ಚಿತ್ರ ಇಷ್ಟವಾಯ್ತಾ? ಧನಂಜಯ ಅಭಿಮಾನಿಗಳು ಹೇಳಿದ್ದೇನು?

‘ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜತೆ ಸಮಂತಾ ಮತ್ತೊಂದು ವೆಬ್​ ಸೀರಿಸ್​; ಆ್ಯಕ್ಷನ್​ನಲ್ಲಿ ಮಿಂಚಲಿದ್ದಾರೆ ಸ್ಯಾಮ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ