ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಪೂಜಾ ಹೆಗ್ಡೆ; ಇದರ ಬೆಲೆ 45 ಕೋಟಿ ರೂಪಾಯಿ
ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಮುಂಬೈನಲ್ಲೇ ಸೆಟ್ಲ್ ಆಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಅವರು ಹೊಸ ಬಂಗಲೆ ಕೊಂಡುಕೊಂಡಿದ್ದಾರೆ. 4000 ಚದರ ಅಡಿ ವಿಶಾಲವಾಗಿರುವ ಇದರ ಬೆಲೆ ಬರೋಬ್ಬರಿ 45 ಕೋಟಿ ರೂ. ಎಂದು ವರದಿ ಆಗಿದೆ. ಹೊಸ ಮನೆ ಖರೀದಿಸಿದ ಪೂಜಾ ಹೆಗ್ಡೆ ಅವರಿಗೆ ಫ್ಯಾನ್ಸ್ ಅಭಿನಂದನೆ ತಿಳಿಸಿದ್ದಾರೆ.
ನಟಿ ಪೂಜಾ ಹೆಗ್ಡೆ (Pooja Hegde) ಅವರು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲೂ (Bollywood) ಬೇಡಿಕೆ ಹೊಂದಿದ್ದಾರೆ. ಹೃತಿಕ್ ರೋಷನ್, ಸಲ್ಮಾನ್ ಖಾನ್ ಅವರಂತಹ ಸ್ಟಾರ್ ಕಲಾವಿದರ ಜೊತೆ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪೂಜಾ ಹೆಗ್ಡೆ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ ಎಂಬುದು ನಿಜ. ಹಾಗಂತ ಅವರ ಶ್ರೀಮಂತಿಕೆಗೆ ಏನೂ ಕೊರತೆ ಆಗಿಲ್ಲ. ಈಗ ಅವರು ಹೊಸ ಬಂಗಲೆ ಖರೀದಿಸುವ ಮೂಲಕ ಸುದ್ದಿ ಆಗಿದ್ದಾರೆ. ವರದಿಗಳ ಪ್ರಕಾರ, ಪೂಜಾ ಹೆಗ್ಡೆ ಅವರು ಖರೀದಿಸಿರುವ ಹೊಸ ಮನೆಯ (Pooja Hegde New House) ಬೆಲೆ ಬರೋಬ್ಬರಿ 45 ಕೋಟಿ ರೂಪಾಯಿ!
ಸಿನಿಮಾ ಕೆಲಸಗಳ ಸುಲವಾಗಿ ಪೂಜಾ ಹೆಗ್ಡೆ ಅವರು ಮುಂಬೈನಲ್ಲೇ ಸೆಟ್ಲ್ ಆಗಿದ್ದಾರೆ. ಮುಂಬೈನ ಐಷಾರಾಮಿ ಏರಿಯಾಗಳಲ್ಲಿ ಒಂದಾದ ಬಾಂದ್ರಾದಲ್ಲಿ ಪೂಜಾ ಹೆಗ್ಡೆ ಅವರು ಹೊಸ ಮನೆ ಕೊಂಡುಕೊಂಡಿದ್ದಾರೆ. ಸಮುದ್ರದ ಕಡೆ ಮುಖ ಮಾಡಿರುವ ಈ ಮನೆ ತುಂಬ ಸುಂದರವಾಗಿದೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಮನೆಯ ವಿಸ್ತೀರ್ಣ 4000 ಚದರ ಅಡಿ ಇದೆ ಎಂದು ಹೇಳಲಾಗಿದೆ. ಹೊಸ ಮನೆಯ ವಿಷಯ ತಿಳಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪೂಜಾ ಹೆಗ್ಡೆಗೆ ಅಭಿನಂದನೆ ತಿಳಿಸುತ್ತಿದ್ದಾರೆ.
ಪೂಜಾ ಹೆಗ್ಡೆ ಅವರಿಗೆ ಈ ಶ್ರೀಮಂತಿಕೆ ರಾತ್ರೋ ರಾತ್ರಿ ಸಿಕ್ಕಿದ್ದಲ್ಲ. ಕಳೆದ 12 ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅನೇಕ ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಇಷ್ಟು ವರ್ಷಗಳ ಪರಿಶ್ರಮದ ಫಲವಾಗಿ ಅವರು ಬಹುಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ.
ಇದನ್ನೂ ಓದಿ: ಈ ಡ್ರೆಸ್ನಲ್ಲಿ ನೀರು ದೋಸೆ ರೀತಿ ಕಾಣುತ್ತಿದ್ದಾರಾ ನಟಿ ಪೂಜಾ ಹೆಗ್ಡೆ?
ಈಗ ಪೂಜಾ ಹೆಗ್ಡೆ ಅವರು ಬಾಲಿವುಡ್ನಲ್ಲಿ ಶಾಹಿದ್ ಕಪೂರ್ ಜೊತೆ ‘ದೇವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅವರ ಅಭಿಮಾನಿಗಳಿಗೆ ಭರವಸೆ ಇದೆ. ದಕ್ಷಿಣದಲ್ಲಿ ಹಲವು ಸಿನಿಮಾ ತಂಡಗಳ ಜೊತೆ ಅವರು ಮಾತುಕಥೆ ನಡೆಸುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪೂಜಾ ಹೆಗ್ಡೆ ಅವರನ್ನು 2.7 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ಆದಷ್ಟು ಬೇಗ ಅವರು ಹೊಸ ಮನೆಯ ಫೋಟೋ ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಬಯಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:50 pm, Sun, 14 April 24