ಬಾಲಿವುಡ್ನ ಖ್ಯಾತ ಹೃತಿಕ್ ರೋಷನ್ (Hrithik Roshan) ಹಾಗೂ ನಟಿ ಸಬಾ ಆಜಾದ್ (Saba Azad) ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳು ಒಂದೆರಡಲ್ಲ. ಇತ್ತೀಚೆಗೆ ಇಬ್ಬರೂ ಸುತ್ತಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಗಲೇ ಹೃತಿಕ್ ಮತ್ತು ಸಬಾ ಮಧ್ಯೆ (Hrithik Roshan And Saba Azad Dating) ಏನೋ ನಡೆಯುತ್ತಿದೆ ಎನ್ನುವ ಸುದ್ದಿ ಹುಟ್ಟಿಕೊಂಡಿತ್ತು. ಇವರ ಸಂಬಂಧ ತುಂಬಾನೇ ಮುಂದುವರಿದಿದೆ ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ಇವರ ಬಗ್ಗೆ ಈಗ ಹೊಸ ಅಪ್ಡೇಟ್ ಒಂದು ಸಿಕ್ಕಿದೆ. ಈ ವಿಚಾರ ಕೇಳಿ ಅನೇಕ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಇತ್ತೀಚೆಗೆ ಹೃತಿಕ್ ಕುಟುಂಬವನ್ನು ಸಬಾ ಭೇಟಿ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿವೆ.
ಸುಸಾನೆ ಖಾನ್ ಹಾಗೂ ಹೃತಿಕ್ ರೋಷನ್ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳು. 2000ರಲ್ಲಿ ಮದುವೆ ಆಗಿದ್ದ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿತ್ತು. ಆ ಬಳಿಕ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳನ್ನು ಟ್ರಿಪ್ಗೆ ಕರೆದುಕೊಂಡು ಹೋಗಿದ್ದಿದೆ. ಆದರೆ, ಹೃತಿಕ್ ಸಂಪೂರ್ಣವಾಗಿ ಮೂವ್ಆನ್ ಆಗಿದ್ದಾರೆ. ಹಾಗಂತ ಹೃತಿಕ್ ಅವರು ರಿಲೇಷನ್ಶಿಪ್ ವಿಚಾರದಲ್ಲಿ ಸುಮ್ಮನೆ ಕೂತಿಲ್ಲ. ಅವರು ಸಬಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ.
ಹೃತಿಕ್ಗೆ ಗೆಳೆಯರೊಬ್ಬರ ಮೂಲಕ ಸಬಾ ಪರಿಚಯ ಆಗಿದೆ. ಇಬ್ಬರ ಟೇಸ್ಟ್ ಒಂದೇ ರೀತಿ ಇದ್ದಿದ್ದರಿಂದ ಬೇಗ ಹತ್ತಿರವಾಗಿದ್ದಾರೆ. ಆ ಬಳಿಕ ಅನೇಕ ಬಾರಿ ಇವರು ಭೇಟಿ ಆಗಿದ್ದಾರೆ. ಆ ಬಳಿಕ ಇವರು ಡೇಟಿಂಗ್ ಶುರುಹಚ್ಚಿಕೊಂಡಿದ್ದಾರೆ. ಈಗ ಹೃತಿಕ್ ಮನೆಯಲ್ಲಿ ಸಬಾ ಸಮಯ ಕಳೆದಿದ್ದಾರೆ. ಹೃತಿಕ್ ಕುಟುಂಬದ ಜತೆಗೆ ಅವರು ಕಳೆದ ಫೋಟೋಗಳು ವೈರಲ್ ಆಗುತ್ತಿವೆ. ಕಳೆದ ಭಾನುವಾರ ಸಬಾ ಅವರು ಹೃತಿಕ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಅಲ್ಲಿಯೇ ಊಟ ಸವಿದಿದ್ದಾರೆ. ಇದು ಮದುವೆಯ ಸೂಚನೆಯೇ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ನಟ ಹೃತಿಕ್ ರೋಷನ್ ಅವರು ವೈಯಕ್ತಿಕ ವಿಚಾರವನ್ನು ಹೆಚ್ಚು ಗುಟ್ಟಾಗಿ ಇಡೋಕೆ ನೋಡುತ್ತಾರೆ. ಏನೇ ಇದ್ದರೂ ಅವರು ಮಾಧ್ಯಮದ ಮುಂದೆ ಬಾಯ್ಬಿಡುವುದಿಲ್ಲ. ಇದು ಇಂದು ನಿನ್ನೆಯ ವಿಚಾರ ಅಲ್ಲ. ಹೃತಿಕ್ ಈ ಮೊದಲಿನಿಂದಲೂ ಇದೇ ನಿಯಮ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಅವರು ದೊಡ್ಡ ಸೆಲೆಬ್ರಿಟಿ. ಎಲ್ಲಾ ವಿಚಾರವನ್ನು ಗುಟ್ಟಾಗಿ ಇಡೋಕೆ ಸಾಧ್ಯವಿಲ್ಲ. ಕೆಲ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿ ಬಿಡುತ್ತವೆ. ಈಗ ಹೃತಿಕ್ ವಿಚಾರದಲ್ಲೂ ಅದೇ ಆಗಿದೆ.
ಇದನ್ನೂ ಓದಿ: Vikram Vedha: ‘ವಿಕ್ರಮ್ ವೇದ’ ಚಿತ್ರದ ಹೃತಿಕ್ ರೋಷನ್ ಲುಕ್ ರಿವೀಲ್; ಫ್ಯಾನ್ಸ್ ಫಿದಾ
‘ಹೃತಿಕ್ ರೋಷನ್ ಜತೆ ನೀವು ಡೇಟಿಂಗ್ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?