Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಕ್ಷಯ್ ಕುಮಾರ್ ಆಡಿದ ಮಾತಿನಿಂದ ಖಿನ್ನತೆಗೆ ಒಳಗಾಗಿದ್ದೆ’ ನಟಿಯ ಬಣ್ಣದ ಬಗ್ಗೆ ಗೇಲಿ ಮಾಡಿದ್ದ ಅಕ್ಕಿ

Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್ ಆದರ್ಶ ಸೆಲೆಬ್ರಿಟಿ ಎಂಬ ಇಮೇಜು ಹೊಂದಿದ್ದಾರೆ. ಆದರೆ 1990ರಲ್ಲಿ ಅಕ್ಷಯ್ ಜೊತೆಗೆ ನಟಿಸಿದ್ದ ನಟಿಯೊಬ್ಬರು ಅಕ್ಷಯ್ ಆಗ ತಮ್ಮೊಟ್ಟಿಗೆ ಆಡಿದ್ದ ಮಾತಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಕ್ಕಿ ಹೇಳಿದ ಮಾತಿನಿಂದ ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ.

'ಅಕ್ಷಯ್ ಕುಮಾರ್ ಆಡಿದ ಮಾತಿನಿಂದ ಖಿನ್ನತೆಗೆ ಒಳಗಾಗಿದ್ದೆ' ನಟಿಯ ಬಣ್ಣದ ಬಗ್ಗೆ ಗೇಲಿ ಮಾಡಿದ್ದ ಅಕ್ಕಿ
ಅಕ್ಷಯ್ ಕುಮಾರ್-ಶಾಂತಿ ಪ್ರಿಯಾ
Follow us
ಮಂಜುನಾಥ ಸಿ.
|

Updated on: Aug 22, 2023 | 5:57 PM

ಬಾಲಿವುಡ್​ನ (Bollywood) ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳಿಗೆ ಸ್ಪೂರ್ತಿ ನೀಡುವಂಥಹಾ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಆರೋಗ್ಯದ ಬಗೆಗಿನ ಕಾಳಜಿ, ಫಿಟ್​ನೆಸ್, ದುಶ್ಚಟಗಳಿಂದ ದೂರ ಇರುವುದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು, ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳಲ್ಲಿ ನಟಿಸುವುದು ಹೀಗೆ ಒಬ್ಬ ಆದರ್ಶಪ್ರಾಯ ಸೆಲೆಬ್ರಿಟಿಯಾಗಿ ತಮ್ಮ ಇಮೇಜನ್ನು ಅಕ್ಕಿ ರೂಪಿಸಿಕೊಂಡಿದ್ದಾರೆ. ಆದರೆ ಅವರೊಟ್ಟಿಗೆ ಕೆಲ ವರ್ಷಗಳ ಹಿಂದೆ ನಟಿಸಿದ್ದ ನಟಿಯೊಬ್ಬರು ಅಕ್ಷಯ್ ಆಡಿದ್ದ ಮಾತಿನ ಬಗ್ಗೆ ಈಗ ಅಸಮಾಧಾನ ಹೊರಹಾಕಿದ್ದಾರೆ.

1990 ರಲ್ಲಿ ಅಕ್ಷಯ್ ಕುಮಾರ್ ತಮ್ಮ ವೃತ್ತಿ ಜೀವನದ ಪೀಕ್​ನಲ್ಲಿದ್ದು ದಿನಕ್ಕೆ ಎರಡು ಮೂರು ಸಿನಿಮಾಗಳ ಶೂಟಿಂಗ್​ನಲ್ಲಿ ಭಾಗಿಯಾಗುತ್ತಿದ್ದರು. ಅದೇ ಸಮಯದಲ್ಲಿ ಅಕ್ಷಯ್ ಕುಮಾರ್ ‘ಎಕ್ಕ ಪೆ ಎಕ್ಕ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಆ ಸಿನಿಮಾದಲ್ಲಿ ಅಕ್ಷಯ್ ಜೊತೆಗೆ ಶಾಂತಿ ಪ್ರಿಯಾ ನಾಯಕಿಯಾಗಿ ನಟಿಸಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಾಂತಿ ಪ್ರಿಯಾ, ಅಕ್ಷಯ್ ಜೊತೆ ನಟಿಸಿದ ಅನುಭವ ಹಿತಕರವಾಗಿರಲಿಲ್ಲ, ನನ್ನ ಬಣ್ಣದ ಅಕ್ಷಯ್ ವ್ಯಂಗ್ಯ ಮಾಡಿದ್ದ ಎಂದಿದ್ದಾರೆ.

”ಎಲ್ಲರ ಎದುರು ಅಕ್ಷಯ್ ಕುಮಾರ್ ನನ್ನ ಬಣ್ಣದ ಬಗ್ಗೆ ವ್ಯಂಗ್ಯ ಮಾಡಿದ್ದರು. ನೀನು ಬಿದ್ದಿದ್ದೆಯಾ? ಬಿದ್ದು ಪೆಟ್ಟುಮಾಡಿಕೊಂಡೆಯಾ? ಎಂದು ಕೇಳಿದರು. ಏಕೆ ಎಂದು ಕೇಳಿದಾಗ ನಿನ್ನೆ ಮಂಡಿ ಎಷ್ಟು ಕಪ್ಪಗಿದೆ. ಅದು ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಕಾಣುತ್ತದಲ್ಲ ಹಾಗಿದೆ ಎಂದು ತಮಾಷೆ ಮಾಡಿದ್ದರು” ಎಂದು ಶಾಂತಿ ಪ್ರಿಯ ಹೇಳಿದ್ದಾರೆ. ಇನ್ನೊಬ್ಬರ ತ್ವಚೆಯ ಬಣ್ಣದ ಬಗ್ಗೆ ಮಾತನಾಡುವುದು ಬಹಳ ಸೂಕ್ಷ್ಮವಾದ ವಿಚಾರ, ಆದರೆ ಅದು ಅಕ್ಷಯ್​ಗೆ ಗೊತ್ತಿರಲಿಲ್ಲ” ಎಂದಿದ್ದಾರೆ.

”ಸಿನಿಮಾದ ಕ್ಲೈಮ್ಯಾಕ್ಸ್ ಸೀನ್​ನ ಶೂಟಿಂಗ್ ಸಮಯದಲ್ಲಿ ಅಕ್ಷಯ್ ಆ ಮಾತು ಹೇಳಿದ್ದರು. ಆ ಮಾತಿನ ಬಳಿಕ ನನಗೆ ಅವರೊಟ್ಟಿಗೆ ಸರಿಯಾಗಿ ಮಾತನಾಡಲು ಸಹ ಇಷ್ಟವಾಗುತ್ತಿರಲಿಲ್ಲ. ಆ ಮಾತು ಆಡಿದ್ದಕ್ಕೆ ಸರಿಯಾಗಿ ಕ್ಷಮೆಯನ್ನೂ ಅಕ್ಷಯ್ ಕೇಳಲಿಲ್ಲ. ಬದಲಗೆ, ‘ಮಾತಿನ ಭರದಲ್ಲಿ ಹೇಳಿದೆ ಅಷ್ಟೆ, ಅದು ಜೋಕ್, ಗಂಭೀರವಾಗಿ ತೆಗೆದುಕೊಳ್ಳಬೇಡ” ಎಂದು ಹೇಳಿದರು. ನಾನು ಆಕೆಗೆ ಹರ್ಟ್ ಮಾಡಿದ್ದೇನೆ, ಸೂಕ್ಷ್ಮ ವಿಚಾರವನ್ನು ಕೆದಕಿದ್ದೀನಿ, ಆಕೆಯ ಕ್ಷಮೆ ಕೇಳಬೇಕು ಎಂದು ಅಕ್ಷಯ್​ಗೆ ಅನಿಸಿರಲಿಲ್ಲ” ಎಂದಿದ್ದಾರೆ ಶಾಂತಿ ಪ್ರಿಯ.

ಇದನ್ನೂ ಓದಿ:‘ಒಎಂಜಿ 2’ ಚಿತ್ರಕ್ಕೆ ಸಂಭಾವನೆಯನ್ನೇ ಪಡೆಯಲಿಲ್ಲ ಅಕ್ಷಯ್ ಕುಮಾರ್; ಇಂಥ ನಿರ್ಧಾರ ಯಾಕೆ?

”ಆ ಸಿನಿಮಾ ಮಾಡುವಾಗ ನನಗೆ ಕೇವಲ 22-23 ವರ್ಷ. ಅಕ್ಷಯ್ ಮಾತುಗಳನ್ನು ಕೇಳಿ ನಾನು ಖಿನ್ನತೆಗೆ ಒಳಗಾಗಿಬಿಟ್ಟಿದ್ದೆ. ನನ್ನ ತಾಯಿ ನನಗೆ ಬೆಂಬಲವಾಗಿದ್ದರು. ನಾನು ಹಾಗೂ ನನ್ನ ಸಹೋದರಿ ಭಾನುಪ್ರಿಯ ಆಗಾಗ್ಗೆ ಇಂಥಹಾ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದೆವು. ಹಿಂದಿಯಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲಿಯೂ ಬಣ್ಣದ ವ್ಯಂಗ್ಯ ಮಾಡುವ ಪರಿಪಾಠ ಇತ್ತು. ಒಮ್ಮೆಯಂತೂ ಹಿಂದಿಯ ಒಂದು ಮ್ಯಾಗಜೀನ್​ನಲ್ಲಿ ನನ್ನ ಸಹೋದರಿ ಭಾನುಪ್ರಿಯ ಮುಖದಲ್ಲಿ ಮೂಡಿದ ಮೊಡವೆಗಳ ಬಗ್ಗೆ ಗುಳ್ಳೆಗಳ ಬಗ್ಗೆ ವ್ಯಂಗ್ಯ ಮಾಡಿ ಬರೆಯಲಾಗಿತ್ತು. ಇಂಥಹದ್ದನ್ನು ನಾವು ಸಾಕಷ್ಟು ಅನುಭವಿಸಿದ್ದೇವೆ. ಈಗ ನನ್ನ ಮಕ್ಕಳು ಅದನ್ನೇ ಅನುಭವಿಸುತ್ತಿದ್ದಾರೆ” ಎಂದಿದ್ದಾರೆ ಶಾಂತಿ ಪ್ರಿಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !