‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story) ಈ ಪರಿ ಅಬ್ಬರಿಸಲಿದೆ ಎಂದು ಬಹುತೇಕರು ಊಹಿಸಿರಲಿಲ್ಲ. ಯಾವುದೇ ಸ್ಟಾರ್ ಹೀರೋಗಳೂ ಇಲ್ಲದ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಒಂದು ವಾರ ಭರ್ಜರಿಯಾಗಿ ಪ್ರದರ್ಶನಗೊಂಡ ಈ ಚಿತ್ರ ಈಗ 100 ಕೋಟಿ ರೂಪಾಯಿ ಗಳಿಸಿದೆ ಎಂಬುದು ವಿಶೇಷ. ಅದಾ ಶರ್ಮಾ (Adah Sharma) ಅವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರ ವೃತ್ತಿಜೀವನದ ಅತಿ ದೊಡ್ಡ ಚಿತ್ರವಾಗಿ ‘ದಿ ಕೇರಳ ಸ್ಟೋರಿ’ ಹೊರಹೊಮ್ಮಿದೆ. ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿತ್ತು. ಹಾಗಾಗಿ ಈ ಚಿತ್ರ ಶತಕೋಟಿ ರೂಪಾಯಿ ಕ್ಲಬ್ ಸೇರಲು ಸಾಧ್ಯವೋ ಇಲ್ಲವೋ ಎಂಬ ಬಗ್ಗೆ ಅನುಮಾನ ಇತ್ತು. ಕೆಲವು ಕಡೆಗಳಲ್ಲಿ ಸಿನಿಮಾ ಬ್ಯಾನ್ ಆಗಿದ್ದರಿಂದ ಕಲೆಕ್ಷನ್ (The Kerala Story Box Office Collection) ತಗ್ಗಬಹುದು ಎಂದು ಊಹಿಸಲಾಗಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ನೂರು ಕೋಟಿ ರೂಪಾಯಿ ಗಳಿಸಿ ಮ್ಯಾಜಿಕ್ ಮಾಡಿದೆ.
1ನೇ ದಿನ: 8.03 ಕೋಟಿ ರೂ.
2ನೇ ದಿನ: 11.22 ಕೋಟಿ ರೂ.
3ನೇ ದಿನ: 16.40 ಕೋಟಿ ರೂ.
4ನೇ ದಿನ: 10.07 ಕೋಟಿ ರೂ.
5ನೇ ದಿನ: 11.14 ಕೋಟಿ ರೂ.
6ನೇ ದಿನ: 12 ಕೋಟಿ ರೂ.
7ನೇ ದಿನ: 12.50 ಕೋಟಿ ರೂ.
8ನೇ ದಿನ: 12.23 ಕೋಟಿ ರೂ.
ಇದನ್ನೂ ಓದಿ: Adah Sharma: ಬ್ಲೂ ವೇಲ್ ಕುರಿತ ಸಿನಿಮಾದಲ್ಲಿ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ; ಈ ಚಿತ್ರದ ಕಥೆ ಏನು?
ಯಶಸ್ವಿಯಾಗಿ 8 ದಿನಗಳ ಕಾಲ ಪ್ರದರ್ಶನಗೊಂಡ ‘ದಿ ಕೇರಳ ಸ್ಟೋರಿ’ ಸಿನಿಮಾ ಒಟ್ಟು 93.37 ಕೋಟಿ ರೂಪಾಯಿ ಗಳಿಸಿದೆ. ಇಂದು (ಮೇ 13) ಕೂಡ ಈ ಸಿನಿಮಾಗೆ ಒಳ್ಳೆಯ ಕಲೆಕ್ಷನ್ ಆಗಲಿದೆ. ವೀಕೆಂಡ್ ಆಗಿರುವುದರಿಂದ ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ಭರವಸೆ ಇದೆ. ಹಲವು ಕಡೆಗಳಲ್ಲಿ ಟಿಕೆಟ್ ಬುಕಿಂಗ್ ಕೂಡ ಉತ್ತಮವಾಗಿದೆ. ಹಾಗಾಗಿ ಶನಿವಾರ ಅನಾಯಾಸವಾಗಿ 100 ಕೋಟಿ ರೂಪಾಯಿ ಗಳಿಸಲಿದೆ ಎಂಬುದು ಬಾಕ್ಸ್ ಆಫೀಸ್ ತಜ್ಞರ ಅಭಿಪ್ರಾಯ.
#TheKeralaStory commences Weekend 2 with A BANG… Hits DOUBLE DIGITS on [second] Fri… Will cross ₹ ? cr mark TODAY [second Sat]… Will emerge SECOND HIGHEST GROSSING #Hindi film [of 2023] in *Week 2* itself… [Week 2] Fri 12.23 cr. Total: ₹ 93.37 cr. #India biz. #Boxoffice… pic.twitter.com/lta7dfnFOE
— taran adarsh (@taran_adarsh) May 13, 2023
ಭಾನುವಾರ (ಮೇ 14) ‘ದಿ ಕೇರಳ ಸ್ಟೋರಿ’ ಸಿನಿಮಾ ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ವಿವಾದಾತ್ಮಕ ಕಥಾಹಂದರ ಇದೆ ಎಂಬ ಕಾರಣ ನೀಡಿ ಪಶ್ಚಿಮ ಬಂಗಾಳದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ತಮಿಳುನಾಡಿನ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲಾಗಿದೆ. ಹಾಗಿದ್ದರೂ ಕೂಡ 100 ಕೋಟಿ ರೂಪಾಯಿ ಗಳಿಸಿರುವುದು ಸಾಧನೆಯೇ ಸರಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.