Pathaan: ಬಾಂಗ್ಲಾದೇಶದಲ್ಲಿ ಇತಿಹಾಸ ಬರೆದ ಪಠಾಣ್; ಶಾರುಖ್ ಖಾನ್ ನೋಡಿ ಹುಚ್ಚೆದ್ದು ಕುಣಿದ ಫ್ಯಾನ್ಸ್
Shah Rukh Khan: ಬಾಂಗ್ಲಾದೇಶದಲ್ಲಿನ 41 ಚಿತ್ರಮಂದಿರಗಳಲ್ಲಿ ‘ಪಠಾಣ್’ ಸಿನಿಮಾ ಬಿಡುಗಡೆ ಆಗಿದೆ. ಬಹುತೇಕ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಒಳ್ಳೆಯ ಕಮಾಯಿ ಆಗುತ್ತಿದೆ.
ನಟ ಶಾರುಖ್ ಖಾನ್ (Shah Rukh Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳಿಗೆ ಹಲವು ದೇಶಗಳಲ್ಲಿ ಮಾರುಕಟ್ಟೆ ಇದೆ. ಬಾಂಗ್ಲಾದೇಶದಲ್ಲೂ ಅವರನ್ನು ಇಷ್ಟಪಡುವಂತಹ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಆದರೆ ಅಲ್ಲಿನ ಪ್ರೇಕ್ಷಕರಿಗೆ ಶಾರುಖ್ ಖಾನ್ ನಟನೆಯ ಯಾವುದೇ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಕ್ಕಿರಲಿಲ್ಲ. ಯಾಕೆಂದರೆ ಬಾಂಗ್ಲಾದೇಶದಲ್ಲಿ (Bangladesh) ಭಾರತದ ಸಿನಿಮಾಗಳ ಬಿಡುಗಡೆಗೆ ನಿರ್ಬಂಧ ಹೇರಲಾಗಿತ್ತು. ಆದರೆ ಈಗ ಆ ನಿರ್ಬಂಧ ತೆರವುಗೊಳಿಸಲಾಗಿದೆ. 1971ರಿಂದ ಈಚೆಗೆ ಬಾಂಗ್ಲಾದೇಶದಲ್ಲಿ ಬಿಡುಗಡೆ ಆದ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿಗೆ ‘ಪಠಾಣ್’ (Pathaan Movie) ಪಾತ್ರವಾಗಿದೆ. ಆ ಮೂಲಕ ಈ ಚಿತ್ರ ಇತಿಹಾಸ ಬರೆದಿದೆ. ಅಲ್ಲಿನ ಪ್ರೇಕ್ಷಕರು ಈ ಸಿನಿಮಾ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ‘ಪಠಾಣ್’ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗಿದೆ. ಮೇ 12ರಂದು ರಿಲೀಸ್ ಆದ ಈ ಚಿತ್ರಕ್ಕೆ ಜನರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳು ವೈರಲ್ ಆಗಿವೆ. ‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ಹೆಜ್ಜೆ ಹಾಕಿರುವ ‘ಜೂ ಮೇ ಜೋ ಪಠಾಣ್..’ ಹಾಡು ಬಂದಾಗ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ.
#Pathaan ki Party Continues in #Bangladesh and even little kids can’t stop themselves from grooving to #JhoomeJoPathaan! ❤️ @SRKUniverseBD_ #PathaanInBanglandesh@iamsrk @deepikapadukone @TheJohnAbraham #SiddharthAnand#ShahRukhKhan #SRK pic.twitter.com/u8xs4C8RER
— Shah Rukh Khan Universe Fan Club (@SRKUniverse) May 12, 2023
#Pathaan craze in #Bangladesh#PathaanInBangladesh Mass Hysteria as audience dances to #JhoomeJoPathaan @SRKUniverseBD_ @iamsrk @deepikapadukone @TheJohnAbraham @yrf #SiddharthAnand #ShahRukhKhan #SRK pic.twitter.com/mBklJEEVWt
— Shah Rukh Khan Universe Fan Club (@SRKUniverse) May 12, 2023
ಈ ವರ್ಷ ಆರಂಭದಲ್ಲಿ ಭಾರತದಲ್ಲಿ ‘ಪಠಾಣ್’ ಬಿಡುಗಡೆ ಆದಾಗ ಬಾಂಗ್ಲಾದೇಶದ ಅನೇಕರು ಇಲ್ಲಿಗೆ ಬಂದು ಸಿನಿಮಾ ನೋಡಿಕೊಂಡು ಹೋಗಿದ್ದರು. ಅಲ್ಲಿನ ಮಂದಿಗೆ ಶಾರುಖ್ ಖಾನ್ ಎಂದರೆ ಅಷ್ಟು ಅಭಿಮಾನ. ಈಗ ತಮ್ಮದೇ ದೇಶದಲ್ಲಿ ‘ಪಠಾಣ್’ ಬಿಡುಗಡೆ ಆಗಿರುವುದರಿಂದ ಬಾಂಗ್ಲಾದೇಶದಲ್ಲಿನ ಪ್ರೇಕ್ಷಕರು ಈ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಇದನ್ನೂ ಓದಿ: Shah Rukh Khan: ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್; ‘ಪಠಾಣ್’ ಗೆದ್ದ ಮೇಲೆ ಸೊಕ್ಕು ಬಂತಾ?
ವರದಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿನ 41 ಚಿತ್ರಮಂದಿರಗಳಲ್ಲಿ ‘ಪಠಾಣ್’ ಸಿನಿಮಾ ಬಿಡುಗಡೆ ಆಗಿದೆ. ಮೊದಲ 2 ದಿನಗಳ ಎಲ್ಲ ಶೋನ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದವು. ಹಾಗಾಗಿ ಈ ಚಿತ್ರಕ್ಕೆ ಒಳ್ಳೆಯ ಕಮಾಯಿ ಆಗುತ್ತಿದೆ. ಇದರಿಂದ ಚಿತ್ರದ ಒಟ್ಟು ಕಲೆಕ್ಷನ್ ಹೆಚ್ಚಾಗಲಿದೆ.
ಇದನ್ನೂ ಓದಿ: ಸಾವಿರಾರು ಕೋಟಿ ರೂಪಾಯಿ ಗಳಿಸಿದ ‘ಪಠಾಣ್’ ಚಿತ್ರದಿಂದ ಶಾರುಖ್ ಖಾನ್ಗೆ ಸಿಕ್ಕ ಹಣ ಎಷ್ಟು?
ಬಾಂಗ್ಲಾದೇಶದಲ್ಲಿ ವರ್ಷಕ್ಕೆ 10 ವಿದೇಶಿ ಸಿನಿಮಾಗಳನ್ನು ಬಿಡುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಶಾರುಖ್ ನಟನೆಯ ಇನ್ನಷ್ಟು ಚಿತ್ರಗಳು ಕೂಡ ಅಲ್ಲಿ ರಿಲೀಸ್ ಆಗಲಿವೆ. ಪ್ರಸ್ತುತ ‘ಡಂಕಿ’ ಮತ್ತು ‘ಜವಾನ್’ ಚಿತ್ರದ ಕೆಲಸಗಳಲ್ಲಿ ಶಾರುಖ್ ಖಾನ್ ಬ್ಯುಸಿ ಆಗಿದ್ದಾರೆ. ‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.