‘ಇರಾನಿ ಹುಡುಗಿಯನ್ನು ನನ್ನ ಗಂಡ ಅತ್ಯಾಚಾರ ಮಾಡಿದ್ದಾನೆ’; ಪತಿ ವಿರುದ್ಧ ರಾಖಿ ಸಾವಂತ್ ಆರೋಪ  

ಮಂಗಳವಾರ (ಫೆಬ್ರವರಿ 18) ಸಂಜೆ ಇನ್​ಸ್ಟಾಗ್ರಾಮ್​ನಲ್ಲಿ ಲೈವ್ ಬಂದಿದ್ದ ರಾಖಿ, ‘ಇರಾನಿ ಹುಡುಗಿಯನ್ನು ಆದಿಲ್ ರೇಪ್ ಮಾಡಿದ್ದಾನೆ’ ಎಂದು ಹೇಳಿದ್ದಾರೆ.

‘ಇರಾನಿ ಹುಡುಗಿಯನ್ನು ನನ್ನ ಗಂಡ ಅತ್ಯಾಚಾರ ಮಾಡಿದ್ದಾನೆ’; ಪತಿ ವಿರುದ್ಧ ರಾಖಿ ಸಾವಂತ್ ಆರೋಪ  
ಆದಿಲ್ ಖಾನ್-ರಾಖಿ ಸಾವಂತ್
Follow us
ರಾಜೇಶ್ ದುಗ್ಗುಮನೆ
|

Updated on:Mar 01, 2023 | 7:55 AM

ರಾಖಿ ಸಾವಂತ್ (Rakhi Sawant) ಹಾಗೂ ಆದಿಲ್ ಖಾನ್ ಕೌಟುಂಬಿಕ ಜಗಳ ಬೀದಿಗೆ ಬಂದು ಸಾಕಷ್ಟು ಸಮಯ ಆಗಿದೆ. ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುವ ಕೆಲಸ ಆಗುತ್ತಿದೆ. ಪತಿಯಿಂದ ಮೋಸ ಆಗಿದೆ ಎಂದು ರಾಖಿ ಸಾವಂತ್ ಕಣ್ಣೀರು ಹಾಕುತ್ತಿದ್ದಾರೆ. ಆದಿಲ್​ನ (Adil Khan) ಮದುವೆ ಆಗುವ ಸಂದರ್ಭದಲ್ಲಿ ರಾಖಿ ಅವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ. ಈಗ ರಾಖಿ ಸಾವಂತ್ ಅವರು ಆದಿಲ್ ಖಾನ್ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಮಂಗಳವಾರ (ಫೆಬ್ರವರಿ 18) ಸಂಜೆ ಇನ್​ಸ್ಟಾಗ್ರಾಮ್​ನಲ್ಲಿ ಲೈವ್ ಬಂದಿದ್ದ ರಾಖಿ, ‘ಇರಾನಿ ಹುಡುಗಿಯನ್ನು ಆದಿಲ್ ರೇಪ್ ಮಾಡಿದ್ದಾನೆ’ ಎಂದು ಹೇಳಿದ್ದಾರೆ.

‘ಆದಿಲ್ ಇರಾನಿ ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾನೆ. ಆ ಹುಡುಗಿಯನ್ನು ಆದಿಲ್ ಪೊಲೀಸ್ ಠಾಣೆಗೆ ಕರೆದಿದ್ದಾನೆ. ನನಗೆ ವಿಚ್ಛೇದನ ನೀಡಿ ಆಕೆಯನ್ನು ಮದುವೆಯಾಗುವ ಆಲೋಚನೆಯಲ್ಲಿ ಆದಿಲ್ ಇದ್ದಾನೆ. ತನ್ನ ವಿರುದ್ಧ ಇರುವ ಪ್ರಕರಣವನ್ನು ತೆಗೆದುಹಾಕುವಂತೆ ಆತ ಕೇಳಿದ್ದಾನೆ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.

‘ಆದಿಲ್ ನೀನು ಮೂರ್ಖ. ನೀನು ತಪ್ಪು ಮಾಡುತ್ತಿದ್ದೀಯ. ಎಲ್ಲಾ ಮಹಿಳೆಯರನ್ನು ಒಂದೇ ರೀತಿಯಲ್ಲಿ ನಂಬಿಸುತ್ತೀಯಾ. ಈಗ ನೀನು ಜೈಲಿನಲ್ಲಿದ್ದೀಯ. ನಿನ್ನ ಹೆಂಡತಿ ಸೇರಿದಂತೆ ಎಲ್ಲಾ ಮಹಿಳೆಯರನ್ನು ಮೂರ್ಖರನ್ನಾಗಿ ಮಾಡುವುದನ್ನು ನಿಲ್ಲಿಸಿ. ನಾನು ನಿನಗೆ ವಿಚ್ಛೇದನ ಕೊಡುವುದಿಲ್ಲ. ನಾನು ನಿನ್ನಮೇಲೆ ಮೊಕದ್ದಮೆ ಹೂಡುತ್ತೇನೆ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕಾಗಿ ಮತ್ತು ನಿನ್ನ ಹೆಂಡತಿಯನ್ನು ದೂರ ಇಟ್ಟಿದ್ದಕ್ಕಾಗಿ ಕೇಸ್ ದಾಖಲಿಸುತ್ತೇನೆ’ ಎಂದು ರಾಖಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ
Image
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Image
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Image
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Image
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

ರಾಖಿ ಸಾವಂತ್ ಅವರು ಇತ್ತೀಚೆಗೆ ಮೈಸೂರಿಗೆ ಬಂದಿದ್ದರು. ಅವರು ಮದುವೆ ಆಗಿರುವ ಆದಿಲ್​ ಖಾನ್​ ಮೈಸೂರಿನವರು. ಹೀಗಾಗಿ ರಾಖಿ ಸಾವಂತ್​ ಅವರು ಇಲ್ಲಿಗೆ ಬಂದು ನ್ಯಾಯ ಕೇಳಿದ್ದರು. ಜೊತೆಗೆ ಆದಿಲ್​ ಖಾನ್ ಕುಟುಂಬದವರನ್ನು ಭೇಟಿ ಮಾಡಿದ್ದರು. ಈ ವೇಳೆ ‘ನಿನ್ನನ್ನು ನಮ್ಮ ಕುಟುಂಬಕ್ಕೆ ಸೇರಿಸಿಕೊಳ್ಳೋಕೆ ಸಾಧ್ಯವಿಲ್ಲ’ ಎಂದು ಆದಿಲ್ ಖಾನ್ ತಂದೆ ರಾಖಿ ಸಾವಂತ್​ಗೆ ಹೇಳಿದ್ದರು.

ಇದನ್ನೂ ಓದಿ: Rakhi Sawant: ‘ನಾನು ಹಿಂದೂ ಅಂತ ಆದಿಲ್​ ಖಾನ್​ ಮನೆಯವರು ನನ್ನ ಸೇರಿಸಿಕೊಳ್ತಿಲ್ಲ’; ಮೈಸೂರಲ್ಲಿ ರಾಖಿ ಸಾವಂತ್​ ಕಣ್ಣೀರು

ಕಳೆದ ವರ್ಷ ಆದಿಲ್​ ಖಾನ್​ ಮತ್ತು ರಾಖಿ ಸಾವಂತ್​ ಮದುವೆ ನೆರವೇರಿತು. ಆದರೆ ಹಲವು ತಿಂಗಳ ಕಾಲ ಮದುವೆ ವಿಚಾರವನ್ನು ಈ ಜೋಡಿ ಮುಚ್ಚಿಟ್ಟಿತ್ತು. ಆರಂಭದಲ್ಲಿ ನಿಜ ಒಪ್ಪಿಕೊಳ್ಳಲು ಆದಿಲ್ ಖಾನ್​ ಹಿಂದೇಟು ಹಾಕಿದ್ದರು. ಬಳಿಕ ಅವರು ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟರು. ಇನ್ನೇನು ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಸಂತೋಷವಾಗಿ ಸಂಸಾರ ನಡೆಸುತ್ತಾರೆ ಎಂದುಕೊಳ್ಳುವಾಗಲೇ ಭಿನ್ನಾಭಿಪ್ರಾಯ ಮೂಡಿತು. ಈಗ ಇವರ ಸಂಸಾರದ ಗಲಾಟೆ ಕೋರ್ಟ್​ ಮೆಟ್ಟಿಲೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:54 am, Wed, 1 March 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್