Kriti Sanon: ‘ಆದಿಪುರುಷ್​’ ನಟಿ ಕೃತಿ ಸನೋನ್​ ಬೇಡಿಕೆ ಕುಸಿತ; 4ನೇ ಬಾರಿ ತಗ್ಗಿತು ಸಂಭಾವನೆ?

|

Updated on: Jun 27, 2023 | 8:27 PM

Kriti Sanon Remuneration: ಒಂದು ಕಾಲದಲ್ಲಿ 7ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಕೃತಿ ಸನೋನ್​ ಅವರು ಈಗ 3 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ‘ಆದಿಪುರುಷ್​’ ಸೋಲಿನಿಂದ ಅವರಿಗೆ ಹಿನ್ನಡೆ ಆಗಿದೆ.

Kriti Sanon: ‘ಆದಿಪುರುಷ್​’ ನಟಿ ಕೃತಿ ಸನೋನ್​ ಬೇಡಿಕೆ ಕುಸಿತ; 4ನೇ ಬಾರಿ ತಗ್ಗಿತು ಸಂಭಾವನೆ?
ಕೃತಿ ಸನೋನ್​
Follow us on

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಆದಿಪುರುಷ್​’ (Adipurush) ಸಿನಿಮಾದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ದೊಡ್ಡ ಗೆಲುವು ಸಿಗಬೇಕಿತ್ತು. ಆದರೆ ಸಿನಿಮಾ ಚೆನ್ನಾಗಿ ಮೂಡಿಬಂದಿಲ್ಲ ಎಂಬ ಕಾರಣಕ್ಕೆ ಆ ತಂಡದ ಎಲ್ಲರಿಗೂ ಹಿನ್ನಡೆ ಆಗಿದೆ. ರಾಮಾಯಣದ ಕಥೆ ಆಧರಿಸಿ ಮೂಡಿಬಂದ ಈ ಸಿನಿಮಾದಲ್ಲಿ ಕೃತಿ ಸನೋನ್​ (Kriti Sanon) ಅವರು ಸೀತೆಯ ಪಾತ್ರ ಮಾಡಿದ್ದಾರೆ. ಈ ಪಾತ್ರಕ್ಕೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ. ಅಲ್ಲದೇ, ಈ ಸಿನಿಮಾ ಬಿಡುಗಡೆ ಆದ ಬಳಿಕ ಕೃತಿ ಸನೋನ್​ ಅವರಿಗೆ ಇದ್ದ ಬೇಡಿಕೆ ಕಡಿಮೆ ಆಗಿದೆ ಎನ್ನಲಾಗುತ್ತಿದೆ. ಹಾಗಾಗಿ ಅವರ ಸಂಭಾವನೆ (Kriti Sanon Remuneration) ಕೂಡ ತಗ್ಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಬಾಲಿವುಡ್​ ಮತ್ತು ಟಾಲಿವುಡ್​ ಅಂಗಳದಲ್ಲಿ ಗಾಸಿಪ್​ ಕೇಳಿಬರುತ್ತಿದೆ.

ಕೃತಿ ಸನೋನ್​ ಅವರು ಪ್ರತಿಭಾವಂತ ನಟಿ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರ ಯಾವ ಸಿನಿಮಾ ಕೂಡ ಚಿತ್ರಮಂದಿರದಲ್ಲಿ ಗೆದ್ದಿಲ್ಲ. ಆ ಕಾರಣದಿಂದ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ತಮ್ಮ ಸಂಭಾವನೆಯನ್ನು ತಗ್ಗಿಸಿಕೊಂಡಿದ್ದಾರೆ. ಈಗ ನಾಲ್ಕನೇ ಬಾರಿಗೆ ಅವರ ಸಂಭಾವನೆಗೆ ಕತ್ತರಿ ಬೀಳುತ್ತಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: Kriti Sanon: ಟ್ರೋಲ್​ಗಳ ನಡುವೆಯೂ ಶಾಲೆ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್​’ ಚಿತ್ರ ತೋರಿಸಲು ಮುಂದಾದ ಕೃತಿ ಸನೋನ್​

‘ಹೌಸ್​ಫುಲ್​’ ಸಿನಿಮಾ ಹಿಟ್​ ಆದಾಗ ಕೃತಿ ಸನೋನ್​ ಅವರು 7ರಿಂದ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ‘ಪಾಣಿಪತ್​’ ಮತ್ತು ‘ಬಚ್ಚನ್​ ಪಾಂಡೆ’ ಸಿನಿಮಾಗಳು ಸೋತಾಗ ಅವರ ಸಂಭಾವನೆ 5 ಕೋಟಿ ರೂಪಾಯಿಗೆ ಕುಸಿಯಿತು. ‘ಭೇಡಿಯಾ’ ಚಿತ್ರಕ್ಕೆ ಅವರು 4 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ‘ಆದಿಪುರುಷ್​’ ಸಿನಿಮಾಗೆ ಅವರು ಪಡೆದಿದ್ದು 3 ಕೋಟಿ ರೂಪಾಯಿ ಮಾತ್ರ. ಈಗ ಆ ಮೊತ್ತ ಇನ್ನೂ ಕಡಿಮೆ ಆಗಲಿದೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಪ್ರಕಟ ಮಾಡಿವೆ.

ಇದನ್ನೂ ಓದಿ: Project K Budget: ‘ಪ್ರಾಜೆಕ್ಟ್​ ಕೆ’ ಕಲಾವಿದರ ಒಟ್ಟು ಸಂಭಾವನೆ 200 ಕೋಟಿ ರೂ? ಇದರಲ್ಲಿ ಪ್ರಭಾಸ್​, ಕಮಲ್​ ಹಾಸನ್​ ಪಾಲು ಎಷ್ಟು?

ನಟ-ನಟಿಯರ ಸಂಭಾವನೆ ಬಗ್ಗೆ ಯಾವಾಗಲೂ ಅಂತೆ-ಕಂತೆಗಳ ಸುದ್ದಿಯೇ ಹರಿದಾಡುತ್ತದೆ. ಎಷ್ಟು ಸಂಭಾವನೆ ಪಡೆದುಕೊಂಡೆವು ಎಂಬ ಮಾಹಿತಿಯನ್ನು ಯಾರೂ ಕೂಡ ಅಧಿಕೃತವಾಗಿ ಹೇಳುವುದಿಲ್ಲ. ಅದೆಲ್ಲವೂ ಅವರ ವೈಯಕ್ತಿಕ ವಿಚಾರ. ಹಾಗಿದ್ದರೂ ಕೂಡ ಗಾಸಿಪ್​ ಕಾಲಂಗಳಲ್ಲಿ ತರಹೇವಾರಿ ಸುದ್ದಿಗಳು ಕಾಣಸಿಗುತ್ತವೆ. ಒಟಿಟಿಯಲ್ಲಿ ಕೃತಿ ಸನೋನ್​ ಅವರಿಗೆ ಭಾರಿ ಬೇಡಿಕೆ ಇದೆ. ಅವರು ನಟಿಸಿದ ‘ಮಿಮಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಕ್ಕಿತ್ತು. ಆ ಸಿನಿಮಾದ ‘ಪರಮ ಸುಂದರಿ’ ಹಾಡು ಸಖತ್​ ವೈರಲ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.