AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳ ಜೊತೆ ದುರ್ವರ್ತನೆ ತೋರಿದ್ದಾರೆ ಈ ಸೆಲೆಬ್ರಿಟಿಗಳು; ಇಲ್ಲಿದೆ ವಿವರ

ಸಿಂಗರ್​ ಆದಿತ್ಯ ನಾರಾಯಣ್ ಅವರ ಒಂದು ವಿಡಿಯೋ ಇತ್ತೀಚೆಗೆ ಸಖತ್​ ವೈರಲ್​ ಆಗಿತ್ತು. ಅವರ ವರ್ತನೆ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಅಭಿಮಾನಿಗೆ ಮೈಕ್​ನಿಂದ ಅವರು ಹೊಡೆದಿದ್ದಾರೆ ಎಂಬ ಆರೋಪವೂ ಇದೆ. ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ ಅನೇಕ ನಟ-ನಟಿಯರು ಇದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ..

ಅಭಿಮಾನಿಗಳ ಜೊತೆ ದುರ್ವರ್ತನೆ ತೋರಿದ್ದಾರೆ ಈ ಸೆಲೆಬ್ರಿಟಿಗಳು; ಇಲ್ಲಿದೆ ವಿವರ
ದುರ್ವರ್ತನೆ ತೋರಿದ ಸೆಲೆಬ್ರಿಟಿಗಳು
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 17, 2024 | 2:03 PM

Share

ಸೆಲೆಬ್ರಿಟಿ ಆಗಿ ಇರೋದು ಅಷ್ಟು ಸುಲಭದ ಮಾತಲ್ಲ. ಫೇಮ್ ಜೊತೆ ಒಂದಷ್ಟು ವಿವಾದಗಳು ಅವರನ್ನು ಸುತ್ತಿಕೊಳ್ಳುತ್ತವೆ. ಕೆಲವು ಸೆಲೆಬ್ರಿಟಿಗಳು ಅಭಿಮಾನಿಗಳ ಜೊತೆ ಕೂಲ್ ಆಗಿ ನಡೆದುಕೊಳ್ಳುತ್ತಾರೆ. ಇನ್ನೂ ಕೆಲವು ಸೆಲೆಬ್ರಿಟಿಗಳು ಸಿಟ್ಟಿನಿಂದ ವರ್ತಿಸಿದ್ದಿದೆ. ಸಾಮಾನ್ಯ ಜನರಿಗೆ ಸಾರ್ವಜನಿಕವಾಗಿಯೇ ಕಪಾಳ ಮೋಕ್ಷ ಮಾಡಿದ ಅನೇಕರು ಇದ್ದಾರೆ. ಇದರಿಂದ ಸೆಲೆಬ್ರಿಟಿಗಳು ಟೀಕೆಗೆ ಒಳಗಾದ ಉದಾಹರಣೆ ಇದೆ. ಈ ಸಾಲಿನಲ್ಲಿ ಅಕ್ಷಯ್ ಕುಮಾರ್ (Akshay Kumar), ಪ್ರಿಯಾಂಕಾ ಚೋಪ್ರಾ, ನಯನತಾರಾ (Nayanthara) ಸೇರಿ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಎಲ್ವಿಶ್ ಯಾದವ್: ‘ಬಿಗ್ ಬಾಸ್ ಹಿಂದಿ ಒಟಿಟಿ ಸೀಸನ್ 2’ ವಿನ್ನರ್ ಎಲ್ವಿಶ್ ಯಾದವ್ ಅವರು ಇತ್ತೀಚೆಗೆ ಸುದ್ದಿ ಆಗಿದ್ದರು. ರಾಜಸ್ಥಾನದ ಹೋಟೆಲ್ ಒಂದರಲ್ಲಿ ಅವರು ಅಭಿಮಾನಿ ಮೇಲೆ ಕೈ ಮಾಡಿದ್ದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿತ್ತು. ಇದರಿಂದ ಅವರು ಟೀಕೆ ಅನುಭವಿಸಿದರು. ಈ ಮೊದಲು ಅವರು ಹಾವಿನ ವಿಷ ಶೇಖರಿಸಿಟ್ಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು.

ಪ್ರಿಯಾಂಕಾ ಚೋಪ್ರಾ: ನಟಿ ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳ ಕೈಗೆ ಅಷ್ಟು ಸುಲಭದಲ್ಲಿ ಸಿಗುವವರಲ್ಲ. ಅವರು ಪಾಪ್ ಸಿಂಗರ್ ನಿಕ್ ಜೋನಸ್​ನ ಮದುವೆ ಆದ ಬಳಿಕ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಸೆಲ್ಫಿ ಕೇಳಿದ ಅಭಿಮಾನಿಯ ಕೆನ್ನೆಗೆ ಪ್ರಿಯಾಂಕಾ ಹೊಡೆದಿದ್ದರು. ಈ ಮೂಲಕ ಸುದ್ದಿ ಆಗಿದ್ದರು. ಈ ಘಟನೆ ನಡೆದಿದ್ದು ‘ಅಂಜಾನ ಅಂಜಾನಿ’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ. ಈ ಚಿತ್ರ ರಿಲೀಸ್ ಆಗಿದ್ದು 2010ರಲ್ಲಿ.

ಇದನ್ನೂ ಓದಿ: ‘ಹೆಣ್ಮಕ್ಳ ಮುಟ್ಟಿದ್ರೆ ಸರಿ ಇರಲ್ಲ’; ಕಪಾಳ ಮೋಕ್ಷದ ಬಳಿಕ ಸಾನ್ಯಾ ಐಯ್ಯರ್ ತರಾಟೆ

ಸಲ್ಮಾನ್ ಖಾನ್: ಸಲ್ಮಾನ್ ಖಾನ್ ಅವರು ಹಲವು ಸಂದರ್ಭದಲ್ಲಿ ಸಿಟ್ಟು ಮಾಡಿಕೊಳ್ಳುತ್ತಾರೆ. ಈಗ ಅವರನ್ನು ಭೇಟಿ ಮಾಡೋದು ಅಷ್ಟು ಸುಲಭ ಅಲ್ಲ. ಅವರಿಗೆ ಸರ್ಕಾರದ ಕಡೆಯಿಂದ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಈ ಮೊದಲು ಒಪ್ಪಿಗೆ ಇಲ್ಲದೆ ಫೋಟೋ ಕ್ಲಿಕ್ಕಿಸಿದ ಅಭಿಮಾನಿ ವಿರುದ್ಧ ಸಲ್ಲು ಸಿಟ್ಟಾಗಿದ್ದರು. ಫೋನ್​ನ ಕಿತ್ತುಕೊಂಡು ಅಭಿಮಾನಿಯ ಕೆನ್ನೆಗೆ ಬಾರಿಸಿದ್ದರು. ಇದು ಸುದ್ದಿ ಆಗಿತ್ತು. ಸಲ್ಲು ಸಿಟ್ಟು ಮಾಡಿಕೊಳ್ಳೋದು ಸರ್ವೇ ಸಾಮಾನ್ಯ. ಅವರು ಆಗಾಗ ಟೆಂಪರ್ ಕಳೆದುಕೊಳ್ಳುತ್ತಾರೆ.

ಗೋವಿಂದ: ನಟ ಗೋವಿಂದ ಅವರಿಗೆ ಈಗ ಮೊದಲಿನಷ್ಟು ಬೇಡಿಕೆ ಇಲ್ಲ. ಅವರು ಈ ಮೊದಲು ‘ಮನಿ ಹೈ ತೋ ಹನಿ ಹೇ’ ಸಿನಿಮಾ ಶೂಟಿಂಗ್​ನಲ್ಲಿ ವ್ಯಕ್ತಿಯೊಬ್ಬನ ಕೆನ್ನೆಗೆ ಹೊಡೆದಿದ್ದರು. ಈ ವಿಚಾರದಲ್ಲಿ ಕೇಸ್ ಕೂಡ ದಾಖಲಾಯಿತು. ಆ ಬಳಿಕ ಗೋವಿಂದ ಅವರು ಕೆನ್ನೆಗೆ ಬಾರಿಸಿದವನಿಗೆ ಪರಿಹಾರ ನೀಡಿದ್ದರು.

ನಯನತಾರಾ: ದಕ್ಷಿಣ ಭಾರತದ ಲೇಡಿ ಸೂಪರ್​ಸ್ಟಾರ್ ನಯನತಾರಾ ಎಲ್ಲ ಸಂದರ್ಭದಲ್ಲೂ ಕೂಲ್ ಆಗಿ ನಡೆದುಕೊಳ್ಳುವುದಿಲ್ಲ. ನಯನತಾರಾ ಹಾಗೂ ಅವರ ಪತಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅಭಿಮಾನಿಯೋರ್ವ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದರು. ಆಗ ಅಭಿಮಾನಿಯ ಮೊಬೈಲ್​ನ ಸಿಟ್ಟಿನಿಂದ ಬಿಸಾಕಿ ಒಡೆದಿದ್ದರು.

ಅಕ್ಷಯ್ ಕುಮಾರ್: ಅಕ್ಷಯ್ ಕುಮಾರ್ ಅವರು ‘ಗಬ್ಬರ್ ಈಸ್ ಬ್ಯಾಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದರು. ಈ ವೇಳೆ ಅವರು ಅಭಿಮಾನಿಯ ಕೆನ್ನೆಗೆ ಬಾರಿಸಿದ್ದರು. ಶೂಟ್ ಏರಿಯಾಗೆ ಬಂದಿದ್ದರಿಂದ ಅವರು ಈ ರೀತಿ ನಡೆದುಕೊಂಡಿದ್ದರು.

ಜಾನ್ ಅಬ್ರಹಾಂ: ಜಾನ್ ಅಬ್ರಹಾಂ ಅವರು ತಮ್ಮ ಜೀವನದ ಯಾವ ವಿಚಾರವನ್ನೂ ಬಿಟ್ಟುಕೊಡಲು ಇಷ್ಟಪಡುವುದಿಲ್ಲ. ಅವರು ಪಾಪರಾಜಿಗಳ ಕಣ್ಣಿಗೆ ಬೀಳುವುದಿಲ್ಲ. ಈ ಮೊದಲು ಅವರ ಬಳಿ ಬಂದ ಅಭಿಮಾನಿ ವಿರುದ್ಧ ಸಿಟ್ಟಾಗಿದ್ದರು. ನಂತರ ಅಭಿಮಾನಿಯ ಕೆನ್ನೆಗೆ ಅವರು ಹೊಡೆದಿದ್ದರು.

ಇದನ್ನೂ ಓದಿ: VIDEO: ಅಭಿಮಾನಿಗೆ ಕಪಾಳಮೋಕ್ಷ ಮಾಡಿದ ಶಕೀಬ್ ಅಲ್ ಹಸನ್

ಆದಿತ್ಯ ನಾರಾಯಣ್: ಗಾಯಕ ಆದಿತ್ಯ ನಾರಾಯಣ್ ಅವರ ವರ್ತನೆ ಇತ್ತೀಚೆಗೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಅವರು ಅಭಿಮಾನಿಯಿಂದ ಫೋನ್ ಕಸಿದು ಅದನ್ನು ಎಸೆದಿದ್ದರು. ಮೈಕ್​ನಿಂದ ಅಭಿಮಾನಿಗೆ ಅವರು ಹೊಡೆದಿದ್ದಾರೆ ಎನ್ನುವ ಆರೋಪವೂ ಇದೆ. ಅಭಿಮಾನಿ ಪದೇ ಪದೇ ಕಿರಿಕಿರಿ ಉಂಟು ಮಾಡಿದ್ದರಿಂದ ಆದಿತ್ಯ ನಾರಾಯಣ್ ಟೆಂಪರ್ ಕಳೆದುಕೊಂಡಿದ್ದರು.

ನಾನಾ ಪಾಟೇಕರ್: ನಾನಾ ಪಾಟೇಕರ್ ಇತ್ತೀಚೆಗೆ ಸುದ್ದಿ ಆಗಿದ್ದರು. ಅವರು ಸೆಲ್ಫಿ ಕೇಳಿದ ಅಭಿಮಾನಿಯ ಕೆನ್ನೆಗೆ ಬಾರಿಸಿದ್ದರು. ನಂತರ ತಮ್ಮಿಂದ ಪ್ರಮಾದವಾಗಿದೆ ಎಂದು ಅವರು ಕ್ಷಮೆ ಕೇಳಿದ್ದರು. ಅಲ್ಲದೆ ಗೊಂದಲದಿಂದ ಈ ರೀತಿ ಆಗಿದೆ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ