ವಿವಾಹ ವಾರ್ಷಿಕೋತ್ಸವದ ದಿನ ವಿಶೇಷ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳ ನಡುವೆ, ಅವರು ತಮ್ಮ 18ನೇ ವಿವಾಹ ವಾರ್ಷಿಕೋತ್ಸವದಂದು ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪತಿ ಮತ್ತು ಮಗಳ ಜೊತೆಗಿನ ಸೆಲ್ಫಿಯು ವದಂತಿಗಳಿಗೆ ತೆರೆ ಎಳೆದಿದೆ. ಅಭಿಮಾನಿಗಳು ಈ ಫೋಟೋಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವಿವಾಹ ವಾರ್ಷಿಕೋತ್ಸವದ ದಿನ ವಿಶೇಷ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ
Abhishek Sharma
Edited By:

Updated on: Apr 22, 2025 | 7:56 AM

ನಟಿಯರಾದ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್ ಬಚ್ಚನ್ ಕಳೆದ ಕೆಲವು ತಿಂಗಳುಗಳಿಂದ ತಮ್ಮ ವಿಚ್ಛೇದನದ ವದಂತಿಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಐಶ್ವರ್ಯಾ ತಮ್ಮ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರಿಬ್ಬರೂ ಈ ಯಾವುದೇ ಚರ್ಚೆಗಳಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಚರ್ಚೆಗಳ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಅಭಿಮಾನಿಗಳು ತುಂಬಾ ಸಂತೋಷಪಟ್ಟರು. ಐಶ್ವರ್ಯಾ ಅವರ ಇನ್‌ಸ್ಟಾಗ್ರಾಮ್ ಫೋಟೋದಲ್ಲೂ ಈಗ ಇದೇ ರೀತಿಯ ಘಟನೆ ನಡೆದಿದೆ. ತಮ್ಮ 18 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಐಶ್ವರ್ಯಾ ವಿಶೇಷ ಕುಟುಂಬ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ

ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜೊತೆಗಿನ ಸೆಲ್ಫಿಯನ್ನು ಪೋಸ್ಟ್ ಮಾಡುವ ಮೂಲಕ ಎಲ್ಲಾ ವಿಚ್ಛೇದನದ ಮಾತುಗಳಿಗೆ ಐಶ್ವರ್ಯಾ ರೈ ಅಂತ್ಯ ಹಾಡಿದ್ದಾರೆ. ಈ ಇಬ್ಬರು ಮತ್ತೆ ಒಟ್ಟಿಗೆ ಇರುವುದನ್ನು ನೋಡಿ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ. ಐಶ್ವರ್ಯಾ ಅವರ ಈ ಫೋಟೋ ಅಭಿಮಾನಿಗಳಿಂದ ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸುರಿಮಳೆಯನ್ನು ಪಡೆಯುತ್ತಿದೆ.

ಇದನ್ನೂ ಓದಿ
ಚಾಕು ಇರಿತ ಪ್ರಕರಣ ನಡೆದ 3 ತಿಂಗಳಿಗೆ ಹೊಸ ಮನೆ ಖರೀದಿಸಿದ ಸೈಫ್ ಅಲಿ ಖಾನ್
‘ನಾನು ಮಾತ್ರ ಅಲ್ಲಾರೀ’; ಸ್ಟಾರ್ ಕಲಾವಿದರ ಡ್ರಗ್ಸ್ ಪುರಾಣ ಬಿಚ್ಚಿಟ್ಟ ಶೈನ್
ಈಗ ಪತ್ನಿಯೇ ಸರ್ವಸ್ವ; ವಿಜಯಲಕ್ಷ್ಮೀ ಜೊತೆ ಭರನಾಟ್ಯ ನೋಡಲು ಬಂದ ದರ್ಶನ್
ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಏಪ್ರಿಲ್ 20, 2007 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರು ಮದುವೆಯಾಗಿ 18 ವರ್ಷಗಳಾಗಿವೆ. ಐಶ್ವರ್ಯಾ ತಮ್ಮ ವಿವಾಹ ವಾರ್ಷಿಕೋತ್ಸವದಂದು ಈ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದು, ಶೀರ್ಷಿಕೆಯಲ್ಲಿ ಹೃದಯದ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಈ ಫೋಟೋಗೆ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಇತರ ಸೆಲೆಬ್ರಿಟಿಗಳು ಲೈಕ್‌ಗಳ ಸುರಿಮಳೆಗೈದಿದ್ದಾರೆ. ‘ಕೊನೆಗೆ ಎಲ್ಲವೂ ಸರಿಹೋಯಿತು, ಕುಟುಂಬಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ’ ಎಂದು ಒಬ್ಬರು ಬರೆದಿದ್ದಾರೆ. ‘ಈ ಇಬ್ಬರನ್ನು ಒಟ್ಟಿಗೆ ನೋಡಿ ನನಗೆ ತುಂಬಾ ಸಂತೋಷವಾಗಿದೆ’ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ‘ವಿಚ್ಛೇದನದ ಬಗ್ಗೆ ವದಂತಿಗಳನ್ನು ಹರಡುವವರು ಈ ಫೋಟೋವನ್ನು ನೋಡಬೇಕು, ಎಲ್ಲರೂ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದು ನೆಟ್ಟಿಗರು ಬರೆದಿದ್ದಾರೆ. ಕೆಲವರು ಐಶ್ವರ್ಯಾ ಮತ್ತು ಅಭಿಷೇಕ್ ತಮ್ಮ ಮಗಳು ಆರಾಧ್ಯಗಾಗಿ ಒಟ್ಟಿಗೆ ಸೇರಿದ್ದಾರೆಂದು ಊಹಿಸಿದ್ದಾರೆ.

ಇದನ್ನೂ ಓದಿ: ‘ಕೊನೆ ಉಸಿರಿನವರೆಗೂ ಐಶ್ವರ್ಯಾ ಪರವಾಗಿ ಹೋರಾಡುತ್ತೇನೆ’; ಅಮಿತಾಭ್ ಹೇಳಿದ್ದ ಮಾತಿದು 

2024 ರಿಂದ, ಅಭಿಷೇಕ್ ಮತ್ತು ಐಶ್ವರ್ಯಾ ಅವರ ಸಂಬಂಧದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂಬ ವದಂತಿಗಳು ಹಬ್ಬಿದ್ದವು. ಐಶ್ವರ್ಯಾ ತಮ್ಮ ಮಗಳ ಜೊತೆ ವಿವಿಧ ಕಾರ್ಯಕ್ರಮಗಳಿಗೆ ಬರುತ್ತಿದ್ದರು ಮತ್ತು ಅಭಿಷೇಕ್ ತಮ್ಮ ಕುಟುಂಬದೊಂದಿಗೆ ಪ್ರತ್ಯೇಕವಾಗಿ ಬರುತ್ತಿದ್ದರು. ಅಂದಿನಿಂದ ಅವರ ವಿಚ್ಛೇದನದ ಬಗ್ಗೆ ಮಾತುಗಳು ಶುರುವಾದವು. ಇಷ್ಟೇ ಅಲ್ಲ, ‘ದಾಸ್ವಿ’ ಖ್ಯಾತಿಯ ನಟಿ ನಿಮ್ರತ್ ಕೌರ್ ಜೊತೆ ಅಭಿಷೇಕ್ ಅವರ ಪ್ರಣಯದ ಬಗ್ಗೆಯೂ ಸುದ್ದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:42 am, Mon, 21 April 25