‘ಮೈದಾನ್​’ ಟ್ವಿಟರ್​ ವಿಮರ್ಶೆ: ಫುಲ್​ ಮಾರ್ಕ್ಸ್​ ನೀಡಿದ ಅಜಯ್​ ದೇವಗನ್​ ಅಭಿಮಾನಿಗಳು

|

Updated on: Apr 10, 2024 | 3:51 PM

60ಕ್ಕೂ ಹೆಚ್ಚು ದೇಶಗಳಲ್ಲಿ, 1600ಕ್ಕೂ ಅಧಿಕ ಪರದೆಗಳಲ್ಲಿ ‘ಮೈದಾನ್​’ ಸಿನಿಮಾ ರಿಲೀಸ್​ ಆಗಿದೆ. ಈ ಚಿತ್ರದಲ್ಲಿ ಅಜಯ್​ ದೇವಗನ್​ ಅವರು ಫುಟ್​ಬಾಲ್​ ಕೋಚ್​ ಪಾತ್ರವನ್ನು ಮಾಡಿದ್ದಾರೆ. ಅಮಿತ್​ ಶರ್ಮಾ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಗಜರಾಜ್​ ರಾವ್​, ಪ್ರಿಯಾಮಣಿ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ದಿನ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

‘ಮೈದಾನ್​’ ಟ್ವಿಟರ್​ ವಿಮರ್ಶೆ: ಫುಲ್​ ಮಾರ್ಕ್ಸ್​ ನೀಡಿದ ಅಜಯ್​ ದೇವಗನ್​ ಅಭಿಮಾನಿಗಳು
ಅಜಯ್​ ದೇವಗನ್​
Follow us on

ಬಾಲಿವುಡ್​ನ ಸ್ಟಾರ್​ ನಟ ಅಜಯ್​ ದೇವಗನ್​ (Ajay Devgn) ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷ ಆರಂಭದಲ್ಲಿ ಅವರು ‘ಶೈತಾನ್​’ ಸಿನಿಮಾದಿಂದ ಭರ್ಜರಿ ಗೆಲುವು ಕಂಡರು. ಈಗ ಅವರು ನಟಿಸಿರುವ ಮೈದಾನ್​’ ಸಿನಿಮಾ (Maidaan Movie) ಬಿಡುಗಡೆ ಆಗಿದೆ. ಇಂದು (ಏಪ್ರಿಲ್​ 10) ದೇಶಾದ್ಯಂತ ಈ ಚಿತ್ರ ತೆರೆಕಂಡಿದೆ. ಮೊದಲ ದಿನ ಮೊದಲ ಶೋ ನೋಡಿದ ಅಭಿಮಾನಿಗಳು ‘ಮೈದಾನ್​’ ಚಿತ್ರಕ್ಕೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಸಿನಿಮಾದ ಟ್ವಿಟರ್​ ವಿಮರ್ಶೆ (Maidaan X Review) ಇಲ್ಲಿದೆ..

‘ಅಜಯ್​ ದೇವಗನ್​ ಅವರಿಂದ ಒಂದು ಬ್ರಿಲಿಯಂಟ್​ ಸಿನಿಮಾ ಬಂದಿದೆ. ಮನ ಸೆಳೆಯುವಂತಹ ಒಂದು ಗಟ್ಟಿಯಾದ ಕಥಾಹಂದರ ಈ ಸಿನಿಮಾದಲ್ಲಿದೆ. ಈ ಚಿತ್ರವನ್ನು ಮಿಸ್​ ಮಾಡಿಕೊಳ್ಳಬೇಡಿ’ ಎಂದು ನೆಟ್ಟಿಗರೊಬ್ಬರು ಪೋಸ್ಟ್​ ಮಾಡಿದ್ದಾರೆ. ಇಂಥ ಪಾಸಿಟಿವ್​ ವಿಮರ್ಶೆಗಳು ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ‘ಮೈದಾನ್​’ ಸಿನಿಮಾಗೆ ಉತ್ತಮ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ.

ನಟನೆ ಮೂಲಕ ಅಜಯ್​ ದೇವಗನ್​ ಅವರು ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ. ‘ಅಜಯ್​ ದೇವಗನ್​ ಅವರ ನಟನೆಯನ್ನು ನೋಡಲು ಎಲ್ಲ ಸಿನಿಪ್ರೇಮಿಗಳು ಈ ಚಿತ್ರವನ್ನು ನೋಡಬೇಕು’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ. ಈ ಸಿನಿಮಾ ಖಂಡಿತವಾಗಿ ಹಿಟ್​ ಆಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಅಜಯ್​ ದೇವಗನ್​ ಅವರಿಗೆ ಈ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದು ಅಭಿಮಾನಿಗಳು ಹಂಬಲ ವ್ಯಕ್ತಪಡಿಸಿದ್ದಾರೆ. ಅನೇಕರ ಮನಸ್ಸಿನಲ್ಲಿ ಕನಸನ್ನು ಬಿತ್ತುವ ಸಿನಿಮಾ ಇದು. ಕೆಲವರು ಇದನ್ನು ಸಿನಿಮ್ಯಾಟಿಕ್​ ಮಾಸ್ಟರ್​ ಪೀಸ್​ ಎಂದು ಹೊಗಳಿದ್ದಾರೆ.

ನಾಳೆ (ಏಪ್ರಿಲ್​ 11) ಅಕ್ಷಯ್​ ಕುಮಾರ್​ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ತೆರೆಕಾಣಲಿದ್ದು, ಪೈಪೋಟಿ ಜೋರಾಗಲಿದೆ.

ಅಕ್ಷಯ್​ ಕುಮಾರ್​ ಸಿನಿಮಾದ 14 ಸೆಕೆಂಡ್​ ದೃಶ್ಯ ಬ್ಲರ್​ ಮಾಡಲು ಸೂಚಿಸಿದ ಸೆನ್ಸಾರ್​ ಮಂಡಳಿ

60ಕ್ಕೂ ಹೆಚ್ಚು ದೇಶಗಳಲ್ಲಿ, 1600ಕ್ಕೂ ಅಧಿಕ ಪರದೆಗಳಲ್ಲಿ ‘ಮೈದಾನ್​’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅಜಯ್​ ದೇವಗನ್​ ಅವರು ಫುಟ್​ಬಾಲ್​ ಕೋಚ್​ ಸೈಯದ್​ ಅಬ್ದುಲ್​ ರಹೀಮ್​ ಅವರ ಪಾತ್ರವನ್ನು ನಿಭಾಯಿಸಿದ್ದಾರೆ. ಅಮಿತ್​ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಪ್ರಿಯಾಮಣಿ, ಗಜರಾಜ್​ ರಾವ್​ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮೊದಲ ದಿನ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.