ನಟ ಅಕ್ಷಯ್ ಕುಮಾರ್ (Akshay Kumar) ಅವರಿಗೆ ಇತ್ತೀಚೆಗೆ ಅದೃಷ್ಟ ಕೈಕೊಟ್ಟಿದೆ. ಅಂದುಕೊಂಡಂತೆ ಯಾವುದೂ ನಡೆಯುತ್ತಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಫ್ಯಾನ್ಸ್ ಕೂಡ ಬೇಸರಗೊಂಡಿದ್ದಾರೆ. ಈಗ ಅಕ್ಷಯ್ ಕುಮಾರ್ ಅವರು ಸಾಲು ಸಾಲು ಸಿನಿಮಾ ಆಫರ್ ಕಳೆದುಕೊಂಡ ಬಗ್ಗೆ ವರದಿ ಆಗಿದೆ. ಈ ವಿಚಾರ ಕೇಳಿ ಅಕ್ಕಿ ಫ್ಯಾನ್ಸ್ ಸಖತ್ ಬೇಸರಗೊಂಡಿದ್ದಾರೆ. ಅಷ್ಟಕ್ಕೂ ಅಕ್ಷಯ್ ಕುಮಾರ್ ಆಫರ್ ಕಳೆದುಕೊಂಡಿದ್ದೇಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಹೇರಾ ಫೇರಿ’ ಸರಣಿಯ ಎರಡು ಚಿತ್ರಗಳು ಹಿಟ್ ಆಗಿವೆ. ಈ ಕಾರಣಕ್ಕೆ ನಿರ್ಮಾಪಕ ಫಿರೋಜ್ ನಾಡಿಯಾದ್ವಾಲಾ ‘ಹೇರಾ ಫೇರಿ 3’ ಸಿನಿಮಾ ಮಾಡಲು ಆಲೋಚನೆ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿಲ್ಲ. ಅವರ ಬದಲಿಗೆ ಕಾರ್ತಿಕ್ ಆರ್ಯನ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಮಾತನಾಡಿದ್ದ ಅಕ್ಷಯ್ ಕುಮಾರ್ ಅವರು ‘ಹೇರಾ ಫೇರಿ’ ಸರಣಿಯಿಂದ ಹೊರ ಬಂದಿದ್ದಕ್ಕೆ ಕಾರಣ ತಿಳಿಸಿದ್ದರು. ತಮಗೆ ಸ್ಕ್ರಿಪ್ಟ್ ಇಷ್ಟ ಆಗಿಲ್ಲ. ಹೀಗಾಗಿ ಹೊರ ಬಂದೆ ಎನ್ನುವ ಮಾತನ್ನು ಅವರು ಹೇಳಿದ್ದರು. ಆದರೆ, ಇದರ ಅಸಲಿಯತ್ತು ಬೇರೆ ಇದೆ ಎನ್ನಲಾಗುತ್ತಿದೆ. ಅಕ್ಷಯ್ ಕುಮಾರ್ ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 90 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಆದರೆ, ಇದನ್ನು ನೀಡಲು ಫಿರೋಜ್ ನಿರಾಕರಿಸಿದ್ದಾರೆ.
ಸ್ಕ್ರಿಪ್ಟ್ ಇಷ್ಟವಾಗಿಲ್ಲ ಎಂಬ ಅಕ್ಷಯ್ ಕುಮಾರ್ ಹೇಳಿಕೆಯಿಂದ ಫಿರೋಜ್ ಅವರು ಅಪ್ಸೆಟ್ ಆಗಿದ್ದಾರೆ. ‘ಹೇರಾ ಫೇರಿ 3’ ಚಿತ್ರದಿಂದ ಕೈ ಬಿಟ್ಟಿದ್ದು ಅಲ್ಲದೆ, ‘ವೆಲ್ಕಮ್ 3’ ಹಾಗೂ ‘ಆವಾರಾ ಪಾಗಲ್ ದೀವಾನಾ 2’ ಚಿತ್ರದಿಂದಲೂ ಅಕ್ಷಯ್ ಅವರನ್ನು ಕೈಬಿಡುವ ನಿರ್ಧಾರಕ್ಕೆ ಫಿರೋಜ್ ಬಂದಿದ್ದಾರೆ. ಅಕ್ಷಯ್ ಕುಮಾರ್ ಅವರು ಹೆಚ್ಚಿನ ಸಂಭಾವನೆ ಕೇಳಿ ದುರಾಸೆ ಮಾಡಿದಕ್ಕಾಗಿಯೇ ಈ ರೀತಿ ಆಯಿತು ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆದ ‘ದೃಶ್ಯಂ 2’; ಅಕ್ಷಯ್ ಕುಮಾರ್ ದಾಖಲೆ ಉಡೀಸ್
ಇತ್ತೀಚೆಗೆ ತೆರೆಗೆ ಬಂದ ‘ಭೂಲ್ ಭುಲಯ್ಯ 2’ ಸಿನಿಮಾ ಸೂಪರ್ ಹಿಟ್ ಆಯಿತು. ‘ಭೂಲ್ ಭುಲಯ್ಯ ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರು. ಇದರ ಸೀಕ್ವೆಲ್ನಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ ಹೊರತಾಗಿಯೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತು. ಇದು ಕೂಡ ಫಿರೋಜ್ ಅವರ ನಿರ್ಧಾರದ ಮೇಲೆ ಪ್ರಭಾವ ಬೀರಿದೆ.