Akshay Kumar: ಚಿತ್ರವನ್ನು ಪ್ರಚಾರ ಮಾಡುವಲ್ಲೂ ಹೊಸತನ ಮೆರೆದ ಅಕ್ಷಯ್; ಹೇಗೆ ಅಂತೀರಾ? ಇಲ್ಲಿದೆ ವಿಡಿಯೋ

Atrangi Re: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಚಿತ್ರಗಳು ಸಾಲುಸಾಲಾಗಿ ತೆರೆಕಾಣುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ಅವರ ‘ಅತರಂಗಿ ರೇ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದೀಗ ಚಿತ್ರವನ್ನು ವಿಶೇಷ ರೀತಿಯಲ್ಲಿ ಅಕ್ಷಯ್ ಪ್ರಚಾರ ಮಾಡಿದ್ದಾರೆ.

Akshay Kumar: ಚಿತ್ರವನ್ನು ಪ್ರಚಾರ ಮಾಡುವಲ್ಲೂ ಹೊಸತನ ಮೆರೆದ ಅಕ್ಷಯ್; ಹೇಗೆ ಅಂತೀರಾ? ಇಲ್ಲಿದೆ ವಿಡಿಯೋ
ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು ಹೀಗೆ
Follow us
TV9 Web
| Updated By: shivaprasad.hs

Updated on: Dec 25, 2021 | 11:13 AM

ಸದ್ಯ ಬಾಲಿವುಡ್​​ನಲ್ಲಿ (Bollywood) ಬಿಡುವಿಲ್ಲದ ನಟ ಯಾರು ಎಂದು ಕೇಳಿದರೆ ಅಕ್ಷಯ್ ಕುಮಾರ್ (Akshay Kumar) ಹೆಸರು ಮೊದಲ ಸಾಲಿನಲ್ಲಿ ಬರುತ್ತದೆ. ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದಷ್ಟೇ ಅಲ್ಲ, ಅವರ ಚಿತ್ರಗಳು ಸಾಲುಸಾಲಾಗಿ ಬಿಡುಗಡೆಯೂ ಆಗುತ್ತಿವೆ. ಆಗಸ್ಟ್ 19ರಂದು ಚಿತ್ರಮಂದಿರಗಳಲ್ಲಿ ಅಕ್ಷಯ್ ಅವರ ‘ಬೆಲ್​ಬಾಟಂ’ (Bell Bottom) ಬಿಡುಗಡೆಯಾಗಿತ್ತು. ಕೊರೊನಾ ನಿಯಮಾವಳಿಗಳಿಂದ ದೇಶಾದ್ಯಂತ ಹೆಚ್ಚು ಚಿತ್ರಮಂದಿರಗಳು ಲಭ್ಯವಿಲ್ಲದಿದ್ದರೂ ಬಿಡುಗಡೆಯಾಗುವ ಧೈರ್ಯವನ್ನು ಚಿತ್ರವು ತೋರಿತ್ತು. ನವೆಂಬರ್​ನಲ್ಲಿ ಅಕ್ಷಯ್- ಕತ್ರಿನಾ ನಟನೆಯ ಸೂರ್ಯವಂಶಿ (Sooryavanshi) ತೆರೆ ಕಂಡಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಿದ್ದಲ್ಲದೇ, ₹ 200 ಕೋಟಿ ಕ್ಲಬ್ ಸೇರಿತ್ತು. ಇದೀಗ ತಿಂಗಳ ಅವಧಿಯಲ್ಲೇ ಅಕ್ಷಯ್ ನಟನೆಯ ಮತ್ತೊಂದು ಚಿತ್ರ ತೆರೆ ಕಂಡಿದೆ. ‘ಅತರಂಗಿ ರೇ’ (Atrangi Re) ಒಟಿಟಿಯಲ್ಲಿ ತೆರೆಕಂಡಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರಸ್ತುತ ಅಕ್ಷಯ್ ಕುಮಾರ್ ಚಿತ್ರವನ್ನು ವಿಭಿನ್ನವಾಗಿ ಪ್ರಚಾರ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.

ಇನ್ಸ್ಟಾಗ್ರಾಂನಲ್ಲಿ ಅಕ್ಷಯ್ ಕುಮಾರ್ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಅದರಲ್ಲಿ ಅಕ್ಷಯ್ ಅವರ ಒಂಬತ್ತು ವರ್ಷದ ಪುತ್ರಿ ನಿತಾರಾ ಕಾಣಿಸಿಕೊಂಡಿದ್ದಾಳೆ. ಕುಟುಂಬದೊಂದಿಗೆ ರಜಾ ದಿನಗಳನ್ನು ಕಳೆಯುತ್ತಿರುವ ಅಕ್ಷಯ್, ವಿಡಿಯೋದಲ್ಲಿ ಅಕ್ಷಯ್ ದೊಡ್ಡ ಸ್ಪೀಕರ್ ಒಂದನ್ನು ಹೆಗಲ ಮೇಲಿಟ್ಟು ಹೆಜ್ಜೆ ಹಾಕಿದ್ದಾರೆ. ಆಗ ಅವರ ಪುತ್ರಿ ನಿತಾರಾ ಅಕ್ಷಯ್ ಎದುರಿನಿಂದ ವೇಗವಾಗಿ ಹಾದುಹೋಗಿದ್ದಾಳೆ. ವಿಡಿಯೋದಲ್ಲಿ ನಿತಾರಾ ಮಾಸ್ಕ್ ಧರಿಸಿರುವುದು ಸೆರೆಯಾಗಿದೆ. ನಿತಾರಾ ತಲೆಯನ್ನು ಮೆಲ್ಲಗೆ ತಟ್ಟಿದ ಅಕ್ಷಯ್ ಹಾಡನ್ನು ಮುಂದುವರೆಸಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಅಕ್ಷಯ್, ‘‘ಅತರಂಗಿ ರೇ ಚಿತ್ರದ ಈ ಹಾಡು ಲೂಪ್​ನಲ್ಲಿ ಕೇಳುತ್ತಿದ್ದೇನೆ. ಕೇವಲ ಸ್ಪೀಕರ್​ನಲ್ಲಲ್ಲ. ನನ್ನ ತಲೆಯಲ್ಲೂ ಹಾಗೇ ಓಡುತ್ತಿದೆ ಅದ್ಭುತ ಹಾಡು, ಆಹ್ಲಾದಕರ ಅನುಭವ’’ ಎಂದು ಬರೆದುಕೊಂಡಿದ್ದಾರೆ.

ಅಕ್ಷಯ್ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

View this post on Instagram

A post shared by Akshay Kumar (@akshaykumar)

ಆನಂದ್ ಎಲ್​ ರೈ ನಿರ್ದೇಶನದ ‘ಅತರಂಗಿ ರೇ’ ಚಿತ್ರದಲ್ಲಿ ಕಾಲಿವುಡ್ ನಟ ಧನುಷ್ ಹಾಗೂ ಸಾರಾ ಅಲಿ ಖಾನ್ ಕೂಡ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಬತ್ತಳಿಕೆಯಲ್ಲಿ ಸದ್ಯ ಹಲವಾರು ಚಿತ್ರಗಳಿವೆ. ‘ಪೃಥ್ವಿರಾಜ್’, ‘ಬಚ್ಚನ್ ಪಾಂಡೆ’ ಚಿತ್ರಗಳು ಸಿದ್ಧವಾಗಿದ್ದು 2022ರ ಮೊದಲಾರ್ಧದಲ್ಲಿ ತೆರೆಕಾಣುವ ನಿರೀಕ್ಷೆ ಇದೆ. ಇವುಗಳಲ್ಲದೇ ‘ರಕ್ಷಾ ಬಂಧನ್’, ‘ಗೋರ್ಖಾ’, ‘ರಾಮ್​ಸೇತು’ ಮೊದಲಾದ ಬಹುನಿರೀಕ್ಷಿತ ಚಿತ್ರಗಳಲ್ಲಿ ಅಕ್ಷಯ್ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

RRR: ರಾಮ್​ ಚರಣ್​, ಜ್ಯೂ. ಎನ್​ಟಿಆರ್​, ರಾಜಮೌಳಿ, ಆಲಿಯಾ ಇವರಲ್ಲಿ ಹೆಚ್ಚು ಸಂಭಾವನೆ ಪಡೆದವರು ಯಾರು?

ಪ್ರಭಾಸ್​ ಅಭಿಮಾನಿಗಳಿಗೆ ಶುರುವಾಗಿದೆ ಹೊಸ ಚಿಂತೆ; ‘ರಾಧೆ ಶ್ಯಾಮ್​’ ಚಿತ್ರಕ್ಕೆ ಕೈ ಕೊಡಬಹುದಾ ಗ್ರಾಫಿಕ್ಸ್​?

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ