
ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್ನ ಸೂಪರ್ ಸ್ಟಾರ್. ಹಲವು ಚಿತ್ರಗಳನ್ನು ಅವರು ರಿಮೇಕ್ ಮಾಡಿದ್ದಾರೆ. ಕೆಲವು ಸಿನಿಮಾಗಳು ಯಶಸ್ಸು ಕಂಡರೆ, ಇನ್ನೂ ಕೆಲವು ಸಿನಿಮಾಗಳು ಫ್ಲಾಪ್ ಆಗಿವೆ. ಈಗ ದಕ್ಷಿಣದ ಸೂಪರ್ ಹಿಟ್ ಕಾಮಿಡಿ ಚಿತ್ರವನ್ನು ರಿಮೇಕ್ ಮಾಡಲು ಅಕ್ಷಯ್ ಕುಮಾರ್ ಮುಂದಾಗಿದ್ದಾರೆ. ಇದು ಹಾಸ್ಯ ಚಿತ್ರ ಆಗಿರುವುದರಿಂದ ಅಕ್ಷಯ್‌ಗೆ ಗೆಲುವು ಸಿಗುವ ನಿರೀಕ್ಷೆ ಇದೆ.
ಅಕ್ಷಯ್ ಕುಮಾರ್ ಅವರು ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ನಿಜ. ಆದರೆ, ಇತ್ತೀಚೆಗೆ ಅವರಿಗೆ ಗೆಲುವು ಸಿಗುತ್ತಿಲ್ಲ. ಅಂದುಕೊಂಡಂತೆ ಸಿನಿಮಾ ಯಶಸ್ಸು ಕಾಣುತ್ತಿಲ್ಲ. ಈ ಬಗ್ಗೆ ಅಕ್ಷಯ್‌ಗೆ ಬೇಸರ ಇದೆ. ಆದರೆ, ಅವರು ರಿಮೇಕ್ ಮಾಡೋದನ್ನು ಮಾತ್ರ ನಿಲ್ಲಿಸುತ್ತಿಲ್ಲ. ದಕ್ಷಿಣದಲ್ಲಿ ಹಿಟ್ ಆದ ಹಲವು ಚಿತ್ರಗಳನ್ನು ಬಾಲಿವುಡ್ನಲ್ಲಿ ಟ್ರೈ ಮಾಡಿದ್ದಾರೆ. ಈಗ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ರಿಮೇಕ್ನಲ್ಲಿ ಅವರು ನಟಿಸುತ್ತಿದ್ದಾರೆ.
‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ತೆಲುಗಿನ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ವಿಕ್ಟರಿ ವೆಂಕಟೇಶ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸಖತ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿತ್ತು. ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಜನವರಿಯಲ್ಲಿ ರಿಲೀಸ್ ಆಗಿ 280 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಈ ಚಿತ್ರ ಹಿಂದಿಗೆ ರಿಮೇಕ್ ಆಗುತ್ತಿದೆ. ವಿಕ್ಟರಿ ವೆಂಕಟೇಶ್ ಮಾಡಿದ್ದ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡಲಿದ್ದಾರೆ. ‘ವೆಲ್ಕಮ್’, ‘ಭೂಲ್ ಭುಲಯ್ಯ’ ರೀತಿಯ ಸಿನಿಮಾ ನಿರ್ದೇಶನ ಮಾಡಿದ್ದ ಅನೀಸ್ ಬಾಜ್ಮೀ ಅವರು ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರವನ್ನು ಹಿಂದಿಯಲ್ಲಿ ದಿಲ್ ರಾಜು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಬೇಕು. ಹೀಗಾಗಿ, ಅದರ ಹುಡುಕಾಟ ನಡೆಯುತ್ತಿದೆ.
ಇದನ್ನೂ ಓದಿ: ಬದಲಾಗೋದೇ ಇಲ್ಲ ಅಕ್ಷಯ್ ಕುಮಾರ್ ಅದೃಷ್ಟ; ಹೊಸ ಚಿತ್ರ, ಮತ್ತದೇ ಹೀನಾಯ ಕಲೆಕ್ಷನ್
ಅಕ್ಷಯ್ ಕುಮಾರ್ ಇತ್ತೀಚೆಗೆ ಗಂಭೀರ ಸಿನಿಮಾಗಳನ್ನೇ ಹೆಚ್ಚು ರಿಮೇಕ್ ಮಾಡುತ್ತಿದ್ದಾರೆ. ಆದರೆ, ಅದು ಯಶಸ್ಸು ಕಾಣುತ್ತಿಲ್ಲ. ಹೀಗಾಗಿ, ಅಕ್ಷಯ್ ಕುಮಾರ್ ಅವರು ಹಾಸ್ಯ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕೈ ಹಿಡಿಯೋ ಸೂಚನೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:02 am, Tue, 14 October 25