ದೇಶಭಕ್ತಿ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಿದ ಸೆನ್ಸಾರ್ ಮಂಡಳಿ; ಕಾರಣ ಏನು?

ಅಕ್ಷಯ್ ಕುಮಾರ್​ ನಟನೆಯ ‘ಕೇಸರಿ: ಚಾಪ್ಟರ್​ 2’ ಸಿನಿಮಾದಲ್ಲಿ ದೇಶಭಕ್ತಿಯ ಕಥೆ ಇದೆ. ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಏಪ್ರಿಲ್ 18ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಕರಣ್ ಸಿಂಗ್ ತ್ಯಾಗಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಆರ್. ಮಾಧವನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ದೇಶಭಕ್ತಿ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಿದ ಸೆನ್ಸಾರ್ ಮಂಡಳಿ; ಕಾರಣ ಏನು?
Akshay Kumar

Updated on: Apr 10, 2025 | 7:04 PM

ಟ್ರೇಲರ್ ಮೂಲಕ ‘ಕೇಸರಿ: ಚಾಪ್ಟರ್​ 2’ (Kesari Chapter 2) ಸಿನಿಮಾ ಗಮನ ಸೆಳೆದಿದೆ. ಏಪ್ರಿಲ್ 18ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ (Akshay Kumar), ಆರ್​. ಮಾಧವನ್, ಅನನ್ಯಾ ಪಾಂಡೆ ಮುಂತಾದವರು ನಟಿಸಿದ್ದಾರೆ. ‘ಕೇಸರಿ: ಚಾಪ್ಟರ್​ 2’ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ. ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾ ನೋಡಬೇಕು ಎಂಬುದು ಚಿತ್ರತಂಡದ ನಿರೀಕ್ಷೆ ಆಗಿರುತ್ತದೆ. ಆದರೆ ಈ ಸಿನಿಮಾಗೆ ಈಗ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ನೀಡಲಾಗಿದೆ. ಅಂದರೆ, 18 ವರ್ಷ ವಯಸ್ಸಿಗಿಂತಲೂ ಕಿರಿಯರು ಈ ಸಿನಿಮಾವನ್ನು ವೀಕ್ಷಿಸುವಂತಿಲ್ಲ. ಅಷ್ಟಕ್ಕೂ ‘ಕೇಸರಿ: ಚಾಪ್ಟರ್​ 2’ (Kesari 2) ಸಿನಿಮಾಗೆ ‘ಎ’ ಪ್ರಮಾಣಪತ್ರ ಸಿಕ್ಕಿದ್ದು ಯಾಕೆ ಎಂಬ ಬಗ್ಗೆ ಇಲ್ಲಿದೆ ವಿವರ..

1919ರ ಏಪ್ರಿಲ್ 13ರಂದು ನಡೆದ ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದ ಕುರಿತು ‘ಕೇಸರಿ: ಚಾಪ್ಟರ್ 2’ ಸಿನಿಮಾ ಮೂಡಿಬಂದಿದೆ. ಈ ಹತ್ಯಾಕಾಂಡವನ್ನು ಪ್ರಶ್ನಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಿದ ಶಂಕರನ್ ನಾಯರ್ ಜೀವನದ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಹತ್ಯಾಕಾಂಡದ ಭೀಕರತೆ ಇರುವುದರಿಂದ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿರುವ ಸಾಧ್ಯತೆ ಹೆಚ್ಚಿದೆ.

2019ರಲ್ಲಿ ಬಂದ ‘ಕೇಸರಿ’ ಸಿನಿಮಾದಲ್ಲಿ ಕೂಡ ದೇಶಭಕ್ತಿ ಕಥಾಹಂದರ ಇತ್ತು. ಈಗ ‘ಕೇಸರಿ: ಚಾಪ್ಟರ್​ 2’ ಸಿನಿಮಾ ಕೂಡ ಒಂದು ಐತಿಹಾಸಿಕ ಘಟನೆಯನ್ನು ಆಧರಿಸಿ ಸಿದ್ಧವಾಗಿದೆ. ಈ ಸಿನಿಮಾ ಮೇಲೆ ಅಕ್ಷಯ್ ಕುಮಾರ್ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಕರಣ್ ಸಿಂಗ್ ತ್ಯಾಗಿ ಅವರು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ
80 ಕೋಟಿ ರೂಪಾಯಿಗೆ ಅಪಾರ್ಟ್​ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್
ರಾಜಮೌಳಿ ಅಂಥ ನಿರ್ದೇಶಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರಾ ಅಕ್ಷಯ್ ಕುಮಾರ್?
57 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಸಂಪಾದಿಸಿದ ಆಸ್ತಿ ಎಷ್ಟು?
ಭಾರತದ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್ ಕುಮಾರ್

‘ಕೇಸರಿ: ಚಾಪ್ಟರ್​ 2’ ಸಿನಿಮಾದ ಅವಧಿ 2 ಗಂಟೆ 15 ನಿಮಿಷ ಇದೆ. ಅಕ್ಷಯ್ ಕುಮಾರ್​ ಅವರು ಲಾಯರ್ ಶಂಕರನ್ ನಾಯರ್ ಪಾತ್ರವನ್ನು ಮಾಡಿದ್ದಾರೆ. ಟ್ರೇಲರ್​​ನಲ್ಲಿ ಅವರ ಡೈಲಾಗ್​ಗಳು ಗಮನ ಸೆಳೆದಿವೆ. ಶಾಲಾಪಠ್ಯದಲ್ಲಿ ಹೇಳಿರದ ಅನೇಕ ವಿಷಯಗಳನ್ನು ಈ ಸಿನಿಮಾದ ಮೂಲಕ ಜನರಿಗೆ ತಲುಪಿಸಲು ಚಿತ್ರತಂಡ ಪ್ರಯತ್ನಿಸಿದೆ. ಈ ಸಿನಿಮಾ ಮೂಲಕ ಗೆಲುವು ಕಾಣುವ ನಿರೀಕ್ಷೆಯಲ್ಲಿ ಅಕ್ಷಯ್ ಕುಮಾರ್​ ಇದ್ದಾರೆ.

ಇದನ್ನೂ ಓದಿ: 80 ಕೋಟಿ ರೂಪಾಯಿಗೆ ಅಪಾರ್ಟ್​ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್

ಹೀರೂ ಯಶ್ ಜೋಹರ್, ಅರುಣಾ ಭಾಟಿಯಾ, ಕರಣ್ ಜೋಹರ್, ಆಧಾರ್ ಪೂನಾವಾಲಾ, ಅಪೂರ್ವಾ ಮೆಹ್ತಾ, ಅಮೃತಲಾಲ್ ಸಿಂಗ್ ಬಿಂದ್ರಾ ಮತ್ತು ಆನಂದ್ ತಿವಾರಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಯೂಟ್ಯೂಬ್​ನಲ್ಲಿ ಈ ಸಿನಿಮಾದ ಟ್ರೇಲರ್​ 34 ಮಿಲಿಯನ್​ಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.