‘ಕ್ರಿಶ್ 4’ ನಿರ್ದೇಶನ ಮಾಡಲು ಒಪ್ಪಿ ತಪ್ಪು ಮಾಡಿದ್ರಾ ಹೃತಿಕ್ ರೋಷನ್? ಕಾಡುತ್ತಿದೆ ಭಯ
Hritik Roshan: ಸ್ಟಾರ್ ನಟ ಹೃತಿಕ್ ರೋಷನ್ ಇದೀಗ ಮೊದಲ ಬಾರಿಗೆ ನಿರ್ದೇಶಕ ಆಗಲಿದ್ದಾರೆ. ಅವರೇ ನಟಿಸುತ್ತಾ ಬಂದಿರುವ ಸೂಪರ್ ಹೀರೋ ಸರಣಿ ‘ಕ್ರಿಶ್’ನ 4ನೇ ಭಾಗವನ್ನು ಹೃತಿಕ್ ರೋಷನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಕ್ಕೆ ಅವರ ತಂದೆ ಮತ್ತು ಆದಿತ್ಯ ಚೋಪ್ರಾ ಬಂಡವಾಳ ಹೂಡಲಿದ್ದಾರಂತೆ.

ಹೃತಿಕ್ ರೋಷನ್ (Hritik Roshan) ಅವರು ‘ಕ್ರಿಶ್’ (Krish) ಸರಣಿಯಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಹೃತಿಕ್ ನಟನೆಯ, ರಾಕೇಶ್ ರೋಷನ್ (Rakesh Roshan) ನಿರ್ಮಾಣದ ಈ ಫ್ರ್ಯಾಂಚೈಸಿಯಲ್ಲಿ ಮೂರು ಸಿನಿಮಾಗಳು ಬಂದಿವೆ. ‘ಕ್ರಿಶ್ 4’ ಸಿನಿಮಾ ಬರೋ ಬಗ್ಗೆ ಮೊದಲಿನಿಂದಲೂ ಸಾಕಷ್ಟು ಚರ್ಚೆಗಳು ಇತ್ತಾದರೂ ಅದಕ್ಕೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಈ ಚಿತ್ರವನ್ನು ಹೃತಿಕ್ ರೋಷನ್ ಅವರೇ ನಿರ್ದೇಶನ ಮಾಡುತ್ತಾ ಇದ್ದಾರೆ. ಈ ಮಧ್ಯೆ ಹೃತಿಕ್ ಅವರು ಈ ಸಿನಿಮಾ ನಿರ್ದೇಶನ ಮಾಡೋದು ತಾವು ತೆಗೆದುಕೊಂಡ ದೊಡ್ಡ ತಪ್ಪು ನಿರ್ಧಾರ ಎಂದು ಅನಿಸಿದೆ ಎಂಬುದಾಗಿ ಹೇಳಿದ್ದಾರೆ.
ಅಮೆರಿಕದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಹೃತಿಕ್ ರೋಷನ್ ಮಾತನಾಡಿದ್ದಾರೆ. ಈ ವೇಳೆ ಅವರು ಈ ವಿಚಾರ ಹೇಳಿದ್ದಾರೆ. ‘ನನಗೆ ಭಯ ಹಾಗೂ ನರ್ವಸ್ ಎರಡೂ ಆಗುತ್ತಿದೆ. ನಾನು ಶಿಶುವಿಹಾರಕ್ಕೆ ಹೋದಂತೆ ಭಾಸವಾಗುತ್ತಿದೆ. ನಾನು ಮತ್ತೆ ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಬೆಳೆಯಬೇಕಿದೆ. ಇದು ಹೊಸ ಚಾಲೆಂಜ್. ಕ್ರಿಶ್ 4 ಸಿನಿಮಾ ನಿರ್ದೇಶನ ಮಾಡೋದು ನಾನು ತೆಗೆದುಕೊಂಡು ದೊಡ್ಡ ತಪ್ಪು ನಿರ್ಧಾರ ಎನಿಸುತ್ತದೆ. ಆದರೆ, ನಿಮ್ಮ ನಗು, ಖುಷಿ ನೋಡಿದಾಗ ಚಾಲೆಂಜ್ನ ಸ್ವೀಕರಿಸಬೇಕು ಎನಿಸುತ್ತದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಹೃತಿಕ್ ರೋಷನ್ ಮೆಚ್ಚಿನ ಸಹನಟ ದಕ್ಷಿಣದ ಈ ಸ್ಟಾರ್ ನಟ
ರಾಕೇಶ್ ರೋಷನ್ ಅವರು ಇತ್ತೀಚೆಗೆ ಮಗನ ನಿರ್ದೇಶಕನಾಗಿ ಲಾಂಚ್ ಮಾಡುತ್ತಿರೋ ಬಗ್ಗೆ ಖುಷಿ ಹೊರಹಾಕಿದ್ದಾರೆ. ’25 ವರ್ಷಗಳ ಹಿಂದೆ ಕಹೋ ನಾ ಪ್ಯಾರ್ ಹೈ ಮೂಲಕ ಮಗನ ಹೀರೋ ಆಗಿ ಲಾಂಚ್ ಮಾಡಿದ್ದೆ. ಈಗ 25 ವರ್ಷಗಳ ಬಳಿಕ ಮಗನನ್ನು ನಿರ್ದೇಶಕನನ್ನಾಗಿ ಮಾಡುತ್ತಿದ್ದೇನೆ. ಆದಿತ್ಯ ಚೋಪ್ರಾ ಹಾಗೂ ನಾನು ಕ್ರಿಶ್ 4 ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ’ ಎಂದಿದ್ದರು.
‘ಕ್ರಿಶ್ 4’ ಚಿತ್ರಕ್ಕೆ ಈ ಸಾಕಷ್ಟು ಅಡೆತಡೆಗಳು ಇವೆ. ಇದಕ್ಕೆ ಕಾರಣವೂ ಇದೆ. ಇಂಗ್ಲಿಷ್ನಲ್ಲಿ ಹಲವು ಸೂಪರ್ ಹೀರೋ ಚಿತ್ರಗಳು ಬಂದಿವೆ. ಅಲ್ಲಿನ ಗ್ರಾಫಿಕ್ಸ್ಗಳ ಗುಣಮಟ್ಟ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಅವುಗಳಿಗೆ ಕಾಂಪಿಟೇಷನ್ ಕೊಡುವ ರೀತಿಯಲ್ಲಿ ಸಿನಿಮಾ ಮಾಡಬೇಕಾದ ಅನಿವಾರ್ಯತೆ ‘ಕ್ರಿಶ್ 4’ ಚಿತ್ರಕ್ಕೆ ಇದೆ. ಇದನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ