ಹೃತಿಕ್ ರೋಷನ್ ಮೆಚ್ಚಿನ ಸಹನಟ ದಕ್ಷಿಣದ ಈ ಸ್ಟಾರ್ ನಟ
Hritik Roshan: ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಸೇರಿದಂತೆ ಹಲವು ಅತ್ಯುತ್ತಮ ನಟ-ನಟಿಯರ ಜೊತೆಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಹೃತಿಕ್ ಅವರನ್ನು ನಿಮ್ಮ ಮೆಚ್ಚಿನ ನಟ ಯಾರೆಂದು ಕೇಳಲಾಯ್ತು, ಹೃತಿಕ್ ಕೊಟ್ಟ ಅಚ್ಚರಿಯ ಉತ್ತರ ಇಲ್ಲಿದೆ.

ಹೃತಿಕ್ ರೋಷನ್ (Hritik Roshan), ಬಾಲಿವುಡ್ನ ಸ್ಟಾರ್ ನಟ. ಲುಕ್ಸ್, ಫಿಟ್ನೆಸ್, ಡ್ಯಾನ್ಸ್, ಫೈಟ್, ನಟನೆ ಎಲ್ಲವೂ ಹೊಂದಿರುವ ಅಪರೂಪದ ನಟ ಹೃತಿಕ್ ರೋಷನ್. ಯಾವುದೇ ಪಾತ್ರವಾದರೂ ಅದಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳುವ ಹೃತಿಕ್ ರೋಷನ್, ಈ ವರೆಗೆ ಹಲವು ಸ್ಟಾರ್ ನಟ, ನಟಿಯರು, ನಿರ್ದೇಶಕರುಗಳೊಟ್ಟಿಗೆ ಕೆಲಸ ಮಾಡಿದ್ದಾರೆ. ವಿದೇಶಿ ನಟಿಯೊಟ್ಟಿಗೂ ಹೃತಿಕ್ ರೋಷನ್ ಕೆಲಸ ಮಾಡಿದ್ದಾರೆ. ಶಾರುಖ್ (Shah Rukh Khan), ಅಮಿತಾಬ್ ಸೇರಿದಂತೆ ಹಲವು ದಿಗ್ಗಜರೊಂದಿಗೆ ನಟಿಸಿದ್ದರೂ ಸಹ ಹೃತಿಕ್ ರೋಷನ್ಗೆ ದಕ್ಷಿಣದ ಸಹ ನಟ ಬಹಳ ಅಚ್ಚು-ಮೆಚ್ಚಂತೆ.
ಹೃತಿಕ್ ರೋಷನ್ ಇತ್ತೀಚೆಗಷ್ಟೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನಿರೂಪಕಿ ಹೃತಿಕ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಈ ವೇಳೆ, ‘ನಿಮ್ಮ ಮೆಚ್ಚಿನ ಸಹ ನಟ ಯಾರು? ನಿಮ್ಮೊಂದಿಗೆ ನಟಿಸಿರುವ ಇಷ್ಟೋಂದು ನಟ-ನಟಿಯರಲ್ಲಿ ನಿಮಗೆ ಇಷ್ಟವಾದವರು ಯಾರು?’ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ತುಸು ಯೋಚನೆ ಮಾಡಿದ ಹೃತಿಕ್ ರೋಷನ್, ‘ನನಗೆ ಜೂ ಎನ್ಟಿಆರ್ ಬಹಳ ಇಷ್ಟ, ಅವರೊಬ್ಬ ಅದ್ಭುತವಾದ ವ್ಯಕ್ತಿ’ ಎಂದರು.
‘ಜೂ ಎನ್ಟಿಆರ್ ಬಹಳ ಎನರ್ಜಿ ಇರುವ ಅತ್ಯದ್ಭುತವಾದ ನಟ. ಅವರೊಟ್ಟಿಗೆ ಕೆಲಸ ಮಾಡಿದ್ದು ನನಗೆ ಬಹಳ ಖುಷಿ ನೀಡಿತು. ನಾನೂ ಹಾಗೂ ಅವರು ಸೇರಿ ಅದ್ಭುತವಾದ ಕೆಲಸ ಮಾಡಿದ್ದೀವಿ ಎಂಬುದು ನನ್ನ ನಂಬಿಕೆ. ‘ವಾರ್ 2’ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಆ ಸಿನಿಮಾವನ್ನು ನಿಮಗೆ ತೋರಿಸಲು ಬಹಳ ಕಾತರವಾಗಿದ್ದೇವೆ. ಸಿನಿಮಾ ಆಗಸ್ಟ್ 14 ಕ್ಕೆ ತೆರೆಗೆ ಬರಲಿದೆ. ಈ ಹಿಂದೆ ಬಂದಿದ್ದ ‘ವಾರ್’ ಸಿನಿಮಾಕ್ಕಿಂತಲೂ ದೊಡ್ಡದಾಗಿ ಮೂಡಿ ಬಂದಿದೆ ಮತ್ತು ಅದ್ಭುತವಾಗಿ ಮೂಡಿ ಬಂದಿದೆ’ ಎಂದಿದ್ದಾರೆ ಹೃತಿಕ್ ರೋಷನ್.
ಇದನ್ನೂ ಓದಿ:ಶಾರುಖ್ ಖಾನ್-ಸುಕುಮಾರ್ ಸಿನಿಮಾ ಮಾಡೋ ಸುದ್ದಿ ಶುದ್ಧ ಸುಳ್ಳು; ಇಲ್ಲಿದೆ ಸಾಕ್ಷಿ
ಹೃತಿಕ್ ರೋಷನ್ ಹಾಗೂ ಜೂ ಎನ್ಟಿಆರ್ ಇದೇ ಮೊದಲ ಬಾರಿಗೆ ‘ವಾರ್ 2’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾ ಅನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಯಶ್ ಚೋಪ್ರಾ. ಹೃತಿಕ್ ರೋಷನ್-ಜೂ ಎನ್ಟಿಆರ್ ಅವರ ಈ ಸಿನಿಮಾ ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಇನ್ನಿತರೆ ಕೆಲ ಭಾಷೆಗಳಲ್ಲಿಯೂ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ