AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ರಣಬೀರ್​ ಬಿಟ್ಟು ರಣವೀರ್ ಜೊತೆ ಕಾಶ್ಮೀರದಲ್ಲಿ ಸುತ್ತಾಡಿದ ನಟಿ ಆಲಿಯಾ ಭಟ್  

ಆಲಿಯಾ ಭಟ್ ಅವರು ಕಳೆದ ವರ್ಷ ಏಪ್ರಿಲ್ 14ರಂದು ಮದುವೆ ಆದರು. ಎರಡು ತಿಂಗಳ ಬಳಿಕ ತಾವು ಪ್ರೆಗ್ನೆಂಟ್ ಎಂಬುದನ್ನು ಅವರು ಘೋಷಣೆ ಮಾಡಿದರು. ತಾವು ಒಪ್ಪಿಕೊಂಡ ಕೆಲ ಸಿನಿಮಾಗಳ ಕೆಲಸವನ್ನು ಪೂರ್ಣಗೊಳಿಸಿದರು.

Alia Bhatt: ರಣಬೀರ್​ ಬಿಟ್ಟು ರಣವೀರ್ ಜೊತೆ ಕಾಶ್ಮೀರದಲ್ಲಿ ಸುತ್ತಾಡಿದ ನಟಿ ಆಲಿಯಾ ಭಟ್  
ಆಲಿಯಾ ಭಟ್
Follow us
ರಾಜೇಶ್ ದುಗ್ಗುಮನೆ
|

Updated on:Mar 04, 2023 | 10:19 AM

ನಟಿ ಆಲಿಯಾ ಭಟ್ (Alia Bhatt) ಅವರು ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟಿದ್ದರು. ಈ ಮಧ್ಯೆ ಆಲಿಯಾ ಭಟ್ ಅವರು ಕಾಶ್ಮೀರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. ಆಲಿಯಾ ಭಟ್ ಅವರ ನಟನೆಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ (Rocky Aur Rani Ki Prem Kahani) ಸಿನಿಮಾದ ಹಾಡಿನ ಶೂಟಿಂಗ್ ಬಾಕಿ ಇತ್ತು. ಇದನ್ನು ಈಗ ಪೂರ್ಣಗೊಳಿಸಲಾಗುತ್ತಿದೆ. ಆಲಿಯಾ ಅವರು ಕಾಶ್ಮೀರದಲ್ಲಿ ಸಮಯ ಕಳೆಯುತ್ತಿರುವ ಫೋಟೋ ಹಾಗೂ ವೀಡಿಯೋ ವೈರಲ್ ಆಗಿದೆ. ಈ ಹಾಡಿನಲ್ಲಿ ಆಲಿಯಾ ಭಟ್ ಅವರು ಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಆಲಿಯಾ ಭಟ್ ಅವರು ಕಳೆದ ವರ್ಷ ಏಪ್ರಿಲ್ 14ರಂದು ಮದುವೆ ಆದರು. ಎರಡು ತಿಂಗಳ ಬಳಿಕ ತಾವು ಪ್ರೆಗ್ನೆಂಟ್ ಎಂಬುದನ್ನು ಅವರು ಘೋಷಣೆ ಮಾಡಿದರು. ತಾವು ಒಪ್ಪಿಕೊಂಡ ಕೆಲ ಸಿನಿಮಾಗಳ ಕೆಲಸವನ್ನು ಪೂರ್ಣಗೊಳಿಸಿದರು. ಆಗ ಸಮಯ ಸಿಕ್ಕಿದ್ದರೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಬಾಕಿ ಇರುವ ಸಾಂಗ್​ನ ಶೂಟಿಂಗ್ ಕೂಡ ಪೂರ್ಣಗೊಳ್ಳುತ್ತಿತ್ತು. ಆದರೆ, ಆಲಿಯಾ ಭಟ್ ಪ್ರೆಗ್ನೆಂಟ್ ಆದ ಕಾರಣ ಕಾಶ್ಮೀರದಲ್ಲಿ ಶೂಟ್ ಮಾಡೋದು ಬೇಡ ಎಂಬ ನಿರ್ಧಾರಕ್ಕೆ ಬಂದರಂತೆ ನಿರ್ಮಾಪಕರ ಕರಣ್ ಜೋಹರ್. ಹೀಗಾಗಿ, ಈಗ ಬಾಕಿ ಇರುವ ಸಾಂಗ್​​ನ ಶೂಟಿಂಗ್ ನಡೆಯುತ್ತಿದೆ. ರಣವೀರ್ ಸಿಂಗ್ ಕೂಡ ಇಲ್ಲಿಗೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಗುಲ್​​ಮರ್ಗ್​​ನಲ್ಲಿ ಕೆಂಪು ಬಣ್ಣದ ಬಟ್ಟೆ ಧರಿಸಿ ಆಲಿಯಾ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಲಿಯಾ ಭಟ್ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ಅವರು ಕಾಶ್ಮೀರದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ತಾವು ಕಾಶ್ಮೀರದಲ್ಲಿ ಶೂಟ್ ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಿದ್ದರು.

ಇದನ್ನೂ ಓದಿ: Alia Bhatt: ಆಲಿಯಾ ಭಟ್ ಖಾಸಗಿತನಕ್ಕೆ ಧಕ್ಕೆ; ಪೊಲೀಸರ ಮೊರೆ ಹೋದ ನಟಿ

‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಹಲವು ಕಾರಣದಿಂದ ವಿಶೇಷ ಎನಿಸಿಕೊಂಡಿದೆ. ಕರಣ್ ಜೋಹರ್ ಅವರು ನಿರ್ದೇಶನಕ್ಕೆ ಕಂಬ್ಯಾಕ್ ಮಾಡುತ್ತಿರುವ ಸಿನಿಮಾ. ‘ಬ್ರಹ್ಮಾಸ್ತ್ರ’ ಯಶಸ್ಸಿನ ನಂತರ ಆಲಿಯಾ ಭಟ್ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹೀಗಾಗಿ, ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಇನ್ನು, ರಣವೀರ್ ಸಿಂಗ್ ವೃತ್ತಿ ಜೀವನಕ್ಕೆ ಈ ಚಿತ್ರದಿಂದ ಒಂದು ದೊಡ್ಡ ಗೆಲುವು ಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Sat, 4 March 23

ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ