ಪಾಪರಾಜಿಗಳು (Paparazzi) ಯಾವಾಗಲೂ ಸೆಲೆಬ್ರಿಟಿಗಳ ಹಿಂದೇ ಇರುತ್ತಾರೆ. ಇದನ್ನು ಸಹಿಸಿಕೊಳ್ಳೋದು ಅನೇಕ ಬಾರಿ ಅವರಿಗೆ ಕಷ್ಟ ಆಗುತ್ತದೆ. ಆದರೆ, ಬೇರೆ ದಾರಿ ಇಲ್ಲ. ಆದರೆ, ಅವರು ಮಿತಿಮೀರಿ ನಡೆದುಕೊಂಡರೆ ಅದನ್ನು ಸಹಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಈಗ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ ಅವರು ಪಾಪರಾಜಿಗಳ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ. ಆಲಿಯಾ ಭಟ್ ಅವರು ಮನೆಯಲ್ಲಿ ನಿಂತಿದ್ದಾಗ ಕೆಲ ಪಾಪರಾಜಿಗಳು ಫೋಟೋ ಕ್ಲಿಕ್ಕಿಸಿದ್ದರು. ಇದು ಸಖತ್ ವೈರಲ್ ಆಗಿತ್ತು. ಇದರ ವಿರುದ್ಧ ಈ ದಂಪತಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗಿತ್ತು. ಆಲಿಯಾ ಭಟ್ ಅವರು ಮನೆಯ ಬಾಲ್ಕನಿಯಲ್ಲಿ ನಿಂತಿದ್ದಾಗ ಪಕ್ಕದ ಮನೆಯ ಟೆರೇಸ್ ಏರಿದ್ದ ಕೆಲ ಪಾಪರಾಜಿಗಳು ಆಲಿಯಾ ಭಟ್ ಫೋಟೋ ಕ್ಲಿಕ್ ಮಾಡಿ ವೈರಲ್ ಮಾಡಿದ್ದರು. ಇದನ್ನು ಶೇರ್ ಮಾಡಿಕೊಂಡಿದ್ದ ಆಲಿಯಾ ಖಾಸಗಿತನಕ್ಕೆ ಧಕ್ಕೆ ಆಗಿದೆ ಎಂದು ಹೇಳಿದ್ದರು. ನಟಿಯನ್ನು ಅನೇಕ ಸೆಲೆಬ್ರಿಟಿಗಳು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ವಿಚಾರದ ಬಗ್ಗೆ ರಣಬೀರ್ ಕಪೂರ್ ಮಾತನಾಡಿದ್ದಾರೆ.
ಮಿಸ್ ಮಾಲಿನಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಣಬೀರ್ ಕಪೂರ್, ‘ಅವರು ಖಾಸಗಿತನವನ್ನು ಆಕ್ರಮಿಸಿಕೊಂಡಿದ್ದಾರೆ. ನನ್ನ ಮನೆ ಒಳಗೆ ಏನೂ ಬೇಕಾದರೂ ನಡೆಯಬಹುದು. ಅದನ್ನು ನೀವು ಚಿತ್ರೀಕರಿಸಬಾರದು. ಏಕೆಂದರೆ ಅದು ನನ್ನ ಮನೆ. ನಾವು ಇದನ್ನು ಕಾನೂನಾತ್ಮಕವಾಗಿ ಡೀಲ್ ಮಾಡುತ್ತಿದ್ದೇವೆ. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಅದು ತುಂಬಾ ಕೊಳಕು ಎಂದಷ್ಟೇ ಹೇಳಬಹುದು’ ಎಂದಿದ್ದಾರೆ.
ಇದನ್ನೂ ಓದಿ: ‘ಪ್ರೀತಿಯಲ್ಲಿ ಕೆಲವೊಮ್ಮೆ ಸುಳ್ಳು ಹೇಳಿದರೆ ಒಳ್ಳೆಯದು’; ಪ್ರೀತಿ-ಬ್ರೇಕಪ್ ಬಗ್ಗೆ ಮಾತನಾಡಿದ ರಣಬೀರ್ ಕಪೂರ್
ಪಾಪರಾಜಿಗಳಿಂದ ಅನೇಕರಿಗೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಹೀಗಾಗಿ, ರಣಬೀರ್ಗೆ ಅವರ ಬಗ್ಗೆ ಗೌರವ ಇದೆ. ‘ನಾನು ಪಾಪರಾಜಿಗಳನ್ನು ಗೌರವಿಸುತ್ತೇನೆ. ಪಾಪರಾಜಿಗಳು ಚಿತ್ರರಂಗದ ಒಂದು ಭಾಗ ಅನ್ನೋದು ನನ್ನ ಭಾವನೆ. ಅವರು ನಮ್ಮೊಂದಿಗೆ ಕೆಲಸ ಮಾಡುತ್ತಾರೆ, ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ. ಆದರೆ, ಕೆಲವರು ಈ ರೀತಿ ಮಾಡಿದಾಗ ಮುಜುಗರ ಆಗುತ್ತದೆ’ ಎಂದು ರಣಬೀರ್ ಹೇಳಿದ್ದಾರೆ.
ಇದನ್ನೂ ಓದಿ: Ranbir Kapoor: ಸೌರವ್ ಗಂಗೂಲಿ, ಕಿಶೋರ್ ಕುಮಾರ್ ಬಯೋಪಿಕ್ ಬಗ್ಗೆ ಬಾಯ್ಬಿಟ್ಟ ನಟ ರಣಬೀರ್ ಕಪೂರ್
ರಣಬೀರ್ ಕಪೂರ್ ನಟನೆಯ ‘ತು ಜೂಟಿ ಮೈ ಮಕ್ಕಾರ್’ ಸಿನಿಮಾ ಮಾರ್ಚ್ 8ರಂದು ರಿಲೀಸ್ ಆಯಿತು. ಈ ಚಿತ್ರ ಮೊದಲ ದಿನ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್ ಸಿನಿಮಾಗಳ ಕಲೆಕ್ಷನ್ಗೆ ಹೋಲಿಕೆ ಮಾಡಿದರೆ ಈ ಚಿತ್ರ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ ಎನ್ನಬಹುದು. ಆದರೆ, ಕಳೆದ ವರ್ಷ ರಿಲೀಸ್ ಆದ ರಣಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರದ ಗಳಿಕೆಗೆ ಹೋಲಿಸಿದರೆ ಈ ಚಿತ್ರದ ಗಳಿಕೆ ಡಲ್ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ