ಬಾಲಿವುಡ್ನ ತಾರಾ ಜೋಡಿಗಳಲ್ಲಿ ಒಂದಾದ ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor) ವಿವಾಹಕ್ಕೆ ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದಾರೆ. ಆದರೆ ವಿವಾಹದ ದಿನಾಂಕದ ಬಗ್ಗೆ ಅಧಿಕೃತವಾಗಿ ತಾರಾ ಜೋಡಿ ಇನ್ನೂ ಬಾಯ್ಬಿಟ್ಟಿಲ್ಲ. ಹೀಗಾಗಿ ಫ್ಯಾನ್ಸ್ ವಲಯದಲ್ಲಿ ಈ ಬಗ್ಗೆ ಕುತೂಹಲ ಹೆಚ್ಚಿದೆ. ಜತೆಗೆ ಆಲಿಯಾ- ರಣಬೀರ್ ವಿವಾಹದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರಬರುತ್ತಿದೆ. ಈ ಹಿಂದೆ ಏಪ್ರಿಲ್ 17ರಂದು ವಿವಾಹ ಎಂದು ಹೇಳಲಾಗುತ್ತಿತ್ತು. ಏಪ್ರಿಲ್ 15 ಎಂದೂ ಹೇಳಲಾಗುತ್ತಿತ್ತು. ಆದರೆ ಆಲಿಯಾ ಅವರ ಸಂಬಂಧಿಕರು ಈ ಬಗ್ಗೆ ಮಾತನಾಡಿದ್ದು, ವಿವಾಹದ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. ವಿವಾಹದ ಬಗ್ಗೆ ನಟಿಯ ಸಂಬಂಧಿ ರಾಬಿನ್ ಭಟ್ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ್ದಾರೆ. ಆಲಿಯಾ ಹಾಗೂ ರಣಬೀರ್ ಏಪ್ರಿಲ್ 14ರಂದು ವಿವಾಹವಾಗಲಿದ್ದಾರೆ ಎನ್ನುವುದನ್ನು ರಾಬಿನ್ ಭಟ್ ಬಹಿರಂಗಗೊಳಿಸಿದ್ದಾರೆ.
ಏಪ್ರಿಲ್ 14ರಂದು ಆಲಿಯಾ ರಣಬೀರ್ ಮದುವೆ ನಡೆಯಲಿದ್ದರೆ, ಅದರ ಹಿಂದಿನ ದಿನ ಅಂದರೆ ಏಪ್ರಿಲ್ 13ರಂದು ಮೆಹಂದಿ ಸಮಾರಂಭ ನಡೆಯಲಿದೆ. ರಾಬಿನ್ ಭಟ್ ವಿವಾಹ ಎಲ್ಲಿ ನಡೆಯಲಿದೆ ಎನ್ನುವುದನ್ನೂ ಬಹಿರಂಗಗೊಳಿಸಿದ್ದು, ಎಲ್ಲಾ ವದಂತಿಗಳಿಗೆ ತೆರ ಎಳೆದಿದ್ದಾರೆ. ಈ ಹಿಂದೆ ವರದಿಯಾಗಿದ್ದಂತೆ ರಣಬೀರ್ ಕಪೂರ್ ಬಾಂದ್ರಾದಲ್ಲಿನ ನಿವಾಸ ‘ವಾಸ್ತು’ವಿನಲ್ಲಿ ಸಮಾರಂಭ ನಡೆಯಲಿದೆ.
ಈ ಹಿಂದೆ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಪುತ್ರನ ವಿವಾಹದ ಬಗ್ಗೆ ಓಡಾಡುತ್ತಿರುವ ಗಾಸಿಪ್ಗಳ ಬಗ್ಗೆ ಪ್ರತಿಕ್ರಿಯಿಸಿದ್ದರು. ‘‘ಆ ಎಲ್ಲಾ ಸುದ್ದಿಗಳು ಕಳೆದ ಎರಡು ವರ್ಷಗಳಿಂದ ಓಡಾಡುತ್ತಿವೆ. ನಾವು ರಣಬೀರ್ ವಿವಾಹದ ಬಗೆಗಿನ ಸುದ್ದಿ ಓದಿ ಎಂಜಾಯ್ ಮಾಡುತ್ತೇವೆ’’ ಎಂದು ನಗುತ್ತಾ ಹೇಳಿದ್ದರು. ‘‘ಕೆಲವರು ಏ.17 ಎನ್ನುತ್ತಾರೆ, ಕೆಲವರು ಏಪ್ರಿಲ್ 15 ಎನ್ನುತ್ತಾರೆ. ಮೊದಲಿಗೆ ವಿವಾಹ ರಾಣಾಥಂಬೋರ್ನಲ್ಲಿ ಎನ್ನುತ್ತಿದ್ದರು. ಈಗ ಬಾಂದ್ರಾದ ನಿವಾಸದಲ್ಲಿ ಎನ್ನುತ್ತಿದ್ದಾರೆ. ನೋಡೋಣ, ಎಲ್ಲವೂ ಎಲ್ಲಿ ನಡೆಯುತ್ತದೆಂದು’’ ಎಂದಿದ್ದಾರೆ ನೀತು ಕಪೂರ್.
ಆಲಿಯಾ ಹಾಗೂ ರಣಬೀರ್ ವಿವಾಹದ ತಯಾರಿ ಜೋರಾಗಿಯೇ ನಡೆಯುತ್ತಿದೆ. ನೀತು ಕಪೂರ್ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಪಂಜಾಬಿ ಶೈಲಿಯ ದಿರಿಸನ್ನು ಧರಿಸಲಿದ್ದಾರೆ. ಆಲಿಯಾ ಕೂಡ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಸವ್ಯಸಾಚಿ ಲೆಹೆಂಗಾ ಧರಿಸಲಿದ್ದಾರೆ ಎನ್ನಲಾಗಿದೆ.
ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಹಾಗೂ ರಣಬೀರ್ ಜತೆಯಾಗಿ ನಟಿಸಿರುವ ಮೊದಲ ಚಿತ್ರ ‘ಬ್ರಹ್ಮಾಸ್ತ್ರ’ದ ಚಿತ್ರೀಕರಣ ಮುಕ್ತಾಯವಾಗಿದೆ. ಇದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶಿಸಿದ್ದಾರೆ. ಪ್ಯಾನ್ ಇಂಡಿಯಾ ಮಾದರಿಯ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ್ ಅಕ್ಕಿನೇನಿ, ಮೌನಿ ರಾಯ್ ಮೊದಲಾದವರು ಬಣ್ಣಹಚ್ಚಿದ್ದಾರೆ.
ಇದನ್ನೂ ಓದಿ: ಸಖತ್ ಬೋಲ್ಡ್ ಲುಕ್ನಲ್ಲಿ ಮಿಂಚಿದ ಆಲಿಯಾ
‘ಓಲ್ಡ್ ಮಾಂಕ್’ ಗೆದ್ದ ಬಳಿಕ ಶ್ರೀನಿ ಹೊಸ ಚಿತ್ರ ಅನೌನ್ಸ್; ಈ ಬಾರಿ ಶಿವಣ್ಣ, ಸಂದೇಶ್ ನಾಗರಾಜ್ ಜೊತೆ ಸಿನಿಮಾ