AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ 60 ಲಕ್ಷ ರೂ. ಖರ್ಚು ಮಾಡಿ ಮನೆ ಮುಂದೆ ಅಮಿತಾಭ್ ಪ್ರತಿಮೆ ನಿರ್ಮಿಸಿದ ಅಭಿಮಾನಿ

ಅಮಿತಾಭ್ ಬಚ್ಚನ್ ಅವರ ಅಭಿಮಾನಿ ಗೋಪಿ ಅವರು ಹಲವು ವರ್ಷಗಳ ಹಿಂದೆ ಅಮೆರಿಕದ ನ್ಯೂ ಜೆರ್ಸಿಗೆ ತೆರಳಿ ಅಲ್ಲಿಯೇ ವಾಸವಾಗಿದ್ದಾರೆ. ಅಲ್ಲಿ ಹೊಸ ಮನೆ ಕಟ್ಟಿದ್ದಾರೆ. ಈ ಮನೆಯ ಎದುರು ಅವರು ಅಮಿತಾಭ್ ಬಚ್ಚನ್ ಅವರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.

ಅಮೆರಿಕದಲ್ಲಿ 60 ಲಕ್ಷ ರೂ. ಖರ್ಚು ಮಾಡಿ ಮನೆ ಮುಂದೆ ಅಮಿತಾಭ್ ಪ್ರತಿಮೆ ನಿರ್ಮಿಸಿದ ಅಭಿಮಾನಿ
ಅಮಿತಾಭ್ ಪ್ರತಿಮೆ
TV9 Web
| Edited By: |

Updated on:Aug 29, 2022 | 4:19 PM

Share

ಅಮಿತಾಭ್ ಬಚ್ಚನ್ (Amitabh Bachchan) ಅವರು ಚಿತ್ರರಂಗದಲ್ಲಿ ಹಲವು ದಶಕಗಳನ್ನು ಕಳೆದಿದ್ದಾರೆ. ಅನೇಕ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಈ ಸಂದರ್ಭದಲ್ಲಿ ಫ್ಯಾನ್ಸ್ ಸದಾ ಅವರ ಜತೆಗೆ ಇದ್ದರು. ಅವರ ಮೇಲಿರುವ ಪ್ರೀತಿಯನ್ನು ಫ್ಯಾನ್ಸ್ ನಾನಾ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಈಗ ಅಮೆರಿಕದಲ್ಲಿ (America) ವಾಸವಾಗಿರುವ ಭಾರತ ಮೂಲದ ವ್ಯಕ್ತಿ ಅಮಿತಾಭ್ ಮೇಲಿರುವ ಪ್ರೀತಿಯನ್ನು ಭಿನ್ನ ರೀತಿಯಲ್ಲಿ ತೋರಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಅಭಿಮಾನಿ ಗೋಪಿ ಅವರು ಹಲವು ವರ್ಷಗಳ ಹಿಂದೆ ಅಮೆರಿಕದ ನ್ಯೂ ಜೆರ್ಸಿಗೆ ತೆರಳಿ ಅಲ್ಲಿಯೇ ವಾಸವಾಗಿದ್ದಾರೆ. ಅಲ್ಲಿ ಹೊಸ ಮನೆ ಕಟ್ಟಿದ್ದಾರೆ. ಈ ಮನೆಯ ಎದುರು ಅವರು ಅಮಿತಾಭ್ ಬಚ್ಚನ್ ಅವರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಈ ಫೋಟೋಗಳನ್ನು ಗೋಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Image
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
Image
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
Image
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

‘ಶನಿವಾರ, ಆಗಸ್ಟ್ 27ರಂದು ಅಮಿತಾಭ್ ಬಚ್ಚನ್ ಅವರ ಪ್ರತಿಮೆಯನ್ನು ಮನೆಯ ಎದುರು ನಿರ್ಮಾಣ ಮಾಡಿದ್ದೇವೆ. ಅಮಿತಾಭ್ ಪ್ರತಿಮೆ ಅನಾವರಣಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು’ ಎಂದು ಗೋಪಿ ಬರೆದುಕೊಂಡಿದ್ದಾರೆ.

‘ಅಮಿತಾಭ್ ಅವರು ನನಗೆ ಮತ್ತು ನನ್ನ ಪತ್ನಿಗೆ ದೇವರಿಗಿಂತ ಹೆಚ್ಚು. ಅವರ ಎಲ್ಲ ವಿಚಾರಗಳು ನನಗೆ ಸ್ಫೂರ್ತಿದಾಯಕ. ಅವರು ತುಂಬಾ ಸರಳ ವ್ಯಕ್ತಿ. ಅವರು ಇತರ ಸ್ಟಾರ್​ಗಳ ರೀತಿ ಅಲ್ಲ. ಈ ಕಾರಣಕ್ಕೆ ನಮ್ಮ ಮನೆ ಎದುರು ಅವರ ಪ್ರತಿಮೆ ನಿರ್ಮಿಸಲು ನಿರ್ಧರಿಸಿದೆ’ ಎಂದು ಪಿಟಿಐಗೆ ಗೋಪಿ ಮಾಹಿತಿ ನೀಡಿದ್ದಾರೆ.

1990ರ ಸಮಯದಲ್ಲಿ ಗೋಪಿ ಅಮೆರಿಕಕ್ಕೆ ತೆರಳಿದರು ಅವರು ಅಮಿತಾಭ್ ಹೆಸರಲ್ಲಿ ಒಂದು ವೆಬ್​ಸೈಟ್ ಕೂಡ ನಡೆಸುತ್ತಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಈ ಪ್ರತಿಮೆ ನಿರ್ಮಾಣ ಮಾಡುವ ವಿಚಾರ ಗೊತ್ತಿದೆಯಂತೆ. ಇದಕ್ಕೆ ತಾವು ಅರ್ಹರಲ್ಲ ಎಂಬುದನ್ನು ಅಮಿತಾಭ್ ಅವರು ಗೋಪಿಗೆ ತಿಳಿಸಿದ್ದಾರೆ. ಈ ಬಗ್ಗೆಯೂ ಗೋಪಿ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 2ನೇ ಬಾರಿ ಅಮಿತಾಭ್​ ಬಚ್ಚನ್​ಗೆ ಕೊರೊನಾ ಪಾಸಿಟಿವ್​; ಅಭಿಮಾನಿಗಳಲ್ಲಿ ಮೂಡಿತು ಆತಂಕ

ಅಮಿತಾಭ್ ಬಚ್ಚನ್ ಅವರು ‘ಕೌನ್ ಬನೇಗಾ ಕರೋಡ್​​ಪತಿ’ ಶೋ ನಡೆಸಿಕೊಡುತ್ತಿದ್ದಾರೆ. ಈ ಶೋ ಹಲವು ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಅಮೆರಿಕದಲ್ಲಿ ಅನಾವರಣಗೊಂಡ ಪ್ರತಿಮೆ ಕೂಡ ಕೆಬಿಸಿ ಪೋಸ್​ ರೀತಿಯಲ್ಲಿ ಇದೆ. ಇದಕ್ಕಾಗಿ ಗೋಪಿ ಅವರು 60 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

Published On - 4:01 pm, Mon, 29 August 22