‘ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಸಾಧ್ಯವೇ ಇಲ್ಲ’; ವಿವರಿಸಿದ ರಾಜ್​ಕುಮಾರ್ ಹಿರಾನಿ

|

Updated on: Jan 03, 2024 | 11:02 AM

ಕಲೆಕ್ಷನ್ ವಿಚಾರದಲ್ಲಿ ‘ಸಲಾರ್’ ಮೇಲುಗೈ ಸಾಧಿಸಿದೆ. ‘ಎಲ್ಲರೂ ಎಲ್ಲಾ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ’ ಅನ್ನೋದು ರಾಜ್​ಕುಮಾರ್ ಹಿರಾನಿ ಅಭಿಪ್ರಾಯ.

‘ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿಸಲು ಸಾಧ್ಯವೇ ಇಲ್ಲ’; ವಿವರಿಸಿದ ರಾಜ್​ಕುಮಾರ್ ಹಿರಾನಿ
ಶಾರುಖ್​-ಪ್ರಭಾಸ್
Follow us on

ಹಬ್ಬ ಅಥವಾ ವಿಶೇಷ ಸಂದರ್ಭದಲ್ಲಿ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್​ಗಳು ಏರ್ಪಡುತ್ತವೆ. ದೊಡ್ಡ ದೊಡ್ಡ ಸಿನಿಮಾಗಳು ಮುಖಾಮುಖಿ ಆಗುತ್ತವೆ. ಈ ರೀತಿ ಕ್ಲ್ಯಾಶ್​ಗಳು ಮೊದಲೂ ಆಗಿದ್ದವು, ಮುಂದೆಯೂ ಆಗುತ್ತವೆ. ಇದನ್ನು ತಪ್ಪಿಸಲು ಸಾಧ್ಯವೇ ಇಲ್ಲ ಅನ್ನೋದು ರಾಜ್​ಕುಮಾರ್ ಹಿರಾನಿ (Rajkumar Hirani) ಅಭಿಪ್ರಾಯ. ಇತ್ತೀಚೆಗೆ ಬಾಕ್ಸ್ ಆಫೀಸ್​ನಲ್ಲಿ ‘ಡಂಕಿ’ ಹಾಗೂ ‘ಸಲಾರ್’ ಒಟ್ಟೊಟ್ಟಿಗೆ ರಿಲೀಸ್ ಆಗಿದ್ದವು. ಈ ಬಗ್ಗೆ ರಾಜ್​ಕುಮಾರ್ ಹಿರಾನಿ ಮಾತನಾಡಿದ್ದಾರೆ.

ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ರಿಲೀಸ್ ಆಗಿ ಮೊದಲ ದಿನ 30 ಕೋಟಿ ರೂಪಾಯಿ ಗಳಿಸಿತು. ‘ಸಲಾರ್’ ಸಿನಿಮಾ ಮೊದಲ ದಿನ 95 ಕೋಟಿ ರೂಪಾಯಿ ಬಾಚಿಕೊಂಡಿತು. ಕಲೆಕ್ಷನ್ ವಿಚಾರದಲ್ಲಿ ‘ಸಲಾರ್’ ಮೇಲುಗೈ ಸಾಧಿಸಿದೆ. ‘ಎಲ್ಲರೂ ಎಲ್ಲಾ ಸಿನಿಮಾಗಳನ್ನು ನೋಡಲು ಸಾಧ್ಯವಿಲ್ಲ’ ಅನ್ನೋದು ರಾಜ್​ಕುಮಾರ್ ಹಿರಾನಿ ಅಭಿಪ್ರಾಯ.

‘ನಿರ್ಮಾಪಕರ ದೃಷ್ಟಿಯಿಂದ ಹೇಳೋದಾದರೆ ದೇಶದಲ್ಲಿ ಕಡಿಮೆ ಥಿಯೇಟರ್​ಗಳು ಇವೆ. ಒಂದಾದ ಮೇಲೆ ಒಂದರಂತೆ ಸಿನಿಮಾ ನೋಡುವಷ್ಟು ದುಡ್ಡು ಜನರ ಬಳಿ ಇಲ್ಲ. ಹೀಗಾಗಿ, ವಾರಕ್ಕೆ ಒಂದು ಅಥವಾ ತಿಂಗಳಿಗೆ ಒಂದು ಸಿನಿಮಾ ಮಾತ್ರ ನೋಡೋದು ಎನ್ನುವ ನಿರ್ಧಾರಕ್ಕೆ ಜನರು ಬರುತ್ತಾರೆ. ಒಂದು ಹಂತದಲ್ಲಿ ಇದು ಎರಡೂ ಸಿನಿಮಾಗಳ ಮೇಲೆ ಪ್ರಭಾವ ಬೀರುತ್ತದೆ’ ಎಂದಿದ್ದಾರೆ ರಾಜ್​ಕುಮಾರ್ ಹಿರಾನಿ.

‘ಕ್ಲ್ಯಾಶ್ ವೇಳೆ ಬಿಸ್ನೆಸ್​ ಮೇಲೆ ಹೊಡೆತ ಉಂಟಾಗಿಯೇ ಉಂಟಾಗುತ್ತದೆ. ಆದರೆ, ಬೇರೆ ಆಯ್ಕೆ ಇಲ್ಲ. 52 ವಾರಗಳಲ್ಲಿ 200 ಸಿನಿಮಾ ಮಾಡಲಾಗುತ್ತದೆ. ಹೀಗಿದ್ದಾಗ ಮುಖಾಮುಖಿ ಆಗಲೇಬೇಕು. ಕೆಲವೊಮ್ಮೆ ದೊಡ್ಡ ಸಿನಿಮಾಗಳು, ಇನ್ನೂ ಕೆಲವೊಮ್ಮೆ ಸಣ್ಣ ಸಿನಿಮಾಗಳು ಕ್ಲ್ಯಾಶ್ ಆಗುತ್ತವೆ. ಇದು ಆಗುತ್ತಲೇ ಇರುತ್ತದೆ. ಇದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವೇ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಡಂಕಿ ಕಲೆಕ್ಷನ್ ಮಾಡಲ್ಲ ಅನ್ನೋದು ಶಾರುಖ್​ಗೂ ಗೊತ್ತಿತ್ತು’; ರಾಜ್​ಕುಮಾರ್ ಹಿರಾನಿ

ಇತ್ತೀಚೆಗೆ ‘ಡಂಕಿ’ ಸಿನಿಮಾ ಸಾಧಾರಣ ಗಳಿಕೆ ಮಾಡಿದ ಬಗ್ಗೆ ಅವರು ಮಾತನಾಡಿದ್ದರು. ಶಾರುಖ್ ಖಾನ್ ಅವರಿಗೆ ‘ಡಂಕಿ’ ಸಿನಿಮಾ ಸಾಧಾರಣ ಗಳಿಕೆ ಮಾಡಲಿದೆ ಎನ್ನುವ ವಿಚಾರ ಮೊದಲೇ ತಿಳಿದಿತ್ತಂತೆ. ಶಾರುಖ್ ಕಥೆಯನ್ನು ಇಷ್ಟಪಟ್ಟು ಸಿನಿಮಾ ಮಾಡಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ