ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿ ಟ್ರೋಲ್ ಆದ ಅಮಿತಾಭ್ ಬಚ್ಚನ್

‘ಆಪರೇಷನ್ ಸಿಂದೂರ್’ ಬಗ್ಗೆ ಜಗತ್ತಿನಾದ್ಯಂತ ಸುದ್ದಿ ಆಗುತ್ತಿದ್ದರೂ ಕೂಡ ಕೆಲವು ಸೆಲೆಬ್ರಿಟಿಗಳು ಮೌನವಾಗಿದ್ದರು. ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಕೂಡ ಈ ಬಗ್ಗೆ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಆದರೆ ಈಗ ಕದನ ವಿರಾಮದ ಸಂದರ್ಭದಲ್ಲಿ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರನ್ನು ಟ್ರೋಲ್ ಮಾಡಲಾಗಿದೆ.

ಆಪರೇಷನ್ ಸಿಂದೂರ್ ಬಗ್ಗೆ ತಡವಾಗಿ ಪ್ರತಿಕ್ರಿಯಿಸಿ ಟ್ರೋಲ್ ಆದ ಅಮಿತಾಭ್ ಬಚ್ಚನ್
Amitabh Bachchan

Updated on: May 11, 2025 | 3:10 PM

ಉಗ್ರರು ನಡೆಸಿದ ಪಹಲ್ಗಾಮ್ ದಾಳಿಯಿಂದ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂದೂರ್’ (Operation Sindoor) ಹೆಸರಿನಲ್ಲಿ ಉಗ್ರರನ್ನು ಮಟ್ಟಹಾಕಲು ಮುಂದಾಯಿತು. ಇಷ್ಟೆಲ್ಲ ಆದರೂ ಕೂಡ ಕೆಲವು ಸೆಲೆಬ್ರಿಟಿಗಳು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲೇ ಇಲ್ಲ. ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಮುಂತಾದವರು ಮೌನವಾಗಿದ್ದರು, ಈಗ ನಿಧಾನವಾಗಿ ಒಬ್ಬೊಬ್ಬರಾಗಿಯೇ ತಮ್ಮ ಅನಿಸಿಕೆ ತಿಳಿಸುತ್ತಿದ್ದಾರೆ. ಆದರೆ ತುಂಬ ತಡವಾಗಿ ಮೌನ ಮುರಿದಿದ್ದಕ್ಕಾಗಿ ಅಮಿತಾಭ್ ಬಚ್ಚನ್ (Amitabh Bachchan) ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಅಮಿತಾಭ್ ಬಚ್ಚನ್ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬ ಆ್ಯಕ್ಟೀವ್ ಆಗಿದ್ದಾರೆ. ಟ್ವಿಟರ್​ನಲಲಿ ಅವರನ್ನು 49 ಮಿಲಿಯನ್ (4.9 ಕೋಟಿ) ಜನರು ಫಾಲೋ ಮಾಡುತ್ತಿದ್ದಾರೆ. ಸಮಾಜದಲ್ಲಿ ನಡೆಯುವ ಅನೇಕ ಘಟನೆಗಳ ಬಗ್ಗೆ ಅಮಿತಾಭ್ ಬಚ್ಚನ್ ಪೋಸ್ಟ್ ಮಾಡುತ್ತಾರೆ. ಆದರೆ ಆಪರೇಷನ್ ಸಿಂದೂರ್ ಬಗ್ಗೆ ಅವರು ಮೌನ ವಹಿಸಿದ್ದು ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಇದನ್ನೂ ಓದಿ
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ
ಪಾಕ್ ಸೇನೆಗೆ ನಡುಕ ಶುರು: ಉಪಗ್ರಹ ಚಿತ್ರಗಳಿಂದ ಬಹಿರಂಗವಾಯ್ತು ರಹಸ್ಯ
ಮೆಹಂದಿ ಮಾಸುವ ಮುನ್ನವೇ ನವವಿವಾಹಿತೆಯ ಕುಂಕುಮ ಅಳಿಸಿದ ಉಗ್ರರು
ಪಹಲ್ಗಾಮ್ ದಾಳಿ: ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭ ಆದಾಗಿನಿಂದ ಅಮಿತಾಭ್ ಬಚ್ಚನ್ ಅವರು ಖಾಲಿ ಟ್ವೀಟ್ ಮಾಡುತ್ತಿದ್ದರು. ಕೇವಲ ನಂಬರ್​ ಪೋಸ್ಟ್ ಮಾಡುತ್ತಿದ್ದರು. ಸತತವಾಗಿ ಇದೇ ರೀತಿ ಮಾಡಿದ ಬಳಿಕ ಕಡೆಗೂ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ತಂದೆ ಹರಿವಂಶ್ ರಾಯ್ ಬಚ್ಚನ್ ಬರೆದ ಕವನದ ಸಾಲಗಳನ್ನು ಅಮಿತಾಭ್ ಬಚ್ಚನ್ ಅವರು ಹಂಚಿಕೊಂಡಿದ್ದಾರೆ.

‘ನೀನು ನಿಲ್ಲುವುದಿಲ್ಲ. ನೀನು ಹಿಂದಿರುಗಿ ನೋಡುವುದಿಲ್ಲ. ನೀನು ತಲೆ ಬಾಗುವುದಿಲ್ಲ. ಪ್ರತಿಜ್ಞೆ ಮಾಡು, ಅಗ್ನಿಪತ್’ ಎಂಬ ಸಾಲು ಈ ಕವನದಲ್ಲಿದೆ. ಬಹಳ ತಡವಾಗಿ ಪೋಸ್ಟ್ ಮಾಡಿದ್ದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಈಗ ಎಲ್ಲ ಮುಗಿದುಹೋಗಿದೆ. ಈಗ ಏನು ಪ್ರತಿಜ್ಞೆ ಮಾಡೋದು’ ಎಂದು ಜನರು ಕಮೆಂಟ್ ಮೂಲಕ ತಿವಿದಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ಸಲ್ಮಾನ್ ಖಾನ್ ಮೌನ; ಕದನ ವಿರಾಮಕ್ಕೆ ಖುಷಿ: ಜಾಡಿಸಿದ ನೆಟ್ಟಿಗರು

ನಟ ಸಲ್ಮಾನ್ ಖಾನ್ ಅವರು ಕೂಡ ಇದೇ ರೀತಿ ಜನರ ಟೀಕೆಗೆ ಗುರಿ ಆಗಿದ್ದಾರೆ. ‘ಆಪರೇಷನ್ ಸಿಂದೂರ್’ ಬಗ್ಗೆ ಯಾವುದೇ ಹೇಳಿಕೆ ನೀಡಿದ ಅವರು ಈಗ ಕದನ ವಿರಾಮ ಘೋಷಣೆ ಆಗಿದ್ದಕ್ಕೆ ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ಅವರ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ. ಜನರು ಟೀಕೆ ಮಾಡಿದ ಬಳಿಕ ಕದನ ವಿರಾಮದ ಪೋಸ್ಟ್ ಅನ್ನು ಸಲ್ಮಾನ್ ಖಾನ್ ಡಿಲೀಟ್ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:50 pm, Sun, 11 May 25